ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತೀಯ ಕಿಸಾನ್ ಸಂಘದಿಂದ ನಗರದ ಕೆವಿಎಸ್ ಭವನದಲ್ಲಿ ನಡೆದ ರಾಜ್ಯ ಮಟ್ಟದ ಕಬ್ಬು ಬೆಳೆಗಾರರ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಕಬ್ಬು ಬೆಳೆಗಾರರಿಗೆ ಸಮಸ್ಯೆಗಳು ಮತ್ತು ಸವಾಲುಗಳು ಹೆಚ್ಚಿವೆ. ಕಬ್ಬು ವಾಣಿಜ್ಯ ಬೆಳೆಯಾದರೂ, ಅದಕ್ಕೆ ಸರಿಯಾದ ಆದಾಯ ಸಿಗುತ್ತಿಲ್ಲ. ಕಬ್ಬು ಬೆಳೆಗಾರರು ಹತಾಶರಾಗಬಾರದು. ವೈಜ್ಞಾನಿಕ ಸಲಹೆ, ಮಾರ್ಗದರ್ಶನ ಪಡೆದು ಕೃಷಿ ಮಾಡುವಂತೆ ಸಲಹೆ ನೀಡಿದರು.
ಕೇಂದ್ರ ಸರ್ಕಾರ ಎಫ್‌ಆರ್‌ಪಿ ನಿಗದಿ ಮಾಡುತ್ತದೆ. ಇಳುವರಿ ಆಧಾರದ ಮೇಲೆ ದರ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡುತ್ತಿದೆ. ಕಳೆದ ಸಾಲಿನಲ್ಲಿ ರೈತರಿಗೆ ೫೦ ರು. ಕಾರ್ಖಾನೆಯವರು ಹಾಗೂ ಸರ್ಕಾರ ೫೦ ರು.. ನಿಗದಿ ಪಡಿಸಿತ್ತು. ಸರ್ಕಾರ ನಿಗದಿ ಮಾಡಿದ್ದ ಹಣ ಈಗಾಗಲೇ ರೈತರಿಗೆ ವಿತರಿಸಲಾಗಿದೆ. ಕಾರ್ಖಾನೆಯವರು ಸರ್ಕಾರದ ಆದೇಶ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ಇದು ಸರಿಯಾದ ಬೆಳವಣಿಗೆಯಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಖಾನೆಯವರು ೫೦ ರು. ಹಣವನ್ನು ರೈತರಿಗೆ ವಿತರಿಸಿದ್ದಾರೆ. ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕೃಷಿ ವಿವಿ ನಿವೃತ್ತ ವಿಶೇಷಾಧಿಕಾರಿ ಡಾ. ಕೆ.ಎಂ. ಹರಿಣಿಕುಮಾರ್ ಮಾತನಾಡಿ, ಕಬ್ಬು ಬೆಳೆಯಲ್ಲಿ ಕೇವಲ ಸಕ್ಕರೆ ಉತ್ಪನ್ನವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಉಪ ಉತ್ಪನ್ನಗಳಿಗೆ ಹೆಚ್ಚಿನ ಮನ್ನಣೆ ನೀಡಬೇಕು. ಸಕ್ಕರೆ, ಸಹ ವಿದ್ಯುತ್ ಬಹುಮುಖ್ಯವಾಗಿ ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸುವುದು ಅತ್ಯಗತ್ಯ. ಇದರಿಂದಾಗಿ ಟನ್ ಕಬ್ಬಿಗೆ ೪೨೦೦ ರು. ದರ ನಿಗದಿ ಮಾಡಬಹುದು. ಆದರೆ, ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಕೆ.ಸಾಯಿರೆಡ್ಡಿ, ದಕ್ಷಿಣ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶರಾಜು, ಬೆಲ್ಲದನಾಡು ರೈತ ಉತ್ಪಾದಕರ ಕಂಪನಿಗಳ ಒಕ್ಕೂಟದ ವ್ಯವಸ್ಥಾಪಕ ಕಾರಸವಾಡಿ ಮಹದೇವು, ಎಪಿಎಂಸಿ ಬೆಲ್ಲ ವರ್ತಕರ ಸಂಘದ ಅಧ್ಯಕ್ಷ ಯಶ್ವಂತ್‌ಕುಮಾರ್, ಕಿಸಾನ್ ಸಂಘದ ಪುಟ್ಟಮ್ಮ, ಗಾಣದ ಮಾಲೀಕರ ಸಂಘದ ಅಧ್ಯಕ್ಷ ಸೋಮಣ್ಣ ಬೇವಿನಹಳ್ಳಿ, ಪತ್ರಕರ್ತ ಕೆ. ಶ್ರೀನಿವಾಸ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.