ಜಾತ್ರೆ, ಉತ್ಸವ, ಹಬ್ಬ ಹರಿ ದಿನಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ: ಪ್ರಕಾಶ್ ಗುರೂಜಿ

KannadaprabhaNewsNetwork |  
Published : Oct 17, 2025, 01:00 AM IST
16ಕೆಎಂಎನ್ ಡಿ18 | Kannada Prabha

ಸಾರಾಂಶ

ಬಂಡಬೋಯನಹಳ್ಳಿ ಗ್ರಾಮದಲ್ಲಿ ಮಹದೇಶ್ವರ ಸ್ವಾಮಿ ದೇವಾಲಯ ಸ್ಥಾಪನೆ ಮಾಡಿ 25 ವರ್ಷಗಳು ರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ಅದ್ದೂರಿಯಾಗಿ ಸ್ವಾಮಿ ರಜತ ಮಹೋತ್ಸವ ವೈಭವದ ಮೆರವಣಿಗೆಯೊಂದಿಗೆ ನಡೆಸಿ ಸಾವಿರಾರು ಭಕ್ತಾದಿಗಳಿಗೆ ಅನ್ನಪ್ರಸಾದ ನೀಡಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ನಡೆಸಲಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಜಾತ್ರೆ, ಉತ್ಸವ, ಹಬ್ಬ ಹರಿ-ದಿನಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಪೂರ್ವಜರು ನಡೆಸಿಕೊಂಡು ಬಂದ ಧಾರ್ಮಿಕ ಪರಂಪರೆಯ ಮೇಲೆ ಬೆಳಕು ಚೆಲ್ಲುವ ವಿಶೇಷ ಸಮಾರಂಭಗಳಾಗಿವೆ ಎಂದು ಪ್ರಕಾಶ್ ಗುರೂಜಿ ಹೇಳಿದರು.

ಪಟ್ಟಣದ ಹೊರವಲಯದ ಬಂಡಬೋಯನಹಳ್ಳಿ ಗ್ರಾಮದ ಸಮೀಪದ ಶ್ರೀಮಲೈ ಮಹದೇಶ್ವರಸ್ವಾಮಿ ದೇವಾಲಯದಲ್ಲಿ 25ನೇ ವರ್ಷ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಶ್ರೀಮಲೈ ಮಹದೇಶ್ವರಸ್ವಾಮಿ ಅದ್ಧೂರಿ ಜಾನಪದ ಕಲಾ ತಂಡಗಳ ಭವ್ಯ ಮೆರವಣಿಗೆ ಹಾಗೂ ಮಹದೇಶ್ವರರ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಉತ್ಸವದ ಅಂಗವಾಗಿ ನೂರಾರು ಮಕ್ಕಳಿಗೆ ನಾಮಕರಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಪ್ರಕಾಶ್ ಗುರೂಜಿ, ಮಲೈ ಮಹದೇಶ್ವರರು ನಮ್ಮ ಜಾನಪದ ಮುಖ್ಯ ಆರಾಧ್ಯ ದೈವ. ಹುಲಿವಾಹನಧಾರಿಯಾದ ಮಹದೇಶ್ವರ ರ ಬಗ್ಗೆ ಅಪಾರವಾದ ನಂಬಿಕೆ ಹಾಗೂ ಭಕ್ತಿ ವಿಶ್ವಾಸಗಳಿವೆ ಎಂದರು.

ಗ್ರಾಮದ ಮಹದೇಶ್ವರ ಸ್ವಾಮಿ ದೇವಾಲಯ ಸ್ಥಾಪನೆ ಮಾಡಿ 25 ವರ್ಷಗಳು ರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ಅದ್ದೂರಿಯಾಗಿ ಸ್ವಾಮಿ ರಜತ ಮಹೋತ್ಸವ ಸಂಭ್ರಮವನ್ನು ವೈಭವದ ಮೆರವಣಿಗೆಯೊಂದಿಗೆ ನಡೆಸಿ ಸಾವಿರಾರು ಭಕ್ತಾದಿಗಳಿಗೆ ಅನ್ನಪ್ರಸಾದವನ್ನು ನೀಡಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ನಡೆಸಲಾಗಿದೆ ಎಂದರು.

ಈ ವೇಳೆ ಅಗ್ರಹಾರಬಾಚಹಳ್ಳಿ ಗ್ರಾಪಂ ಅಧ್ಯಕ್ಷ ದಿವಿ ಕುಮಾರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಜಗದೀಶ್, ವೀರಶೈವ ಸಮಾಜದ ಮುಖಂಡರಾದ ತೋಟಪ್ಪಶೆಟ್ಟಿ, ಧನಂಜಯಕುಮಾರ್, ಬ್ಯಾಂಕ್ ಪರಮೇಶ್ವರ, ಡಿಂಕಾ ಮಹೇಶ್, ಸಾಸಲು ಈರಪ್ಪ, ಶ್ರೀ ಚನ್ನಬಸವೇಶ್ವರ ಕಲ್ಲು ಮಠದ ಶ್ರೀ ವಿರೂಪಾಕ್ಷ ರಾಜಯೋಗಿ ಶಿವಯೋಗಿ ಸ್ವಾಮೀಜಿಗಳು, ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಎಸ್.ಸಿ.ನಾಗೇಶ್, ಗ್ರಾಪಂ ಸದಸ್ಯ ಆರ್.ಶ್ರೀನಿವಾಸ್, ವಳಗೆರೆಮೆಣಸ ರಮಾನಂದ, ಅನುವಿನಕಟ್ಟೆ ರಾಮಕೃಷ್ಣೇಗೌಡ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಕ್ಷಗಾನ ಉಳಿವಿಗೆ ಯುವಜನತೆ ಸಕ್ರಿಯ ಪಾತ್ರ ಅಗತ್ಯ: ಡಾ. ಎಚ್‌.ಎಸ್‌. ಬಲ್ಲಾಳ್‌
ಸನ್ಯಾಸತ್ವಕ್ಕೆ ಪರಮ ವೈರಾಗ್ಯವೇ ಮೂಲ: ಸ್ವಾಮಿ ನಿರ್ಭಯಾನಂದ ಸರಸ್ವತಿ