ಖ್ಯಾತ ತಾರೆಯರಿಂದ ಹಾಸನಾಂಬೆ ದರ್ಶನ

KannadaprabhaNewsNetwork |  
Published : Oct 14, 2025, 01:00 AM IST
13ಎಚ್ಎಸ್ಎನ್20 :  | Kannada Prabha

ಸಾರಾಂಶ

ಹಾಸನದ ಖ್ಯಾತ ಚಲನಚಿತ್ರ ನಟಿ ತಾರಾ ಮತ್ತು ನಟಿ ಅಂಜಲಿ ಅವರು ಸೋಮವಾರ ಹಾಸನಾಂಬೆ ದೇವಿಯ ದರ್ಶನ ಪಡೆದರು. ಇಬ್ಬರೂ ತಾಯಿಗೆ ಮೊಡಿಲಕ್ಕಿ, ಸೀರೆ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ತಾರಾ, ಹಾಸನ ನನಗೆ ಹೊಸ ಸ್ಥಳವಲ್ಲ. ನಾನು ಬಣ್ಣ ಹಚ್ಚಿದ ಮೊದಲ ಚಿತ್ರವೂ ಈ ಜಿಲ್ಲೆಯಲ್ಲಿ ಶೂಟ್ ಆಗಿತ್ತು. ಬಯಲುಸೀಮೆ ಹುಡುಗ, ಮಲೆನಾಡು ಹುಡುಗಿ, ಮೈಸೂರು ಹುಡುಗ ಸೇರಿದಂತೆ ಹಲವು ಚಿತ್ರಗಳ ಸ್ಮೃತಿಗಳು ಹಾಸನಕ್ಕೆ ಸಂಬಂಧಿಸಿದೆ ಎಂದು ನೆನಪಿಸಿಕೊಂಡರು. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಹಾಸನಾಂಬೆ ದರ್ಶನಕ್ಕೆ ಬರುತ್ತಿದ್ದೇನೆ. ಆದರೆ ಈ ಬಾರಿ ದೇವಾಲಯದಲ್ಲಿ ಕಂಡುಬಂದ ಅನುಕೂಲತೆಗಳು, ಶಿಸ್ತಿನ ವ್ಯವಸ್ಥೆ ಹಾಗೂ ಭಕ್ತರಿಗಾದ ಸೌಲಭ್ಯಗಳು ಪ್ರಶಂಸನೀಯವಾಗಿವೆ. ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಎಲ್ಲರಿಗೂ ಧನ್ಯವಾದಗಳು ಎಂದರು.

ಹಾಸನ: ಖ್ಯಾತ ಚಲನಚಿತ್ರ ನಟಿ ತಾರಾ ಮತ್ತು ನಟಿ ಅಂಜಲಿ ಅವರು ಸೋಮವಾರ ಹಾಸನಾಂಬೆ ದೇವಿಯ ದರ್ಶನ ಪಡೆದರು. ಇಬ್ಬರೂ ತಾಯಿಗೆ ಮೊಡಿಲಕ್ಕಿ, ಸೀರೆ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ದರ್ಶನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ತಾರಾ, ಹಾಸನ ನನಗೆ ಹೊಸ ಸ್ಥಳವಲ್ಲ. ನಾನು ಬಣ್ಣ ಹಚ್ಚಿದ ಮೊದಲ ಚಿತ್ರವೂ ಈ ಜಿಲ್ಲೆಯಲ್ಲಿ ಶೂಟ್ ಆಗಿತ್ತು. ಬಯಲುಸೀಮೆ ಹುಡುಗ, ಮಲೆನಾಡು ಹುಡುಗಿ, ಮೈಸೂರು ಹುಡುಗ ಸೇರಿದಂತೆ ಹಲವು ಚಿತ್ರಗಳ ಸ್ಮೃತಿಗಳು ಹಾಸನಕ್ಕೆ ಸಂಬಂಧಿಸಿದೆ ಎಂದು ನೆನಪಿಸಿಕೊಂಡರು. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಹಾಸನಾಂಬೆ ದರ್ಶನಕ್ಕೆ ಬರುತ್ತಿದ್ದೇನೆ. ಆದರೆ ಈ ಬಾರಿ ದೇವಾಲಯದಲ್ಲಿ ಕಂಡುಬಂದ ಅನುಕೂಲತೆಗಳು, ಶಿಸ್ತಿನ ವ್ಯವಸ್ಥೆ ಹಾಗೂ ಭಕ್ತರಿಗಾದ ಸೌಲಭ್ಯಗಳು ಪ್ರಶಂಸನೀಯವಾಗಿವೆ. ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಎಲ್ಲರಿಗೂ ಧನ್ಯವಾದಗಳು ಎಂದರು.

ದೇವಿಯ ದರ್ಶನಕ್ಕಾಗಿ ಬೆಳಿಗ್ಗೆ ೧೦.೩೦ರಿಂದ ಮಧ್ಯಾಹ್ನ ೧೨.೩೦ರವರೆಗೆ ಗಣ್ಯರಿಗೆ ಅವಕಾಶ ಕಲ್ಪಿಸಿರುವುದು ಉತ್ತಮ ಕ್ರಮವೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯಲ್ಲಿ ತಾರಾ ಅವರು ಹಾಸನಾಂಬೆ ತಾಯಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ, ಕರ್ನಾಟಕದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು