ಕನ್ನಡಪ್ರಭ ವಾರ್ತೆ, ತುಮಕೂರು
ರಾಜ್ಯ ಲಾರಿ ಮಾಲೀಕರ ಸಂಘದ ಸಹಕಾರದೊಂದಿಗೆ ಅಪ್ಟೋಮೆಟ್ರಿ ಕಾನ್ಫಿಡೆರಷನ್ ಆಫ್ ಇಂಡಿಯಾ ಫೆಡರೇಶನ್, ರೋಟರಿ ಕ್ಲಬ್, ಕರ್ನಾಟಕ ಅಲೋಕ ವಿಷನ್ ಫೌಂಡೇಶನ್ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆಯ ವೈದ್ಯರು ಕಣ್ಣಿನ ತಪಾಸಣೆ ಮಾಡಿದರು.
ತಪಾಸಣೆಗೊಳಗಾದ ಕಣ್ಣಿನ ಸಮಸ್ಯೆ ಇರುವವರಿಗೆ ಲಾರಿ ಮಾಲೀಕರ ಸಂಘದಿಂದ ಉಚಿತವಾಗಿ ಕನ್ನಡಕ ವಿತರಣೆ ಹಾಗೂ ಕಣ್ಣಿನ ಶಸ್ತ್ರ ಚಿಕಿತ್ಸೆ ಅಗತ್ಯವಿರುವವರಿಗೆ ಚಿಕಿತ್ಸೆಯನ್ನು ಜಿಲ್ಲಾ ಲಾರಿ ಮಾಲಿಕರ ಸಂಘದಿಂದ ಉಚಿತವಾಗಿ ಮಾಡಿಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಟಿ.ಜಿ.ಚನ್ನಬಸವಪ್ರಸನ್ನ ಹೇಳಿದರು.ಹಲವು ಲಾರಿ ಚಾಲಕರು, ಕ್ಲೀನರ್‌ಗಳು ದೃಷ್ಟಿ ದೋಷದಿಂದ ಬಳಲುತ್ತಿದ್ದು ಅವರಿಗೆ ಶಿಬಿರದ ಮೂಲಕ ನೇತ್ರ ತಪಾಸಣೆ ಮಾಡಿ ಚಿಕಿತ್ಸೆ ಕೊಡಿಸಲಾಗುವುದು. ಬಾಲಾಜಿ ಟ್ರಾನ್ಸ್ಪೋರ್ಟ್ಸ್ ಮಾಲೀಕರಾದ ರಘು, ಬಾಲಾಜಿ ಶಿಬಿರಕ್ಕೆ ನೆರವು ನೀಡಿ ಉಪಹಾರ ವ್ಯವಸ್ಥೆ ಮಾಡಿದ್ದಾರೆ ಎಂದರು.
ಸಂಘದ ಉಪಾಧ್ಯಕ್ಷ ಅಶೋಕ್ ಕುಮಾರ್ ಜೈನ್, ಕಾರ್ಯದರ್ಶಿ ಶೌಕತ್ ಉಲ್ಲಾ ಖಾನ್, ಜಂಟಿ ಕಾರ್ಯದರ್ಶಿ ಜಿ.ಎಸ್.ನಾಗಭೂಷಣ ಆರಾಧ್ಯ, ನಿರ್ದೇಶಕರಾದ ಜಿ.ಹೆಚ್.ಪರಮಶಿವಯ್ಯ, ಟಿ.ಆರ್.ಸದಾಶಿವಯ್ಯ, ಟಿ.ಪಿ.ಶಿವಕುಮಾರ್, ಟಿ.ಎಸ್.ಸುರೇಶ್, ಸುರೇಶ್ ಬಾಬು, ಜಿ.ಸಿ.ನಟರಾಜು, ಧಾನ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಯಕೀರ್ತಿ, ಜಿಲ್ಲಾ ಲಾರಿ ಚಾಲಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಮೆಹಬೂಬ್ ಪಾಷಾ, ಹಮಾಲಿಗಳ ಸಂಘದ ಅಧ್ಯಕ್ಷ ಹನುಮಂತಪ್ಪ ಮೊದಲಾದವರು ಭಾಗವಹಿಸಿದ್ದರು.