ದುಗ್ಗಳ ಸದಾನಂದ
ಕುಟುಂಬಗಳ ಕೊಡವ ನಡುವಿನ ಹಾಕಿ ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಗುರುವಾರದ ಪಂದ್ಯಗಳಲ್ಲಿ ನಾಪಂಡ, ಚೇಂದಂಡ, ಚೆಟ್ಟೋಳಂಡ, ಸೋಮಯಂಡ, ಮಚ್ಚಾರಂಡ, ಕಂಗಂಡ, ಮಾತ್ರಂಡ ಸೇರಿದಂತೆ ವಿವಿಧ ತಂಡಗಳು ಮುನ್ನಡೆ ಸಾಧಿಸಿದವು.
ದಿನದ ಪಂದ್ಯದಲ್ಲಿ ಕಂಗಂಡ ಮತ್ತು ಮಾಚಮಾಡ ತಂಡಗಳು ಸಮಬಲ ಸಾಧಿಸಿದವು. ಬಳಿಕ ಟೈಬ್ರೇಕರ್ ನಲ್ಲಿ ಕಂಗಡ ತಂಡವು ನಾಲ್ಕು ಗೋಲು ಗಳಿಸಿದರೆ ಮಾಚಮಾಡ ತಂಡ ಎರಡು ಗೋಲು ಗಳಿಸಿತು. ಕಂಗಂಡ ಮಾಚಮಾಡ ವಿರುದ್ಧ ಗೆಲವು ಸಾಧಿಸಿತು.ಮತ್ತೊಂದು ಟೈ ಬ್ರೇಕರ್ ಪಂದ್ಯದಲ್ಲಿ ಪೊಂಜಂಡ ತಂಡವು ಕಾಲಚಂಡ ವಿರುದ್ಧ 4-3 ಅಂತರದ ಗೆಲವು ಸಾಧಿಸಿತು. ಕೊಟ್ಟಂಗಡ ಮತ್ತು ಅಚ್ಚಪಂಡ ತಂಡಗಳ ನಡುವೆಯೂ ಸಮಬಲದ ಸೆಣಸಾಟ ನಡೆಯಿತು. ಬಳಿಕ ನಡೆದ ಟೈ ಬ್ರೇಕರ್ ನಲ್ಲಿ ಕೊಟ್ಟಂಗಡ ತಂಡದ ಆಟಗಾರರು ಐದು ಗೋಲು ಗಳಿಸಿದರು. ಅಚ್ಚಪಂಡ ತಂಡದ ಆಟಗಾರರು 3 ಗೋಲು ಗಳಿಸಿದರು. ಈ ಪಂದ್ಯದಲ್ಲಿ ಕೊಟ್ಟಂಗಡ ತಂಡ ಗೆಲವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.
ಸೋಮಯಂಡ ಮತ್ತು ನಿಡುಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸೋಮಯಂಡ 3- 0 ಅಂತರದಿಂದ ಗೆಲವು ಸಾಧಿಸಿದರೆ ಶಾಂತೇಯಂಡ ಮತ್ತು ಮಚ್ಚಾರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಚ್ಚಾರಂಡ 2- 1 ಅಂತರದಿಂದ ಶಾಂತೆಯಂಡ ವಿರುದ್ಧ ಜಯ ಗಳಿಸಿತು. ಮಾತ್ರ ತಂಡಕ್ಕೆ ಅಜ್ಜಟ್ಟಿರ ವಿರುದ್ಧ 4 0 ಅಂತರದ ಗೆಲವು ಲಭಿಸಿತು.
...........
ಮೈದಾನ ಒಂದು9 ಗಂಟೆಗೆ: ಮೇರಿಯಂಡ-ಅಜ್ಜಿನಂಡ10 ಗಂಟೆಗೆ: ಮೇಚಂಡ-ನಂಬುಡಮಾಡ1 ಗಂಟೆಗೆ: ಬೊಪ್ಪಂಡ-ಕೋಡಿರ
ಮೈದಾನ ಎರಡು
10 ಗಂಟೆಗೆ: ಬಾಚಿನಡಂಡ-ಕಳ್ಳಿಚಂಡ
1 ಗಂಟೆಗೆ: ಮುಕ್ಕಾಟಿರ(ಕಡಗದಾಳು)-ಚೆರುಮಮದಂಡ
2 ಗಂಟೆಗೆ: ಪಟ್ಟಡ-ಪಟ್ಟಮಾಡ.............ಮೈದಾನ 3
9 ಗಂಟೆಗೆ: ಕೂತಂಡ-ಮೀದೇರಿರ10 ಗಂಟೆಗೆ: ಬೇಪಾಡಿಯಂಡ-ಅಲ್ಲಂಡ
11 ಗಂಟೆಗೆ: ಮುಂಡಂಡ-ಚಿಂದಮಾಡ1 ಗಂಟೆಗೆ: ಮಾಪಣಮಾಡ-ಮಾಲೇಟಿರ(ಕುಂದ)
2 ಗಂಟೆಗೆ: ಮೂಕಂಡ-ಕುಪ್ಪಂಡ (ನಾಂಗಾಲ)