ಅತಿರೇಕಾ ಮನೋಭಾವದವರು: ಶಾಸಕಿ ನಯನಾ ಮೋಟಮ್ಮ ತಿರುಗೇಟು

KannadaprabhaNewsNetwork |  
Published : Jul 31, 2025, 12:45 AM IST
ಶಾಸಕಿ ನಯನಾ ಮೋಟಮ್ಮ  | Kannada Prabha

ಸಾರಾಂಶ

ಚಿಕ್ಕಮಗಳೂರು, ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿದ್ದು, ವೈರಲ್‌ ಆಗಿದ್ದು, ಇದಕ್ಕೆ ತಿರುಗೇಟು ನೀಡಿದ್ದಾರೆ.

’ನಾನು ಹೇಗೆ ಅಂತ ಅರ್ಥ ಮಾಡಿಕೊಳ್ಳಲಾಗದ ಕೆಲವರ ಸ್ಥಿತಿ ಕಂಡು ನನಗೆ ಆಶ್ಚರ್ಯ ಆಗುತ್ತೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿದ್ದು, ವೈರಲ್‌ ಆಗಿದ್ದು, ಇದಕ್ಕೆ ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಈ ರೀತಿಯಲ್ಲಿ ಬರೆದುಕೊಂಡಿದ್ದಾರೆ. ’ನಾನು ಹೇಗೆ ಅಂತ ಅರ್ಥ ಮಾಡಿಕೊಳ್ಳಲಾಗದ ಕೆಲವರ ಸ್ಥಿತಿ ಕಂಡು ನನಗೆ ಆಶ್ಚರ್ಯ ಆಗುತ್ತೆ. ಇವರೇನು ಲಿಬರಲ್‌ಹಾ? ಇಲ್ಲಾ ಪಾರಂಪರಿಕಳಾ? ಈ ಪ್ರಶ್ನೆ ಹಲವರ ತಲೆಕೆಡಿಸಿದೆ. ಆಧುನಿಕತೆಗೆ ಹೊಂದಿಕೊಂಡಂತೆ ನಾ ಕಾಣಿಸಿದ್ರೆ ಅತಿರೇಕಾ ಮನೋಭಾವದವರು ನನ್ನ ವೈಯಕ್ತಿಕ ಪೋಟೊ, ವೀಡಿಯೋಗಳನ್ನು ಹರಿಬಿಟ್ಟು ಟೀಕೆ ಮಾಡ್ತಾರೆ. ಅದೇ ರೀತಿ ನಾನು ಕೇಸರಿ ಶಾಲು ಹಾಕಿದ್ರೆ ಕೆಲ ಲಿಬರಲ್ಸ್‌ಗಳು ನನ್ನ ಉದ್ದೇಶ ಅಥವಾ ನಿಷ್ಟೆಯನ್ನು ವಿಚಿತ್ರವಾಗಿ ಪ್ರಶ್ನೆ ಮಾಡುತ್ತಾರೆ.’

’ವಿಶೇಷ ಅಂದರೆ ಇವರ್‍ಯಾರು ನನಗೆ ಬೆಂಬಲ ನೀಡಲ್ಲ ನೋಡಿ. ಈ ಯಾವುದೇ ವಿಷಯಗಳ ಬಗ್ಗೆ ಬೇಸರ ಅಥವಾ ಗೊಂದಲ ನನಗಿಲ್ಲ. ನನ್ನ ಆಯ್ಕೆಗಳ ಬಗ್ಗೆ ನನಗೆ ಸ್ಪಷ್ಟತೆ ಇದೆ. ನಿಮ್ಮಲೊಬ್ಬರು ಸಹ ನನ್ನನ್ನು ಬಯಸಿ ಆ ಚೌಕಟ್ಟಿನಲ್ಲಿಡಲು ಪ್ರಯತ್ನ ಮಾಡಬೇಡಿ ನಾನು ಅದಕ್ಕೆ ಸರಿಹೊಂದಲ್ಲ’ ಎಂದು ಬರೆದುಕೊಂಡಿದ್ದಾರೆ.

ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿರುವ ನಯನಾ ಮೋಟಮ್ಮ, ನಾನು ಕಾಂಗ್ರೆಸ್‌ ಪಕ್ಷದ ಶಾಸಕಿ, ನನ್ನ ತಾಯಿಯೂ ಕೂಡ ಇಷ್ಟು ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷದಲ್ಲಿದ್ದವರು. ನಾನು ಕಾರ್ಯಕ್ರಮದಲ್ಲಿ ಸಹಜವಾಗಿಯೇ ಮಾತನಾಡಿದ್ದೇನೆ. ಆದರೆ, ಅದನ್ನು ಬೇರೆ ಅರ್ಥದಲ್ಲಿ ಅರ್ಥೈಸಿಕೊಂಡು ವೈರಲ್‌ ಮಾಡಿದ್ದಾರೆ. ಅವರುಗಳು ಅತಿರೇಕಾದ ಮನಸ್ಥಿತಿಯವರು ಎಂದು ಹೇಳಿದ್ದಾರೆ.

ನಯನಾ ಮೋಟಮ್ಮ ಹೇಳಿದ್ದೇನು ?

’ಹಿಂದೂವಾಗಿ, ದಲಿತೆಯಾಗಿ ಮೂಡಿಗೆರೆಯಲ್ಲಿ ಜನಿಸಿದ್ದೇನೆ. ಮುಂದೆ ಬಿಜೆಪಿಗೆ ಹೋಗುತ್ತೇನೋ, ಕಾಂಗ್ರೆಸ್ಸಿನಲ್ಲೇ ಉಳಿಯುತ್ತೇನೋ, ಬಿಎಸ್‌ಪಿ ಅಥವಾ ಎಸ್‌ಡಿಪಿಐ ಸೇರುತ್ತೇನೋ ಎಂಬ ಪ್ರಶ್ನೆಗೆ ಮೂರು ವರ್ಷ ಕಾಯೋಣ’.

‘ಇಂದು ಕೇಸರಿ ಶಾಲು ಹಾಕಿ ಬಂದಿದ್ದೇನೆ. ಪಕ್ಷದ ಕಾರ್ಯಕರ್ತರೂ ಬಂದಿದ್ದಾರೆ. ಈ ಬಗ್ಗೆ ಹಲವರಿಗೆ ಪ್ರಶ್ನೆಗಳಿವೆ. ನದಿ ಎಂದರೆ ಕಾಂಗ್ರೆಸ್ಸಾ, ದಡ ಎಂದರೆ ಬಿಜೆಪಿಯಾ ಎಂಬ ಶಂಕೆ ಬೇಡ’ ‘ನಾನು ಗಣಪತಿಗಾಗಿ, ಧರ್ಮಕ್ಕಾಗಿ ಬಂದಿದ್ದೇನೆ. ಶಾಸಕಿಯಾಗಿ ಪಕ್ಷ ಪ್ರತಿನಿಧಿಸುವುದು ಆ ನಂತರ, ಈಗ ಗಣಪತಿ ಸಮಿತಿಯ ಕಾರ್ಯಾಧ್ಯಕ್ಷೆಯಾಗಿ ಇಲ್ಲಿಗೆ ಬಂದಿದ್ದೇನೆ. ಆದ್ದರಿಂದ ಯಾವ ಪಕ್ಷದವರಿಗೂ ಪ್ರಶ್ನೆಗಳು ಉಳಿಯಬಾರದು’ .

‘ಕಾಂಗ್ರೆಸ್ ಶಾಸಕಿಯಾಗಿಯೂ ನಿಂತಿದ್ದೇನೆ. ಅದನ್ನು ಗುರುತಿಸಿಕೊಳ್ಳಲೇಬೇಕು. ಅದರ ಜೊತೆಗೆ ಸಾಕಷ್ಟು ಅಸ್ತಿತ್ವಗಳು ಇವೆ. ಅದನ್ನೆಲ್ಲಾ ಸೇರಿಸಿಕೊಂಡು ನಯನಾ ಮೋಟಮ್ಮ ಆಗಿದ್ದೇನೆ’.

ವೈರಸ್‌ ಆಗಿರುವ ಸುದ್ದಿಗೆ ಶಾಸಕಿ ನಯನಾ ಮೋಟಮ್ಮ ಅವರು ಫೇಸ್‌ ಬುಕ್‌ನಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ಊಹಾ ಪೋಹಕ್ಕೆ ತೆರೆ ಎಳೆದಿದ್ದಾರೆ.ಪೋಟೋ ಫೈಲ್‌ ನೇಮ್‌ 30 ಕೆಸಿಕೆಎಂ 4

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ