ನೀಟ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆ

KannadaprabhaNewsNetwork |  
Published : May 08, 2026, 03:00 AM IST
ನೀಟ್ ಪರೀಕ್ಷೆಯಲ್ಲಿ ಎಕ್ಸಲಂಟ್ ವಿದ್ಯಾರ್ಥಿ ಚನ್ನವೀರೇಶ ಕುಂಬಾರವರಿಗೆ 700 ಅಂಕಗಳ ನಿರೀಕ್ಷೆ | Kannada Prabha

ಸಾರಾಂಶ

ಈ ಬಾರಿಯೂ ನೀಟ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರ‍್ಯಾಂಕ್‌ಗಳನ್ನು ನೀಡುವ ಮೂಲಕ ಪಾಲಕರು ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಗಟ್ಟಿಗೊಳಿಸುತ್ತೇವೆ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಈ ಬಾರಿಯೂ ನೀಟ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರ‍್ಯಾಂಕ್‌ಗಳನ್ನು ನೀಡುವ ಮೂಲಕ ಪಾಲಕರು ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಗಟ್ಟಿಗೊಳಿಸುತ್ತೇವೆ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ ಕೌಲಗಿ ಭರವಸೆ ನೀಡಿದರು.

ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜು ಪ್ರಾರಂಭಗೊಂಡಾಗಿನಿಂದಲೂ ಸಾಧನೆಯ ಕೀರ್ತಿ ಪಥಾಕೆ ಹಾರಿಸುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮಾಡುವಲ್ಲಿ ಹೆಸರಾಗಿರುವ ನಮ್ಮ ಸಂಸ್ಥೆಯು ಮಕ್ಕಳಿಗೆ ಬೇಕಾಗಿರುವ ಶೈಕ್ಷಣಿಕ ಮೂಲಭೂತವಾದ ಅಂಶಗಳನ್ನು ತಿಳಿಸಿಕೊಟ್ಟು ಅವರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲಾಗುತ್ತದೆ ಎಂದರು.ಶ್ರೀಧರ ದೊಡಮನಿ ವಿದ್ಯಾರ್ಥಿಯು ನೀಟ್ ಹಾಗೂ ಕೆ-ಸಿಇಟಿ ನಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದು ಸಾಧನೆಯ ಹಾದಿಯಲ್ಲಿ ಮೊದಲ ಹೆಜ್ಜೆ ಗಟ್ಟಿಯಾಗಿ ಊರಿದ್ದನು. ನಂತರದ ಬ್ಯಾಚ್‌ಗಳಲ್ಲಿ ಬಂದಂತ ಅತ್ಯುತ್ತಮ ಫಲಿತಾಂಶವು ಜನತೆಗೆ ಎಕ್ಸಲಂಟ್ ಮೇಲಿದ್ದ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿತು. ಕಳೆದ ಬಾರಿ ವಿದ್ಯಾರ್ಥಿ ಅಭಿಷೇಕ ಬಂಡಾರಕವಟೆ ನೀಟ್ ಪರೀಕ್ಷೆಯಲ್ಲಿ 700 ಅಂಕಗಳನ್ನು ಪಡೆದುಕೊಂಡು ಕಾಲೇಜಿಗೆ ಮತ್ತೊಂದು ಗರಿ ಸೇರುವಂತೆ ಮಾಡಿದ್ದ. ನಂತರದ ಫಲಿತಾಂಶದಲ್ಲಿ ಅಶ್ವಿನಿ ಯಕ್ಕುಂಡಿ ಕೆಸಿಇಟಿ ಅಗ್ರಿಯಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್ ಹಾಗೂ ವೆಟರ್‌ನರಿಯಲ್ಲಿ ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದುಕೊಂಡಿದ್ದು, ಕಾವ್ಯಾ ಶಿಂಧೆ ಅಗ್ರಿಯಲ್ಲಿ ರಾಜ್ಯಕ್ಕೆ 5ನೇ ರ‍್ಯಾಂಕ್ ಹಾಗೂ ವೆಟರ್‌ನರಿಯಲ್ಲಿ ರಾಜ್ಯಕ್ಕೆ 10ನೇ ರ‍್ಯಾಂಕ್ ಪಡೆದುಕೊಂಡು ಸಾಧನೆಗೈದಿದ್ದರು. ಅಲ್ಲದೆ 102 ಎಂಬಿಬಿಎಸ್, 79 ಬಿಎಎಂಎಸ್, 14 ಬಿಡಿಎಸ್ ಸೇರಿದಂತೆ 195 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಸೀಟು ಗಿಟ್ಟಿಸಿಕೊಂಡು ವೈದ್ಯರಾಗುವ ಕನಸನ್ನು ಈಡೇರಿಸಿಕೊಂಡಿದ್ದಾರೆ ಎಂದು ಸಂತಷ ವ್ಯಕ್ತಪಡಿಸಿದರು.

ಈ ಬಾರಿಯ ನೀಟ್ ಪರೀಕ್ಷೆಯನ್ನು ಮುಗಿಸಿದ ವಿದ್ಯಾರ್ಥಿಗಳ ಕೀ ಉತ್ತರಗಳಿಗೆ ಅನುಗುಣವಾಗಿ ನೋಡಿದರೇ ಚನ್ನವೀರೇಶ ಕುಂಬಾರ 700, ಸಲ್ಮಾನ್‌ ಗೋಡಿಹಾಳ 685, ಸಾಗರ ಬನಹಟ್ಟಿ 682, ಗಂಗಾಧರ ಮುತ್ತಗಿ 680, ಅನುಷ್ಕಾ 662, ಸುಮಿತ.ಎ.ಪಿ 657, ಬಸವನಗೌಡ ಬೈರವಾಡಗಿ 645, ಪ್ರತೀಕ ಚವ್ಹಾಣ 640, ಸ್ವಾತಿ ಮಲೆದ 600 ಅಂಕಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮತ್ತೊಂದು ಮೈಲಿಗಲ್ಲು ನೆಡಲು ಸಜ್ಜು!

ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯು ಸೈನಿಕ, ನವೋದಯ, ಕಿತ್ತೂರು ಶಾಲೆಗಳ ಸ್ಫರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಿಂದ ಪ್ರಾರಂಭಗೊಂಡು ಇಂದು ಉತ್ತರ ಕರ್ನಾಟಕ ಭಾಗದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿ ನಿಂತಿದೆ. ತನ್ನ ಪರಿಣಾಮಕಾರಿ ಬೋಧನೆ ಹಾಗೂ ಅತ್ಯುತ್ತಮವಾದ ಫಲಿತಾಂಶದ ಮೂಲಕ ಮನೆ ಮಾತಾಗಿರುವ ಎಕ್ಸಲಂಟ್ ಸಂಸ್ಥೆ ಇಂದು ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದುಕೊಂಡು ಮತ್ತೊಂದು ಮೈಲಿಗಲ್ಲು ನೆಡಲು ಸಜ್ಜಾಗಿದೆ. ಈ ಬಾರಿ ನೀಟ್ ಪರೀಕ್ಷೆಯ ನಂತರದಲ್ಲಿ ವಿದ್ಯಾರ್ಥಿಗಳು ಕೀ ಉತ್ತರವನ್ನು ಪರಿಶೀಲಿಕೊಂಡಿದ್ದು, ನಿರೀಕ್ಷೆಗಳು ಗರಿಗೆದರಿವೆ.

ಉತ್ತರ ಕರ್ನಾಟಕ ಭಾಗದಲ್ಲೇ ಹೆಸರಾದ ನಮ್ಮ ಸಂಸ್ಥೆಯಲ್ಲಿ ನುರಿತ ಉಪನ್ಯಾಸಕ ಬಳಗವಿದ್ದು, ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಬೇಕಾಗುವ ಶೈಕ್ಷಣಿಕ ವಾತಾವರಣವಿದೆ. ಮಗುವಿನ ಕನಸಿಗೆ ಕೈ ಜೊಡಿಸಿ ನಡೆದಾಗ ಉತ್ತಮ ಭವಿಷ್ಯ ಮಗುವಿನದಾಗಿರುತ್ತದೆ ಎನ್ನುವುದನ್ನು ನಂಬಿರುವ ನಮ್ಮ ಸಂಸ್ಥೆ ನೀಟ್, ಜಿಇಇ, ಕೆ-ಸಿಇಟಿ, ಎನ್‌ಡಿಎಗೆ ಬೇಕಾಗುವ ತರಬೇತಿ ನೀಡುತ್ತಿದೆ.

-ಬಸವರಾಜ ಕೌಲಗಿ, ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತರ ಕರ್ನಾಟಕಕ್ಕೆ ರೈಲ್ವೆ ಸೌಲಭ್ಯ ಇಲ್ಲದಿರೋದು ವಿಷಾದನೀಯ: ಮುತ್ತುರಾಜ್‌
₹16,367.83 ಕೋಟಿ ವಾರ್ಷಿಕ ಸಾಲ ಯೋಜನೆ ಬಿಡುಗಡೆ