ಶಾಖಾ ಅಂಚೆ ಕಚೇರಿಗಳಲ್ಲಿ ಅಂತಾರಾಷ್ಟ್ರೀಯ ಪಾರ್ಸೆಲ್ ಬುಕ್ಕಿಂಗ್ ಅವಕಾಶ: ಎಸ್.ಎಸ್.ಶಿರಹಟ್ಟಿ

KannadaprabhaNewsNetwork |  
Published : Oct 28, 2026, 02:00 AM IST
ವಿಭಾಗ ಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಬಹುಮಾನ ವಿತರಿಸಲಾಯಿತು. | Kannada Prabha

ಸಾರಾಂಶ

ಪ್ರತಿ ಶಾಖಾ ಅಂಚೆ ಕಚೇರಿಗಳಲ್ಲಿ ಸಹ ಅಂತಾರಾಷ್ಟ್ರೀಯ ಪಾರ್ಸೆಲ್ ಬುಕ್ಕಿಂಗ್ ಅವಕಾಶ ಕಲ್ಪಿಸಲಾಗುತ್ತಿದೆ. ಇದನ್ನು ಗ್ರಾಹಕರ, ವ್ಯಾಪಾರಸ್ಥರು, ಉದ್ಯಮಿದಾರರು ಸದುಪಯೋಗ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಗದಗ

ಪ್ರತಿ ಶಾಖಾ ಅಂಚೆ ಕಚೇರಿಗಳಲ್ಲಿ ಸಹ ಅಂತಾರಾಷ್ಟ್ರೀಯ ಪಾರ್ಸೆಲ್ ಬುಕ್ಕಿಂಗ್ ಅವಕಾಶ ಕಲ್ಪಿಸಲಾಗುತ್ತಿದೆ. ಇದನ್ನು ಗ್ರಾಹಕರ, ವ್ಯಾಪಾರಸ್ಥರು, ಉದ್ಯಮಿದಾರರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್.ಶಿರಹಟ್ಟಿ ಅಭಿಪ್ರಾಯಪಟ್ಟರು.

ಭಾರತೀಯ ಅಂಚೆ ಇಲಾಖೆಯ ಆಶ್ರಯದಲ್ಲಿ ಪ್ರಧಾನ ಅಂಚೆಯಲ್ಲಿ ಮಂಗಳವಾರ ಸಂಜೆ ನಡೆದ ಗದಗ ಉಪ ವಿಭಾಗೀಯ ವಿಭಾಗ ಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ಪ್ರಸ್ತುತ ಪತ್ರ ವ್ಯವಹಾರ ಜೊತೆಗೆ ಅಂಚೆ ಇಲಾಖೆ ಡಿಜಟಲೀಕರಣ, ಬ್ಯಾಂಕಿಂಗ್, ವಿಮಾ, ಉಳಿತಾಯ ಖಾತೆ, ಠೇವಣಿ, ಅಪಘಾತ ವಿಮೆ ಸೇರಿದಂತೆ ಹಲವು ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ. ಅವುಗಳನ್ನು ಹೆಚ್ಚೆಚ್ಚು ಜನರಿಗೆ ತಲುಪಿಸುವ ದಿಸೆಯಲ್ಲಿ ಪ್ರತಿಯೊಬ್ಬ ಅಂಚೆ ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.ಪ್ರತಿಯೊಬ್ಬರು ನಿಮ್ಮ ಕೆಲಸದ ಬಗೆಗೆ ಹೆಮ್ಮೆ ಇರಬೇಕು. ಕೆಲಸದ ಬಗೆಗೆ ಉದಾಸೀನ ಬೇಡ. ಯಾವುದೇ ಕೆಲಸವಾದರು ಕೃತಜ್ಞತಾಭಾವ ಹೊಂದುವ ಅಗತ್ಯವಿದೆ. ಅಂದಾಗ ಮಾತ್ರ ನಾವು ಮಾಡುವ ಕೆಲಸದಲ್ಲಿ ಬೇರೆಯವರಿಗೆ ಪ್ರೇರಣೆ ಮತ್ತು ಸಾಧನೆಗೆ ಸಹಕಾರಿ ಆಗಲಿದೆ ಎಂದರು.ಈಗಾಗಲೇ ಹಲವು ವಿಭಾಗದಲ್ಲಿ ಗದಗ ವಿಭಾಗ ರಾಜ್ಯ ಮಟ್ಟದ ಮುಂಚೂಣಿ ಸ್ಥಾನ ಗಿಟ್ಟಿಸಿಕೊಂಡಿದೆ ಎಂದರು.ಗದಗ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ ಮಾತನಾಡಿ, ಗದಗ ವಿಭಾಗ ನಿಗದಿತ ಗುರಿ ಸಾಧನೆ ಹಿನ್ನಲೆ ರಾಜ್ಯ ಮಟ್ಟದಲ್ಲಿ ಉಳಿತಾಯ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಮುಂಚೂಣಿ ಸ್ಥಾನದ ಹಿನ್ನಲೆ ಹೊಂದಿದೆ. ಇನ್ನೂ, ಅಟಲ್ ಪೆನ್ಷನ್, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಅಂಚೆ ವಿಮೆ ಸೇರಿದಂತೆ ಸುರಕ್ಷಿತ ಹೂಡಿಕೆ, ಡಿಜಿಟಲ್ ಬ್ಯಾಂಕಿಂಗ್ ಮತ್ತು ಸಾಮಾಜಿಕ ಭದ್ರತೆ, ಆಧಾರ ತಿದ್ದುಪಡಿ ಜೊತೆಗೆ ಹೆಚ್ಚೆಚ್ಚು ವಿವಿಧ ಖಾತೆ ಆರಂಭಕ್ಕೆ ಮುಂದಾಗಬೇಕು ಎಂದರು.

ಪ್ರಧಾನ ಅಂಚೆ ಪಾಲಕ ಏಕನಾಥ ಬಿ. ಮೆಣಸಿನಕಾಯಿ ಅಧ್ಯಕ್ಷೆತೆ ವಹಿಸಿ ಮಾತನಾಡಿದರು. ಇದಕ್ಕೂ ಮುನ್ನ ಗದಗ‌ ಅಂಚೆ ವಿಮೆ ಅಧಿಕಾರಿ ಶರಣಪ್ಪ ನಾಯ್ಕರ, ಸ್ವತಂತ್ರ. ವಿತರಣೆ ಕೇಂದ್ರದ ಮೇಲ್ವಿಚಾರಕ ಡಿ.ಜಿ. ಮ್ಯಾಗೇರಿ, ಉಪ ಅಂಚೆ ಪಾಲಕರ ಮಂಜು‌ನಾಥ ಕುರಿಯವರ, ಪ್ರಿಯಾಂಕ್ ಮಾತನಾಡಿದರು. ವಾಣಿ ಯಳಗಂಟಿ ಪ್ರಾರ್ಥಿಸಿದರು. ಮೇಘನಾ ಕುಲಕರ್ಣಿ ನಿರೂಪಿಸಿದರು. ಅನಿತಾ ಕುರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೋನ್‌ಇನ್‌ನಲ್ಲಿ ಕಸದ ಸಮ್ಯಸ್ಯೆಗಳದ್ದೇ ಸದ್ದು!
ಎಸ್‌ಐಆರ್‌ನಿಂದಾಗಿ ಬೆಂಗಳೂರಿನಲ್ಲಿ 46.88 ಲಕ್ಷ ಮತದಾರರ ಹೆಸರುಗಳು ಡಿಲೀಟ್ । ರಾಜಧಾನಿಯಲ್ಲಿ ಬರೀ 59 ಲಕ್ಷ ಮತದಾರರು