ಗಂಗಾವತಿ:
ಕೊಪ್ಪಳ ರಸ್ತೆಯ ಸಮರ್ಥ ಬಾರ್ ಆ್ಯಂಡ್ ರೆಸ್ಟೋರಂಟ್‌ನಲ್ಲಿ ₹ 500 ಮುಖ ಬೆಲೆಯ ಮೂರುನೋಟು (₹ 1500) ಚಲಾವಣೆ ಮಾಡುತ್ತಿದ್ದ ಹೊಸಪೇಟೆಯ ಅರವಿಂದ ನಗರದ ಕಲಂಧರ್ ಅಬ್ದುಲ್ ಹಫೀಜ್, ಸಂಡೂರಿನ ಸೈಯದ್ ಕಾಲನಿಯ ನೂರ್ ಮುಸ್ತಾಫ್ ಖಾಜಾ ಅಮೀನ್ ಸಾಬ್ ಅವರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಆದರೆ, ಮೂವರ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸದೆ ಸಹಚರರು ಎಂದು ಉಲ್ಲೇಖಿಸಲಾಗಿದೆ.
ಮೇ 2ರಂದು ಮದ್ಯ ಖರೀದಿಸಿದ ಆರೋಪಿಗಳು ₹ 1205 ನೀಡಲು ₹ 500 ಮುಖ ಬೆಲೆಯ ₹ 1500 (ಖೋಟಾ ನೋಟು) ನೀಡಿದ್ದಾರೆ. ಈ ಹಣದ ಬಗ್ಗೆ ಅನುಮಾನ ಬಂದ ಕೌಂಟರ್‌ನಲ್ಲಿ ಕುಳಿತಿದ್ದ ಗಂಗಾಧರ ವೀರೇಶಪ್ಪ ಪ್ರಶ್ನಿಸಿದ್ದಾರೆ. ಆಗ ಆರೋಪಿಗಳು ಅಲ್ಲಿಂದ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಅಲ್ಲಿನ ಸಿಬ್ಬಂದಿ ಕಾರು ಅಡ್ಡಗಟ್ಟಿ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅವರು ವಿಚಾರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ.ಈ ಹಿಂದೆ ಗಂಗಾವತಿ, ಕನಕಗಿರಿ, ಕಾರಟಗಿ ಸೇರಿದಂತೆ ಗಂಗಾವತಿಯ ಗಡಿ ಭಾಗದಲ್ಲಿ ಖೋಟಾ ನೋಟುಗಳ ಹಾವಳಿ ಹೆಚ್ಚಾಗಿತ್ತು. ಈಗ ಬೇರೆಡೆಯಿಂದ ನಗರಕ್ಕೆ ಬಂದವರಿಂದ ಖೋಟಾ ನೋಟ್‌ಗಳ ಹಾವಳಿ ಹೆಚ್ಚಾಗಿದೆ.