ಸಮೀಕ್ಷೆ ಅವಧಿ ಡಿಸೆಂಬರ್‌ವರೆಗೆ ವಿಸ್ತರಿಸಿ: ಸೇವಾಲಾಲ್‌ ಸ್ವಾಮೀಜಿ

KannadaprabhaNewsNetwork |  
Published : Jun 25, 2025, 12:32 AM ISTUpdated : Jun 25, 2025, 12:33 AM IST
ಕ್ಯಾಪ್ಷನ24ಕೆಡಿವಿಜಿ33 ಸಮೀಕ್ಷಾ ಕಾರ್ಯವನ್ನು ಡಿಸೆಂಬರ್ ವರೆಗೆ ವಿಸ್ತರಿಸುವಂತೆ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. | Kannada Prabha

ಸಾರಾಂಶ

ಒಳಮೀಸಲಾತಿಗೆ ಸಮೀಕ್ಷೆ ನಡೆಸುತ್ತಿರುವ ರಾಜ್ಯ ಸರ್ಕಾರ ಸಮೀಕ್ಷಾ ಕಾರ್ಯವನ್ನು ಈ ವರ್ಷದ ಡಿಸೆಂಬರ್‌ವರೆಗೆ ವಿಸ್ತರಿಸಬೇಕು. ಇಲ್ಲವಾದರೆ ಲಂಬಾಣಿ ಜನಾಂಗದವರ ಜನಸಂಖ್ಯೆಯನ್ನು ಶೇ.20ರಷ್ಟು ಹೆಚ್ಚಳ ಮಾಡಬೇಕೆಂದು ಬಣಜಾರ ಸಮುದಾಯದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ ಒಳಮೀಸಲಾತಿಗೆ ಸಮೀಕ್ಷೆ ನಡೆಸುತ್ತಿರುವ ರಾಜ್ಯ ಸರ್ಕಾರ ಸಮೀಕ್ಷಾ ಕಾರ್ಯವನ್ನು ಈ ವರ್ಷದ ಡಿಸೆಂಬರ್‌ವರೆಗೆ ವಿಸ್ತರಿಸಬೇಕು. ಇಲ್ಲವಾದರೆ ಲಂಬಾಣಿ ಜನಾಂಗದವರ ಜನಸಂಖ್ಯೆಯನ್ನು ಶೇ.20ರಷ್ಟು ಹೆಚ್ಚಳ ಮಾಡಬೇಕೆಂದು ಬಣಜಾರ ಸಮುದಾಯದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ನುಡಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಸಮೀಕ್ಷೆ ಅವಧಿಯನ್ನು ವಿಸ್ತರಿಸಲು ಆಗದಿದ್ದರೆ ಜಾತಿ ಮೀಸಲಾತಿ ಕೈ ಬಿಟ್ಟು ಕೆನೆಪದರ ಮೀಸಲಾತಿ ಜಾರಿಗೆ ತರಬೇಕು. ಇದರಿಂದಾಗಿ ಸಾಮಾಜಿಕ ನ್ಯಾಯ, ಸಮಾನತೆ ಸಿಗಲಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಮೀಸಲಾತಿ ಸಮೀಕ್ಷೆ ಕಾರ್ಯವನ್ನು ದೀಪಾವಳಿ ವೇಳೆ ಮಾಡಿದರೆ, ಬೇರೆ ರಾಜ್ಯ, ಬೇರೆ ಜಿಲ್ಲೆಗಳಿಗೆ ಕೆಲಸಕ್ಕಾಗಿ ವಲಸೆ ಹೋಗಿರುವ ಬಣಜಾರ ಸಮುದಾಯದ ಜನರು ಸಂಪೂರ್ಣವಾಗಿ ಸಿಗಲಿದ್ದಾರೆ. ಇಲ್ಲವಾದರೆ ಸಮೀಕ್ಷೆ ಅಪೂರ್ಣ ಆಗಲಿದೆ ಎಂದರು.

ಜಾತಿ ಜನಗಣತಿಯಲ್ಲಿ ಲೋಪದೋಷ:

ರಾಜ್ಯದಲ್ಲಿ ಈಗ ನಡೆಸುತ್ತಿರುವ ಜಾತಿ ಜನಗಣತಿ ಲೋಪದೋಷಗಳಿಂದ ಕೂಡಿದೆ. ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚು ಬಣಜಾರ ಸಮುದಾಯದ ಜನರು ಇದ್ದಾರೆ. ಆದರೆ, ಸರ್ಕಾರ ಈಗ ನಿಗದಿಪಡಿಸಿರುವ ಸಮಯ ಗಣತಿಗೆ ಸಾಲುವುದಿಲ್ಲ. ಆನ್‌ಲೈನ್‌ನಲ್ಲಿ ನೋಂದಣಿ ಮಾಡುವಂತೆ ಸರ್ಕಾರ ತಿಳಿಸಿದೆ. ಆದರೆ, ನಮ್ಮ ಸಮುದಾಯದ ಜನರು ಅಶಿಕ್ಷಿತರಾದ ಕಾರಣ ತಂತ್ರಾಂಶದ ಬಗ್ಗೆ ಹೆಚ್ಚಾಗಿ ಮಾಹಿತಿ ಇಲ್ಲ. ಶೇ.10ರಿಂದ 15ರಷ್ಟು ಮಾತ್ರ ನಗರ ಪ್ರದೇಶಗಳಲ್ಲಿದ್ದು, ಇನ್ನುಳಿದವರು ತಾಂಡಗಳಲ್ಲಿ ಇದ್ದಾರೆ. ಉಳಿದವರು ಜೀವನ ನಡೆಸಲು ವಲಸೆ ಹೋಗಿದ್ದಾರೆ. ಆದಕಾರಣ ಜಾತಿಗಣತಿ ಸಮೀಕ್ಷೆ ಅವಧಿಯನ್ನು ಡಿಸೆಂಬರ್‌ವರೆಗೂ ಮುಂದುವರಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಮಂಜುನಾಥ್ ನಾಯ್ಕ, ಕುಬೇರ ನಾಯ್ಕ, ಮಂಜಾ ನಾಯ್ಕ, ಆರ್.ಎಲ್.ಶಿವಪ್ರಕಾಶ್, ಮಾರುತಿ ನಾಯ್ಕ, ಶಿವಕುಮಾರ್, ಲಿಂಗರಾಜ ನಾಯ್ಕ ಇತರರು ಇದ್ದರು.

- - -

(ಕೋಟ್‌) ಕೆಲವು ಸಮೀಕ್ಷೆದಾರರು ಬಣಜಾರ ಸಮುದಾಯದ ಜನರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಸಮೀಕ್ಷೆ ಮೂಲ ಉದ್ದೇಶವನ್ನೇ ತಿರುಚುತ್ತಿದ್ದಾರೆ. ಕೆನೆಪದರ ಮೀಸಲಾತಿ ಜಾರಿಗೆ ಬಂದರೆ ಪದೇಪದೇ ಮೀಸಲಾತಿ ಪಡೆಯುವುದು ತಪ್ಪಲಿದೆ.

- ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಬಣಜಾರ ಸಮುದಾಯ

- - -

-24ಕೆಡಿವಿಜಿ33.ಜೆಪಿಜಿ:

PREV

Recommended Stories

ತ್ಯಾಗರಾಜ ಕೋ ಆಪರೇಟಿವ್‌ ಬ್ಯಾಂಕ್‌ನಿಂದ ರಸಪ್ರಶ್ನೆ ಸ್ಪರ್ಧೆ
ಕುತಂತ್ರ-ಅಸೂಯೆಯಿಂದ ಟನಲ್‌ ರಸ್ತೆಗೆ ಬಿಜೆಪಿ ವಿರೋಧ : ಡಿ.ಕೆ.ಸು