ಮೂಲ್ಕಿ: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ 66 ರಲ್ಲಿ ಸಾಗುತ್ತಿದ್ದ ಖಾಸಗಿ ಎಕ್ಸ್ ಪ್ರೆಸ್ ಬಸ್ಸಿಗೆ ಹಳೆಯಂಗಡಿ ಬಳಿ ಗುಡುಗ ಬಡಿದು ಮುಂಭಾಗದ ಗಾಜು ಪುಡಿಯಾದ ಅಪರೂಪದ ಘಟನೆ ನಡೆದಿದೆ. ಘಟನೆಯಲ್ಲಿ ಬಸ್ ಎದುರುಭಾಗದಲ್ಲಿ ಕುಳಿತಿದ್ದ ಪ್ರಯಾಣಿಕ ಮಹಿಳೆ, ಬಸ್ ಚಾಲಕ ಗಾಯಗೊಂಡಿದ್ದಾರೆ.ಗಿಡುಗ ಡಿಕ್ಕಿಯಾಗಿ ಬಸ್ಸಿನ ಮುಂಭಾಗದ ಗಾಜು ಪುಡಿಯಾಗಿ ಗಾಜಿನ ಚೂರುಗಳು ತನ್ನ ಮೇಲೆ ಬಿದ್ದು ಗಾಯವಾಗಿ ರಕ್ತಸೋರುತ್ತಿದ್ದರೂ ವಿಚಲಿತನಾಗದ ಲಕ್ಷ್ಮಿ ಗಣೇಶ್ ಬಸ್ಸಿನ ಚಾಲಕ ಹರೀಶ್ ಪೂಜಾರಿ ಕೂಡಲೇ ಬಸ್ ನಿಲ್ಲಿಸಿದ್ದಾರೆ. ಬಳಿಕ ಬಸ್ಸಿನ ಎದುರಿನ ಭಾಗದಲ್ಲಿ ಕುಳಿತಿದ್ದ ಮಹಿಳೆಗೆ ಪೆಟ್ಟಾಗಿರುವುದನ್ನು ಗಮನಿಸಿ, ಕೂಡಲೇ ಅವರ ಆರೈಕೆಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ. ಬಳಿಕ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದಾರೆ.