ನಂಬಿಕೆ, ವಿಶ್ವಾಸಕ್ಕೆ ಕಪ್ಪುಚುಕ್ಕೆ ಬಾರದಂತೆ ಸೇವೆ ಮಾಡುವೆ-ಆನಂದಸ್ವಾಮಿ ಗಡ್ಡದೇವರಮಠ

KannadaprabhaNewsNetwork | Updated : Apr 08 2024, 09:26 AM IST

ಸಾರಾಂಶ

ನಂಬಿಕೆ, ವಿಶ್ವಾಸಕ್ಕೆ ಕಪ್ಪುಚುಕ್ಕೆ ತಾರದೇ ಸೇವೆ ಗೈಯ್ಯುವೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ಹಾನಗಲ್ಲ: ನಂಬಿಕೆ, ವಿಶ್ವಾಸಕ್ಕೆ ಕಪ್ಪುಚುಕ್ಕೆ ತಾರದೇ ಸೇವೆ ಗೈಯ್ಯುವೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.

ತಾಲೂಕಿನ ಹಿರೇಹುಲ್ಲಾಳ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಹಾವೇರಿ ಲೋಕಸಭಾ ಕ್ಷೇತ್ರದ ವಿಕಾಸಕ್ಕೆ ದೃಢಸಂಕಲ್ಪ ಮಾಡಿದ್ದೇನೆ. ಯುವ ಸಬಲೀಕರಣ, ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಅವಕಾಶ ನೀಡಿ, ಆಶೀರ್ವದಿಸಿ ಎಂದು ಮನವಿ ಮಾಡಿದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಬರ ಪರಿಹಾರ ಹಣ ಬಿಡುಗಡೆಗೆ ತಡವಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳುತ್ತಾರೆ. ತಡವಾಗಿ ಅರ್ಜಿ ಕೊಟ್ಟಿದ್ದನ್ನು ಸಾಬೀತು ಪಡಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಹಾಕಿದರೂ ಮರು ಮಾತನಾಡದೇ ದೆಹಲಿ ವಿಮಾನ ಏರಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯ ಸ್ಪಷ್ಟ ನಿದರ್ಶನ ಇದು ಎಂದು ಟೀಕಿಸಿದರು.

ಗ್ರಾಪಂ ಅಧ್ಯಕ್ಷ ರೇಣುಕಾ ಪಾಟೀಲ, ಜಿಪಂ ಮಾಜಿ ಸದಸ್ಯ ಮಹದೇವಪ್ಪ ಬಾಗಸರ, ತಾಪಂ ಮಾಜಿ ಸದಸ್ಯ ಮಧು ಪಾಣಿಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಬಸವಲಿಂಗಪ್ಪ ದೊಡ್ಡಮನಿ, ಬಸವರಾಜ ಪಿಳ್ಳಿಕಟ್ಟಿ, ಸುಭಾಸ್ ದೊಡ್ಡಮನಿ, ಶ್ರೀಕಾಂತ ಉಗ್ಗನವರ, ಆನಂದ ಹೆಗ್ಗಣ್ಣನವರ, ಅಶೋಕ ದೊಡ್ಡಮನಿ, ಅಣ್ಣಯ್ಯ ಹಿರೇಮಠ, ಮಹದೇವಪ್ಪ ಹರವಿ, ನಿಸೀಮಪ್ಪ ಬೆಳಗಾಲಪೇಟೆ, ಹನುಮಂತಪ್ಪ ಪಾಟೀಲ, ಶ್ರೀಕಾಂತ ಮೋರೆ, ಪ್ರೇಮಾ ಹರಿಜನ, ಅನಂತಗೌಡ ಪಾಟೀಲ, ಪ್ರಕಾಶಗೌಡ ಪಾಟೀಲ, ಶಂಕ್ರಣ್ಣ ಪಾಟೀಲ, ಇಸ್ಮಾಯಿಲ್‌ಸಾಬ ಎಂ.ಕೆ. ಈ ಸಂದರ್ಭದಲ್ಲಿದ್ದರು.ಬರ ಪರಿಹಾರ ಹಣ ಬಿಡುಗಡೆಗೆ ತಡವಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಆರೋಪಿಸಿ ಅನುದಾನ ಬಿಡುಗಡೆ ಮಾಡದೇ ರೈತರಿಗೆ ಕೇಂದ್ರ ಸರ್ಕಾರ ಅನ್ಯಾಯವೆಸಗಿರುವುದು ಸ್ಪಷ್ಟವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಜನರೇ ಬಿಜೆಪಿಗೆ ಬುದ್ಧಿ ಕಲಿಸಲಿದ್ದಾರೆ ಶಾಸಕ ಶ್ರೀನಿವಾಸ ಮಾನೆ ಹೇಳಿದರು.

Share this article