ಕಣ್ಣಿನ ಸುರಕ್ಷಿತೆ ಮೊದಲ ಆದ್ಯತೆ: ಡಾ. ರಾಜಾ ವೆಂಕಪ್ಪನಾಯಕ

KannadaprabhaNewsNetwork | Published : Jun 9, 2024 1:35 AM

ಸಾರಾಂಶ

ಸುರಪುರ ತಾಲೂಕು ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಬೃಹತ್ ಪ್ರಮಾಣದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಟಿಎಚ್‌ಒ ಡಾ. ಆರ್.ವಿ. ನಾಯಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನಲ್ಲಿರುವ ಕಣ್ಣಿನ ಸಮಸ್ಯೆ ಇರುವ 400ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ. ಎರಡು ದಿನಗಳಲ್ಲಿ ಆಸ್ಪತ್ರೆಯಲ್ಲಿ ನೋಂದಣಿ ಮಾಡಿಕೊಂಡವರ ಪ್ರತಿಯೊಬ್ಬರ ನೇತ್ರ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುವುದು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ತಿಳಿಸಿದರು.

ನಗರದ ತಾಲೂಕು ಆಸ್ಪತೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಬೃಹತ್ ಪ್ರಮಾಣದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನತೆಯೂ ಕಣ್ಣಿನ ದೃಷ್ಟಿಯು ಪ್ರಮುಖವಾಗಿದ್ದು, ಆಪರೇಷನ್ ಮಾಡಿಸಿಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಅಪಾರ ಪ್ರಮಾಣದಲ್ಲಿ ರೋಗಿಗಳು ಆಗಮಿಸಿದ್ದಾರೆ. ಸಮಾಧಾನ ಚಿತ್ತದಿಂದ ಇದ್ದು, ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದರು.

ಜನಹಿತ ಜನಹಿತ ಐಕೇರ ಸೆಂಟರ್‌ನ ಸಂಯೋಜಕ, ನಿವೃತ್ತ ಡಿ.ಎಚ್.ಓ. ಬಸಪ್ಪ ಪಟ್ಟದ ಪಾಟೀಲ್ ಮಾತನಾಡಿ, 2008ರಿಂದಲೇ ಉಚಿತ ಶಸ್ತ್ರ ಚಿಕಿತ್ಸೆಯನ್ನು ಬೆಂಗಳೂರಿನ ಜನಹಿತ ಐಕೇರ ಸೆಂಟರ್ ಮಾಡಿಕೊಂಡು ಬರುತ್ತಿದೆ. ಲಕ್ಷಕ್ಕೂ ಹೆಚ್ಚು ಕಣ್ಣಿನ ಆಪರೇಷನ್ ಗಳನ್ನು ಮಾಡಿ ಉಚಿತ ಕನ್ನಡಕ, ಜೌಷಧ ನೀಡುತ್ತೇವೆ. ವೈದ್ಯರ ಸೂಚನೆಯನ್ನು ತಪ್ಪದೇ ರೋಗಿಗಳು ಪಾಲಿಸಬೇಕು. ಡಾ. ಕೃಷ್ಣ ಮೋಹನ ಜಿಂಕಾ, ಡಾ. ಹರಿಪ್ರಸಾದ್, ಡಾ. ಭೀಷ್ಮಾ, ಡಾ. ಅಕ್ಷಯ ಹಾಗೂ ಸಿಬ್ಬಂದಿ 20 ಜನ ಇದ್ದಾರೆ. ಒಂದು ದಿನಕ್ಕೆ 250 ರಿಂದ 300 ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ ಎಂದರು.

ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಮಲ್ಲಪ್ಪ ಕೆ., ಡಾ. ಹರ್ಷವಧನ್, ಡಾ. ಕೃಷ್ಣಮೋಹನ ಜಿಂಕಾ, ಡಾ. ಪವನಕುಮಾರ ಜೋಸಿ, ಡಾ. ಪಂಕಜ್ ಜೋಶಿ, ನರೇಶ ಜೈನ್, ಗೋಪಾಲದಾಸ ಲಡ್ಡಾ, ಸಿದ್ದಲಿಂಗಯ್ಯ ಸ್ವಾಮಿ ಹಾಗೂ ಲಯನ್ಸ್ ಕ್ಲಬ್ ಸದಸ್ಯರಾದ ಡಾ. ಕನಕರೆಡ್ಡಿ, ಪವನಶರ್ಮ, ಮಹೇಶ ಪತ್ತಾರ, ಪ್ರಭು ಪತ್ತಾರ ಸೇರಿದಂತೆ ತಾಲೂಕು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇತರರಿದ್ದರು. 700ಕ್ಕೂ ಹೆಚ್ಚು ಜನರು ಶಸ್ತç ಚಿಕಿತ್ಸೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. 350 ನೇತ್ರ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಭಾನುವಾರ 250ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗುವುದು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಮತ್ತು ಅವರ ಜತೆಗೆ ಬಂದವರಿಗೆ ಆಹಾರ ವ್ಯವಸ್ಥೆ ಮಾಡಲಾಗಿದೆ.

- ಡಾ. ಆರ್.ವಿ. ನಾಯಕ, ತಾಲೂಕು ಅರೋಗ್ಯ ಅಧಿಕಾರಿ, ಸುರಪುರ.

Share this article