ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ಇದೇ ಸಂದರ್ಭದಲ್ಲಿ ಉಪಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಅವರು ಹೊನ್ನಾಳಿ ಕ್ಷೇತ್ರದ ಚುನಾವಣೆ ವ್ಯವಸ್ಥೆಗಳ ಕುರಿತು ಜಿಲ್ಲಾಧಿಕಾರಿಗೆ ವಿವರಿಸಿದರು.
ಜಿಲ್ಲಾಧಿಕಾರಿಗಳು ಸುದ್ದಿಗಾರರೊದಿಗೆ ಮಾತನಾಡಿ, ಕಳೆದ ಬಾರಿ ಅಂದರೆ 2019ರ ಲೋಕಸಭಾ ಚುನಾವಣೆಯಲ್ಲಿ 72.96ರಷ್ಟು ಮತದಾನವಾಗಿದ್ದು, ಆದರೆ ಈ ಬಾರಿ ಲೋಕಸಭಾಕ್ಷೇತ್ರದ ಎಲ್ಲಾ ತಾಲೂಕುಗಳಲ್ಲಿ ಸಾಕಷ್ಟು ಸ್ವೀಪ್ ಮತ್ತು ಇತರೆ ಕಾರ್ಯಕ್ರಮಗಳ ಮೂಲಕ ಮತದಾನ ಜಾಗೃತಿ ಮಾಡಿದ್ದು ಈ ಬಾರಿ ಇನ್ನೂ ಹೆಚ್ಚಿನ ರೀತಿಯಲ್ಲಿ ಮತದಾನವಾಗುವ ನೀರಿಕ್ಷೆ ಇದೆ ಎಂದು ಹೇಳಿದರು.ಈ ಬಾರಿ ಜಿಲ್ಲೆಯಲ್ಲಿ ಒಟ್ಟು 179244 ಜನ ಮತದಾರರಿದ್ದು, 35 ಸಖಿ,67ವಿಕಲಚೇತನ, 7ಯುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು 389 ಕ್ರಿಟಿಕಲ್ ಮತ್ತು 11 ವಲ್ನರಬಲ್ ಮತಗಟ್ಟೆ ಗುರುತಿಸಲಾಗಿದೆ. ಮತದಾರರು ಸುರಕ್ಷಿತವಾಗಿ ಹಾಗೂ ನಿರ್ಭಿತಿಯಿಂದ ಮತದಾನ ಮಾಡುವಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಆಗುವುದಕ್ಕೆ ಸಕಲ ಸಿದ್ಧತೆಗಳನ್ನು ನಮ್ಮ ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಒಂದು ವೇಳೆ ಅಶಾಂತಿ ನಿರ್ಮಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಕ್ಕೆ ಸೂಚಿಸಲಾಗಿದೆ ಎಂದು ಮಾಧ್ಯಮದವರಿಗೆ ತಿಳಿಸಿದ ಅವರು, ಪ್ರತಿ ಮತಗಟ್ಟೆಗಳಿಗೆ ಒಂದು ಮೆಡಿಕಲ್ ಕಿಟ್ ಕೂಡ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೊನ್ನಾಳಿ ಮಸ್ಟರಿಂಗ್ ಕೇಂದ್ರಕ್ಕೆ ಚನ್ನಗಿ ಉಪವಿಭಾಗದ ಡಿವೈಎಸ್ಪಿ ಪ್ರಶಾಂತ್ ಮುನ್ನೂಳ್ ಕೂಡ ಭೇಟಿ ನೀಡಿ ಕಾನೂನು ಸುವ್ಯವಸ್ಥೆ ಪರಿಶೀಲಿಸಿದರು.ಸಹಾಯಕ ಚುನಾವಣಾಧಿಕಾರಿ ವಿ.ಅಭಿಷೇಕ್, ತಹಸೀಲ್ದಾರ್ ಪುರಂದರಹೆಗ್ಡೆ, ನ್ಯಾಮತಿ ತಹಸೀಲ್ದಾರ್ ಫಿರೋಜ್ ಷಾ, ಗ್ರೇಡ್ 2 ತಹಸೀಲ್ದಾರ್ ಗೋವಿಂದಪ್ಪ, ಸುರೇಶ್, ಸ್ವೀಪ್ ಕಮಿಟಿ ತಾಪಂ ಇಒ ಗಳಾದ ಸುಮಾ ಹಾಗೂ ರಾಘವೇಂದ್ರ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಮುದ್ದುರಾಜು, ರವಿಕುಮಾರ್, ಪುರಸಭಾ ಮುಖ್ಯಾಧಿಕಾರಿ ನಿರಂಜನಿ, ರಾಜಸ್ವ ನಿರೀಕ್ಷಕ ಸಂತೋಷ್, ರವಿ, ದಿನೇಶ್, ಬಿಇಒ ನಂಜರಾಜ್ ಹಾಗೂ ಇತರರು ಇದ್ದರು.