ಕೇಂದ್ರ ಸರ್ಕಾರದ ಕ್ರಮದಿಂದ ಕಾರ್ಖಾನೆಯವರು ಆತಂದಲ್ಲಿದ್ದಾರೆ: ಸಚಿವ ಪಾಟೀಲ

KannadaprabhaNewsNetwork | Published : Dec 23, 2023 1:45 AM

ಸಾರಾಂಶ

ಎಥನಾಲ್ ಉತ್ಪಾದನೆ ಮಾಡುವವರಿಗೆ ಕೇಂದ್ರ ಸರ್ಕಾರ ಮೊದಲು ಪ್ರೋತ್ಸಾಹ ಕೊಟ್ಟು, ಇದೀಗ ಏಕಾಏಕಿ ಮಾಡಬೇಡಿ ಎಂದು ನಿರ್ಬಂಧ ಹಾಕಿದ್ದಾರೆ. ಇದರಿಂದ ಎಥನಾಲ್‌ ಘಟಕನಿರ್ಮಾಣ ಮಾಡುವ ಕಾರ್ಖಾನೆಯವರು ಆತಂಕದಲ್ಲಿದ್ದಾರೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಎಥನಾಲ್ ಉತ್ಪಾದನೆ ಮಾಡುವವರಿಗೆ ಕೇಂದ್ರ ಸರ್ಕಾರ ಮೊದಲು ಪ್ರೋತ್ಸಾಹ ಕೊಟ್ಟು, ಇದೀಗ ಏಕಾಏಕಿ ಮಾಡಬೇಡಿ ಎಂದು ನಿರ್ಬಂಧ ಹಾಕಿದ್ದಾರೆ. ಇದರಿಂದ ಎಥನಾಲ್‌ ಘಟಕನಿರ್ಮಾಣ ಮಾಡುವ ಕಾರ್ಖಾನೆಯವರು ಆತಂಕದಲ್ಲಿದ್ದಾರೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆ ಕಾರ್ಖಾಯ ಮಾಲೀಕರು ಎಥಿನಾಲ್ ಉತ್ಪಾದನೆ ಮಾಡಲು ₹200 ರಿಂದ ₹500 ಕೋಟಿ ವರೆಗೂ ಬಂಡವಾಳ ಹೂಡಿಕೆ ಮಾಡಿದ್ದಾರೆ. ಅವರ ಮೇಲೆ ಕೇಂದ್ರ ಸರ್ಕಾರದ ನಿರ್ಬಂಧ ಹಾಕಿರುವ ನಿರ್ಧಾರದಿಂದ ಆತಂಕದಲ್ಲಿದ್ದಾರೆ ಎಂದರು.

ಸಕ್ಕರೆ ರಪ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಬೇಕಿತ್ತು. ಇದರಿಂದ ಸ್ವಲ್ಪ ಲಾಭದಲ್ಲಿ ಕಾರ್ಖಾನೆಯ ಮಾಲೀಕರು ಇರುತ್ತಿದ್ದರು. ಅದನ್ನು ಬ್ಯಾನ್ ಮಾಡಿದ್ದಾರೆ. ಕೇವಲ ಸಕ್ಕರೆ ಮಾತ್ರವಲ್ಲ ತರಕಾರಿಯನ್ನು ಸಹ ಆಮದು, ರಪ್ತು ಮಾಡುವುದನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದೆ ಎಂದು ತಿಳಿಸಿದರು.

ಖಾನಾಪುರ ಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಯ ಭ್ರಷ್ಟಾಚಾರದ ಕುರಿತು ಸರ್ಕಾರ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಪ್ರತಿಕ್ರಿಯೆ ನೀಡುವೆ ಎಂದರು.

ಕಬ್ಬಿನ ತೂಕದಲ್ಲಿ ಮೋಸ ಮಾಡುವುದನ್ನು ತಡೆಗಟ್ಟಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಸಲ ಯಾವ ಯಾವ ಕಾರ್ಖಾನೆಯ ವಿರುದ್ಧ ರೈತರು ದೂರು ನೀಡುತ್ತಾರೆ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ರೈತರು ಕಬ್ಬನ್ನು ಸಾಗಾಣಿಕೆ ಮಾಡುವ ಪೂರ್ವದಲ್ಲಿ ಎಪಿಎಂಸಿ ತೂಕದ ಯಂತ್ರದಲ್ಲಿ ಉಚಿತವಾಗಿ ತೂಕ ಮಾಡಿಸಿಕೊಳ್ಳಲು ಸರ್ಕಾರ ಆದೇಶ ಮಾಡಲಿದೆ. ಯಾವುದದಾದರೂ ರೈತರಿಗೆ ಸಕ್ಕರೆ ಕಾರ್ಖಾನೆಯವರು ಮೋಸ ಮಾಡುತ್ತಿದ್ದಾರೆ ಎಂದು ಅನುಮಾನ ಬಂದರೆ ಎಪಿಎಂಸಿಯಲ್ಲಿ ತೂಕ ಮಾಡಿಸಿಕೊಂಡರೆ ಅವನಿಗೆ ನೈಜ ತೂಕದ ಬಗ್ಗೆ ಅರಿವು ಬರಲಿದೆ ಎಂದರು. ರಾಜ್ಯದಲ್ಲಿ 167 ಎಪಿಎಂಸಿ ಇವೆ. ಅಲ್ಲಿ ತೂಕದ ಯಂತ್ರ ಇದ್ದೆ ಇವೆ. ರೈತರು ಎಪಿಎಂಸಿ ತೂಕದಲ್ಲಿ ಹಾಗೂ ಸಕ್ಕರೆ ಕಾರ್ಖಾನೆಯಲ್ಲಿ ತೂಕದ ವ್ಯವಸ್ಥೆಯಲ್ಲಿ ಲೋಪ ಬಂದಾಗ ರೈತರು ದೂರು ನೀಡಿದರೆ ಮುಲ್ಲಾಜಿಲ್ಲದೆ ಅಂಥ ಸಕ್ಕರೆ ಕಾರ್ಖಾನೆಯ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.

ಮಳೆಯ ಅಭಾವದಿಂದ ಈ ಬಾರಿ ಸುಮಾರು ಒಂದೂವರೆ ಲಕ್ಷ ಸಕ್ಕರೆ ಉತ್ಪಾದನಾ ಪ್ರಮಾಣ ಕಡಿಮೆಯಾಗಬಹುದು ಎಂದು ತಿಳಿಸಿದರು.

Share this article