ಗದಗ: ಜಾತ್ರೆಗಳು ಸಮಾಜದಲ್ಲಿ ಸಾಮರಸ್ಯ ಮೂಡಿಸುತ್ತವೆ ಎಂದು ಹರ್ಲಾಪುರದ ಡಾ. ಅಭಿನವ ಕೊಟ್ಟೂರೇಶ್ವರ ಶ್ರೀಗಳು ತಿಳಿಸಿದರು.
ಜಾತ್ರೆಗಳು, ಹಬ್ಬಗಳು ಮನುಷ್ಯನಲ್ಲಿರುವ ಜಾತಿ ಮತ್ತು ವೈಷಮ್ಯವನ್ನು ದೂರ ಮಾಡುತ್ತವೆ. ವರ್ಷಗಟ್ಟಲೆ ಮಾತನಾಡದೇ ವೈಷಮ್ಯ ಸಾಧಿಸುವವರು ಜಾತ್ರೆಗಳ ಸಡಗರದಲ್ಲಿ ಒಬ್ಬರಿಗೊಬ್ಬರು ಕೂಡಿಕೊಂಡು ಹಗೆತನ ಮರೆತು ಒಕ್ಕಟ್ಟಿನಿಂದ ಉತ್ಸವಗಳನ್ನು ಕೈಗೊಳ್ಳುತ್ತಾರೆ. ಮಹಾನ್ ಕಾರ್ಯಗಳು ನಡೆಬೇಕೆಂದರೆ ಒಕ್ಕಟ್ಟು ಇದ್ದರೆ ಮಾತ್ರ ಸಾಧ್ಯ. ಇಲ್ಲದಿದ್ದರೆ ಯಾವುದೇ ಸಣ್ಣ ಕಾರ್ಯಗಳು ನಡೆಯಲು ಸಾಧ್ಯವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಶಾಂತ ಶಾಬಾದಿಮಠ ಮಾತನಾಡಿ, ಯಶಸ್ವಿಯಾಗಿ ಜಾತ್ರೋತ್ಸವವನ್ನು ನೆರವೇರಿಸಲು ಸಹಕಾರ ನೀಡಿದ್ದಿರಿ. ಇದೇ ರೀತಿ ನಾವೆಲ್ಲರೂ ಒಗ್ಗಟ್ಟಿನಿಂದ ಭಕ್ತಿಯಿಂದ ಮುಂದೆಯೂ ಗಂಜಿ ಬಸವಣ್ಣನ ಜಾತ್ರೆಯನ್ನು ಅದ್ಧೂರಿ, ಅರ್ಥಪೂರ್ಣವಾಗಿ ಆಚರಿಸೋಣ ಎಂದರು. ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಮಾನವ ಧರ್ಮಕ್ಕೆ ಜಯವಾಗಲಿ ಎಂದು ಸಾರಿದ ಮುಕ್ತಿಮಂದಿರದ ವೀರ ಗಂಗಾಧರ ಶಿವಾಚಾರ್ಯರ ತತ್ವವನ್ನು ನಾವ್ಯಾರು ಆಚರಿಸುತ್ತಿಲ್ಲ. ಬರೀ ಜಾತಿ, ಧರ್ಮಗಳಲ್ಲಿ ಸಿಲುಕಿ ದ್ವೇಷ ಭಾವನೆಯನ್ನು ಬಿತ್ತುತ್ತಿದ್ದೇವೆ. ಮಹಾತ್ಮರ ತತ್ವಗಳನ್ನು ಅರಿತು ಪಾಲಿಸೋಣ ಎಂದರು.ಭೂಗರ್ಭ ಶಾಸ್ತ್ರಜ್ಞ ಡಾ. ಎಸ್.ಕೆ. ಮ್ಯಾಗೇರಿ ಮಾತನಾಡಿ, ಭೂಗರ್ಭ ಪರಿಸರದ ಕುರಿತು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ರಾಮಣ್ಣ ಫಲದೊಡ್ಡಿ, ಮೆಹಬೂಬಸಾಬ ನದಾಫ(ಚಿಮ್ಮಿ), ಅಬ್ದುಲ್ ಮುನಾಫ ಮುಲ್ಲಾ, ಕರಬಸಯ್ಯ ನಾಲ್ವತ್ತವಾಡಮಠ, ಬಸಪ್ಪ ಕಲಬಂಡಿ, ಎಚ್.ಕೆ. ಮುಲ್ಲಾ, ಹೇಮಂತ ಗಿಡ್ಡ ಹನಮಣ್ಣವರ, ಪರಪ್ಪ ಫಕ್ಕೀರಪ್ಪ ಕಮತರ, ಉದಯಗೌಡ ಅಮಾತಿಗೌಡ್ರ, ಶಂಕರ ಕರಭಿಷ್ಟಿ, ಸಿದ್ದು ಸಂಗನಾಳ, ಬಸವರಾಜ ಕರಭಿಷ್ಠಿ, ಸಿದ್ರಾಮಪ್ಪ ಹುಂಬಿ, ತೋಟಯ್ಯ ವಿಭೂತಿಮಠ, ಮತ್ತು ಅಕ್ಬರಸಾಬ ಬಬರ್ಚಿ, ವಿರುಪಾಕ್ಷಗೌಡ ಹನುಮಂತಗೌಡ ದೇಸಾಯಿ ಮಾತನಾಡಿದರು. ಜಿ.ಬಿ. ಹಾವಣಗಿ ನಿರೂಪಿಸಿದರು. ತೋಟಯ್ಯ ವಿಭೂತಿಮಠ ವಂದಿಸಿದರು.