ಕನ್ನಡಪ್ರಭ ವಾರ್ತೆ ಲೋಕಾಪುರ
ಜಾತ್ರೆಗಳು ಜಾತ್ಯತೀತ ಮನೋಭಾವನೆಯ ಮೂಲಕ ಎಲ್ಲರಲ್ಲೂ ಸಾಮರಸ್ಯ ಬೆಸೆಯುವ ಕೊಂಡಿಯಾಗಿದ್ದು, ನಮ್ಮ ಕುರುಂಬ ಜನಾಂಗ ಇಂದಿಗೂ ಸಹ ಕಾಶಿಲಿಂಗೇಶ್ವರ ಜಾತ್ರೆಯನ್ನು ಭಕ್ತಿಭಾವದಿಂದ ಆಚರಿಸಿಕೊಂಡು ಮುಂದುವರೆಯುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಕುರಿ ಮಹಾಮಂಡಳ ಉಪಾಧ್ಯಕ್ಷ ಕಾಶಿನಾಥ ಹುಡೇದ ಹೇಳಿದರು.ಪಟ್ಟಣದ ವೆಂಕಟಾಪುರ ಓಣಿಯ ಕಾಶಿಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಕಲಾ ಸಿಂಚನ್ ಮೆಲೋಡಿಸ್ ಅವರಿಂದ ಜಾನಪದ ಹಾಸ್ಯ ರಸಮಂಜರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಕಾಶಿಲಿಂಗೇಶ್ವರ ದೇವಸ್ಥಾನ ನಾಡು, ನುಡಿಗೆ ತನ್ನದೇ ಆದ ಕೊಡುಗೆ ನೀಡಿದ್ದು, ಧಾರ್ಮಿಕ, ಸಾಮಾಜಿಕವಾಗಿ ಹಿನ್ನೆಲೆ ಹೊಂದಿರುವ ಕುರುಬ ಸಮುದಾಯದ ಈ ಜಾತ್ರೆ, ಭಕ್ತರಲ್ಲಿ ಜಾಗೃತಿ ಮೂಡಿಸಿದೆ ಎಂದರು.
ವಾಯುಪುತ್ರ ಸೌಹಾರ್ದ ಬ್ಯಾಂಕಿನ ಅಧ್ಯಕ್ಷ ಲೋಕಣ್ಣ ಕತ್ತಿ ಮಾತನಾಡಿ, ಜಾತ್ರಾ ಮಹೋತ್ಸವಗಳು ಎಲ್ಲ ಸಮುದಾಯದವರನ್ನು ಒಗ್ಗಟ್ಟುಗೊಳಿಸುವ ಸಾಮರಸ್ಯದ ಸಂಕೇತವಾಗಿವೆ, ಧಾರ್ಮಿಕ ಆಚರಣೆಗಳು ಮನುಷ್ಯನ ಅವಿಭಾಜ್ಯ ಅಂಗಗಳಾಗಿದ್ದು, ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ನಮ್ಮ ಬದುಕಿಗೆ ನಿಜ ಅರ್ಥ ಬರುತ್ತದೆ. ಪ್ರಸ್ತುತ ಕಾಲದಲ್ಲಿ ಜನರು ಧಾರ್ಮಿಕ ನೆಲೆಗಟ್ಟು ಕಳೆದುಕೊಳ್ಳುತ್ತಿರುವುದು ವಿಷಾದದ ಸಂಗತಿ ಎಂದರು.ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಅಧ್ಯಕ್ಷ ಹಾಗೂ ಬಾಲಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಲ್ಲಾಸಾಬ ಯಾದವಾಡ, ಕಾಶಿಲಿಂಗೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಅಧ್ಯಕ್ಷ ಮುತ್ತಪ್ಪ ಗಡ್ಡದವರ ಮಾತನಾಡಿದರು.
ಕಾರ್ಯಕ್ರಮದ ನೇತೃತ್ವವನ್ನು ಪೂಜಾರಿಗಳಾದ ಸಿದ್ದಪ್ಪ ಗಡ್ಡದವರ, ಮುತ್ತಪ್ಪ ಗಡ್ಡದವರ, ವೇದಿಕೆಯಲ್ಲಿ ಪವನ ಉದಪುಡಿ, ಯಮನಪ್ಪ ಹೊರಟ್ಟಿ, ಪ್ರಕಾಶ ಚುಳಕಿ, ಲಕ್ಷ್ಮಣ ಮಾಲಗಿ, ಗಣಪತಿ ಗಸ್ತಿ, ಗೋವಿಂದ ಕೌಲಗಿ, ಲಿಂಗಾನಂದ ಹಿರೇಮಠ, ಬೀರಪ್ಪ ಮಾಯಣ್ಣವರ, ಪ್ರಮೋದ ತೆಗ್ಗಿ, ಲೋಕಣ್ಣ ಉಳ್ಳಾಗಡ್ಡಿ, ಕಿರಣ ವಾಸನದ, ಮಹೇಶ ಹುಗ್ಗಿ, ಅರುಣ ನರಗುಂದ, ರೆಹಮಾನ್ ತೊರಗಲ್, ಸಿದ್ದು ಕಿಲಾರಿ, ರಮೇಶ ಕಂಬಾರ, ಕೃಷ್ಣಾ ಭಜಂತ್ರಿ, ಅಯ್ಯಪ್ಪಗೌಡ ಪಾಟೀಲ, ಮಹೇಶ ಮಳಲಿ, ಸೈದುಸಾಬ್ ನದಾಫ್, ಕುಮಾರ ಕಾಳಮ್ಮನವರ, ಉದಯ ಶೆಟ್ಟಿ, ಅಬ್ದುಲ್ ರಜಾಕ್ ಮುಲ್ಲಾ ಜಾತ್ರಾ ಕಮಿಟಿಯ ಸದಸ್ಯರು ಇದ್ದರು. ಕೆ.ಪಿ.ಯಾದವಾಡ ನಿರೂಪಿಸಿ, ಮುತ್ತು ತುಂಗಳ ವಂದಿಸಿದರು.ವಿಶೇಷ ಸನ್ಮಾನಿತರು: ಹಿರಿಯ ಪಾರಿಜಾತ ಕಲಾವಿದ ಹಯತ್‌ಸಾಬ ಮದರಖಾನ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದುರಗವ್ವ ಕಾಳಮ್ಮನವರ, ದುರಗವ್ವ ರೊಡ್ಡಪ್ಪನವರ, ಕನ್ನಡ ಜಾನಪದ ಪರಿಷತ್ ಮಹಿಳಾ ವಲಯ ಘಟಕದ ಅಧ್ಯಕ್ಷ ರೇಖಾ ನರಹಟ್ಟಿ, ಕಲಾವಿದ ಲೋಕಣ್ಣ ಸುರಪುರ ಇವರನ್ನು ಜಾತ್ರಾ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.