ಜಾತ್ರೆಗಳು ಮನುಷ್ಯ ಸಂಬಂಧ ಗಟ್ಟಿಗೊಳಿಸುತ್ತವೆ: ಮಹಾಂತೇಶ ಹಿಟ್ಟಿನಮಠ

KannadaprabhaNewsNetwork |  
Published : Sep 14, 2025, 01:06 AM IST
ಹಾಸ್ಯ ಸಂಜೆ ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಮಾತನಾಡಿದರು.  | Kannada Prabha

ಸಾರಾಂಶ

ಹಬ್ಬಗಳ ದೇಶ ಭಾರತ. ಹಳ್ಳಿಗಳಲ್ಲಿ ಜಾತ್ರೆ ಎಂದರೆ ಊರೆಲ್ಲ ಸಡಗರ ಸಂಭ್ರಮ ತುಂಬಿ ತುಳುಕುತ್ತದೆ. ಬಂದು ಬಾಂಧವರನ್ನು ಒಂದುಗೂಡಿಸುತ್ತದೆ. ಜಾತ್ರೆ ಇನ್ನೂ ಒಂದು ವಾರ ಇರುವಾಗಲೇ ಬಂಧು-ಬಾಂಧವರನ್ನು ಜಾತ್ರೆಗೆ ಕರೆದು ಎಲ್ಲರೂ ಸೇರಿ ಜಾತ್ರೆ ಮಾಡುವುದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ ಎಂದು ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಹಬ್ಬಗಳ ದೇಶ ಭಾರತ. ಹಳ್ಳಿಗಳಲ್ಲಿ ಜಾತ್ರೆ ಎಂದರೆ ಊರೆಲ್ಲ ಸಡಗರ ಸಂಭ್ರಮ ತುಂಬಿ ತುಳುಕುತ್ತದೆ. ಬಂದು ಬಾಂಧವರನ್ನು ಒಂದುಗೂಡಿಸುತ್ತದೆ. ಜಾತ್ರೆ ಇನ್ನೂ ಒಂದು ವಾರ ಇರುವಾಗಲೇ ಬಂಧು-ಬಾಂಧವರನ್ನು ಜಾತ್ರೆಗೆ ಕರೆದು ಎಲ್ಲರೂ ಸೇರಿ ಜಾತ್ರೆ ಮಾಡುವುದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ ಎಂದು ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ ಹೇಳಿದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಿಂಬದಿ ಈಚೆಗೆ ನಡೆದ ಕೊನೆಯ ದಿನದ ಹಾಸ್ಯ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೀಳಗಿಯ ಆಶುಕವಿ ಸಿದ್ದಪ್ಪ ಬಿದರಿ ಮಾತನಾಡಿ, ವಿಶ್ವಕ್ಕೆ ಅನ್ನ ಕೊಡುವ ಅನ್ನದಾತರ ಮಕ್ಕಳಿಗೆ ಹೆಣ್ಣು ಕೊಡಿ. ನೌಕರಿ ವರ ಬೇಕು ಎಂದು ಮೋಸ ಮಾಡಿಕೊಳ್ಳಬೇಡಿ. ಇಂದು ಕೃಷಿ ಇಲ್ಲದೆ ಬದುಕು ಅಸಾಧ್ಯ ಯಾವುದೇ ಆಮಿಷಕ್ಕೆ ಒಳಗಾಗದೆ ರೈತರ ಮಕ್ಕಳಿಗೆ ಹೆಣ್ಣು ಕೊಡಿ, ಶಾಲೆಗೆ ಕಳಿಸಿ ಬದುಕು ಕಲಿಸಿರ. ಹಳ್ಳಿ ಜೀವನಕ್ಕೆ ಬೆಲೆ ಕೊಡಿ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ನಾಯಕಿ ಕವಿತಾ ಕೊಣ್ಣೂರ,

ಯುವ ಉದ್ಯಮಿ ಹಾಗೂ ನಿವೃತ್ತ ಯೋಧ ಶ್ರೀಶೈಲ ಭಜಂತ್ರಿ ಮಾತನಾಡಿದರು.

ಜಾತ್ರೆಗೆ ಅದ್ಧೂರಿ ತೆರೆ : ಆರು ದಿನ ನಡೆದ ಜಾತ್ರಾ ಮಹೋತ್ಸವಕ್ಕೆ ತೆರಿನ ಮೇಲಿನ ಕಳಸ ಇಳಿಸುವುದರೊಂದಿಗೆ ಜಾತ್ರೆ ಸಂಪನ್ನಗೊಂಡಿತು. ಜಾತ್ರೆಗೆ ಸಹಕರಿಸಿದ ಹಾಗೂ ಇತರೆ ಸೇವೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ಥಳೀಯ ಕಲಾವಿದ ಮನು ಅಂಬಿ ನೇತೃತ್ವದ ಕಲಾ ತಂಡ ಸಂಗೀತ ಸುಧೆ ಹರಿಸಿ ನೆರೆದಿದ್ದ ಪ್ರೇಕ್ಷಕರಿಗೆ ಮನರಂಜನೆಯ ರಸದೌತನ ಉಣಬಡಿಸಿತು.

ಪುರಸಭೆ ಅಧ್ಯಕ್ಷ ಯಲ್ಲಗೌಡ ಪಾಟೀಲ, ಚಂದಾ ಅಷ್ಟಗಿ, ಪ್ರಕಾಶ ತಟ್ಟಿಮನಿ, ಕಲ್ಲಪ್ಪ ಚಿಂಚಲಿ, ಬಲವಂತಗೌಡ ಪಾಟೀಲ, ಚನ್ನಯ್ಯ ಚಟ್ಟಿಮಠ, ಗುರು ಜಂಬಗಿ, ವಿರುಪಾಕ್ಷ ಬಾಟ್ ಸೇರಿದಂತೆ ಜಾತ್ರಾ ಕಮೀಟಿ ಅಧ್ಯಕ್ಷರು, ಸದಸ್ಯರು, ಗಣ್ಯಮಾನ್ಯರು, ಪತ್ರಕರ್ತರು ಉಪಸ್ಥಿತರಿದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ