ಕನ್ನಡಪ್ರಭ ವಾರ್ತೆ ಕಾರ್ಕಳಆಳ್ವಾಸ್ ವಿರಾಸತ್‌ನಲ್ಲಿ ಈ ಬಾರಿ 2614 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರಗಳ ಪ್ರದರ್ಶನ ನಡೆಯುತ್ತಿದ್ದು, ಒಂದೊಂದು ಛಾಯಾಚಿತ್ರಗಳೂ ಅದ್ಭುತವಾಗಿದ್ದು, ಜನರನ್ನು ಸೆಳೆಯುತ್ತಿವೆ. ಪ್ರಕೃತಿ ಚಿತ್ರಣ, ವ್ಯಕ್ತಿ ಚಿತ್ರಣ, ಸ್ಟ್ರೀಟ್ ಫೋಟೊಗ್ರಫಿ ಹಾಗೂ ಭೌಗೋಳಿಕ ಚಿತ್ರಣ, ವನ್ಯಜೀವಿ, ಪಕ್ಷಿ, ಪರಿಸರ, ಮಾನವ, ಉದ್ಯಾನವನ, ಹೂತೋಟಗಳ ವರ್ಣಮಯ ಚಿತ್ರಗಳುನು ಪ್ರದರ್ಶನವಾಗುತ್ತಿವೆ. ಫೋಟೋ ಜರ್ನಲಿಸಿಸ್ಟ್ ಅಸೋಸಿಯೇಷನ್, ಸೆವೆನ್ ಶೇಡ್ಸ್, ಲಕ್ಷ್ಮೀ ಮೆಷಿನ್ ವರ್ಕ್ಸ್ ಕೊಯಮತ್ತೂರು, ಯೂತ್ ಫೋಟೋಗ್ರಫಿ ಸೊಸೈಟಿ ಬೆಂಗಳೂರು ಸೇರಿದಂತೆ ಅಂತಾರಾಷ್ಟ್ರೀಯ ಛಾಯಗ್ರಾಹಕರು ಭಾಗವಹಿಸುತ್ತಿದ್ದಾರೆ. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಖ್ಯಾತ ಅಂತಾರಾಷ್ಟ್ರೀಯ ಛಾಯಾಗ್ರಾಹಕ ಉಡುಪಿ ದಾಮೋದರ್ ಸುವರ್ಣ, ಸಂದೀಪ್ ಕಾಮತ್, ಬಾಗಲಕೋಟೆಯ ಇಂದ್ರ ಕುಮಾರ್ ದಸ್ತನ್ನವರ್, ಎಂ.ಎನ್. ಜಯಕುಮಾರ್, ಜಯಂತ್ ಶರ್ಮ, ಹರಿ ಸೋಮಶೇಖರ್, ವಿಜಯಕುಮಾರ್, ಅವಿನಾಶ್ ಕಾಮತ್, ಡಾ. ಅಜಿತ್ ಹುಳಿಗೋಲ್, ಡಾ. ಪ್ರಮೋದ್ ಜಿ. ಶಾನುಭೋಗ್, ಗಿರಿ ಕವಳೆ, ಎಚ್. ಸತೀಶ್ , ಮನೋಜ್ ಸಿಂದಗಿ, ಆಶಾ ಜಯಕುಮಾರ್, ಆರ್. ಅನಂತಮೂರ್ತಿ, ಕೆ.ಪಿ. ಮಾರ್ಟಿನ್, ಜಿನೇಶ್ ಪ್ರಸಾದ್, ಅಶೋಕ ಮನ್ಸೂರ್, ರವಿ ಕಿರಣ್ ಬಾದಾಮಿ, ಪ್ರಮೋದ್ ಚಕ್ರವರ್ತಿ ಸ್ಟೀಫನ್, ನವಿನ್ ಕುಮಾರ್, ಸಂತೋಷ ವೈ. ಹಂಜಗಿ, ಎಂ.ಸಿ. ಶೇಖರ್ ಹೈದರಾಬಾದ್, ಡಾ. ಅಕ್ತರ್ ಹುಸೇನ್, ಕೃಪಾಕರ ಸೇನಾನಿ, ಅಶ್ವಥ್ ಕುಮಾರ್ ಟಿ , ಸತೀಶ್ ಲಾಲ್ ಅಂದೇಕರ್, ಯಜ್ಞಾ ಮಂಗಳೂರು, ಆಸ್ಟ್ರೋ ಮೋಹನ್ ,ಕೀರ್ತಿ ಮಂಗಳೂರು ಸೇರಿದಂತೆ ಅನೇಕ ಕಲಾವಿದರು ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಕಂಬಳದ ಝಲಕ್ : ಬೆಂಗಳೂರು ಕಂಬಳ ಹಾಗೂ ಬಾರಾಡಿ ಕಂಬಳ ಬಳಿಕ ಡಿ.17ರಂದು ಒಂಟಿಕಟ್ಟೆ ಕೋಟಿ ಚೆನ್ನಯ್ಯ ಕಂಬಳ ನಡೆಯಲಿದೆ. ಮೂಡುಬಿದಿರೆ ಆಳ್ವಾಸ್ ವಿರಾಸತ್ ಹಾಗೂ ಕಂಬಳವು ಏಕಕಾಲದಲ್ಲಿ ನಡೆಯುತ್ತಿರುವ ಕಾರಣ ಭಾರಿ ಜನ ಸೇರುವ ನಿರೀಕ್ಷೆಯಿದೆ. ಈ ಬಾರಿಯ ವಿರಾಸತ್‌ನಲ್ಲಿ 2000ಕ್ಕೂ ಹೆಚ್ಚು ಛಾಯಾಚಿತ್ರಗಳ ಪ್ರದರ್ಶನ ಕ್ಕೆ ಖುಷಿ ತಂದಿದೆ. ಮೋಹನ್ ಆಳ್ವರು ಕಲೆ, ಸಂಸ್ಕೃತಿಗೆ ನೀಡುವ ಪ್ರೊತ್ಸಾಹ ಮೆಚ್ಚುವಂಥದ್ದು- ದಾಮೋದರ್ ಸುವರ್ಣ ಉಡುಪಿ, ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ವಿಜೇತರು
ಫೋಟೋ ಕೇವಲ ಒಂದು ಚಿತ್ರ ಮಾತ್ರವಲ್ಲ. ಅದರಲ್ಲಿ ಆ ಛಾಯಾಗ್ರಾಹಕನ ಭಾವ ಅಡಕವಾಗಿರುತ್ತದೆ. ಆತನ ಕಥೆಗಳನ್ನು ಚಿತ್ರರೂಪದಲ್ಲಿ ಸೆರೆಹಿಡಿದಿರುತ್ತಾನೆ. ತನ್ನ ಭಾವನೆಗಳನ್ನು ಸೆರೆಹಿಡಿಯಲು ಮತ್ತು ನೆನಪುಗಳನ್ನು ಚಿತ್ರರೂಪಕ್ಕೆ ಇಳಿಸಲು ಛಾಯಾಗ್ರಹಣದ ಶಕ್ತಿಯನ್ನು ಪ್ರೋತ್ಸಾಹಿಸುತ್ತದೆ- ಇಂದ್ರಕುಮಾರ್ ದಸ್ತನ್ನವರ್ , ಖ್ಯಾತ ಛಾಯಾಗ್ರಾಹಕ ಬಾಗಲಕೋಟಛಾಯಾಚಿತ್ರಗ ಪ್ರದರ್ಶನ ಬಹಳಷ್ಟು ಖುಷಿ ತಂದುಕೊಟ್ಟಿತು. ಅದ್ಭುತ ಫೋಟೋಗ್ರಫಿ- ಸಫೀಯಾ ಮೂಡುಬಿದಿರೆ ಛಾಯಚಿತ್ರ ಫಲಿತಾಂಶ: ತೀರ್ಪುಗಾರರ ವಿಭಾಗದಲ್ಲಿ ಇಟಲಿಯ ಗ್ಲೊವಾನಿ ಪ್ಲೆಸ್‌ಕ್ಯು, ಚೀನಾದ ಹೆಕ್ಟೋಯಾನ್ ಲಿಯಾಂಗ್ ಪ್ರಶಸ್ತಿ ಪಡೆದರು. ಬೆಸ್ಟ್ ಆಕ್ಷನ್ ಪೋಟೊ ವಿಭಾಗದಲ್ಲಿ ಥೈವಾನ್‌ನ ಮೌ ಚೀಸ್ ಯುವಾನ್, ಬೆಸ್ಟ್ ಮೈಕ್ರೋ ಪೊಟೋ ವಿಭಾಗದಲ್ಲಿ ಬೆಲ್ಜಿಯಂನ ಡ್ರೆ ವ್ಯಾನ್ ಮೆನ್‌ಸಿಲ್, ನೇಚರ್ ವಿಭಾಗದಲ್ಲಿ ನಾರ್ವೆಯ ವೇದ್ ಅಪ್‌ಸಿಮಗ್, ಚೇರ್‌ಮೆನ್ ಚಾಯಿಸ್ ವಿಭಾಗದಲ್ಲಿ ಸೌತ್ ಕೋರಿಯಾದ ಚುನ್‌ಮಾಲಿ, ಬರ್ಡ್ ಫೋಟೋ ವಿಭಾಗದಲ್ಲಿ ಹಂಗೇರಿಯಾದ ವೆರೊನಿಕಾ ಸಿರ್ಕಾಸ್, ಬೆಸ್ಟ್ ಸಸ್ತನಿ ಫೋಟೋ ವಿಭಾಗದಲ್ಲಿ ಹಂಗೇರಿಯಾದ ಸೆಬಸ್ಟಿಯೆನ್ ಸಿರ್ಕಾನೊ, ಪ್ರಶಸ್ತಿ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಉತ್ತಮ ಆಕ್ಷನ್ ಫೋಟೋ, ಉತ್ತಮ ಪಕ್ಷಿ ಫೋಟೋ, ಉತ್ತಮ ಸಸ್ತನಿ ಫೋಟೋ ಸೇರಿದಂತೆ ಹಲವು ವಿಭಾಗದಲ್ಲಿ ಸ್ಪರ್ಧೆ ನಡೆದಿದ್ದು, ಬೆಂಗಳೂರಿನ ಮದುಸೂಧನ್ ಅವರ ಹದ್ದಿನ ಹಸಿವು ಫೋಟ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಜಿತ್ ಅವರ ಹುಲಿಮರಿಗಳ ನದಿನೀರಿನ ಆಟ ಛಾಯಾಚಿತ್ರವು ೨ನೇ ಬಹುಮಾನ ಪಡೆದುಕೊಂಡಿದೆ.