ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಹಣ್ಣು-ಹಂಪಲು ವಿತರಿಸಿದ ಮಾಜಿ ಸಂಸದ ಧ್ರುವನಾರಾಯಣ್ ಅಭಿಮಾನಿಗಳು

KannadaprabhaNewsNetwork |  
Published : Aug 01, 2024, 12:16 AM IST
31ಕೆಜಿಎಲ್2ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ ಧ್ರುವನಾರಾಯಣ್ ಅವರ ಭಾವಚಿತ್ರಕ್ಕೆ ಹಾರಹಾಕುವ ಮೂಲಕ 63ನೇ ಜನ್ನದಿನಾಚರಣೆ ಆಚರಿಸಲಾಯಿತು. ಶಾಸಕ  ಎ ಆರ್ ಕೖಷ್ಣಮೂತಿ೯, ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ, ಮಾಜಿ ಆರ್ ನರೇಂದ್ರ, ಬಸ್ತಿಪುರ ಶಾಂತು, ಕೊಪ್ಪಾಳಿನಾಯಕ, ಅಕ್ಮಲ್ ಇದ್ದಾರೆ. | Kannada Prabha

ಸಾರಾಂಶ

ಕೊಳ್ಳೇಗಾಲ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಯಲ್ಲಿನ ಹೊರರೋಗಿಗಳಿಗೆ ಹಣ್ಣು, ಹಂಪಲು ವಿತರಿಸುವ ಮೂಲಕ ಮಾಜಿ ಸಂಸದ ಆರ್ ಧ್ರುವನಾರಾಯಣ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕೊಳ್ಳೇಗಾಲ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಯಲ್ಲಿನ ಹೊರರೋಗಿಗಳಿಗೆ ಹಣ್ಣು, ಹಂಪಲು ವಿತರಿಸುವ ಮೂಲಕ ಮಾಜಿ ಸಂಸದ ಆರ್ ಧ್ರುವನಾರಾಯಣ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದರು.

ಮೊದಲಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಧೃವನಾರಾಯಣ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಶಾಸಕ ಆರ್ ಧ್ರುವನಾರಾಯಣ್ ಚಾಲನೆ ನೀಡಿ ಮಾತನಾಡಿ, ಧ್ರುವನಾರಾಯಣ್ ಅವರು ಅಭಿವೃದ್ಧಿ ಮೂಲಕ ಹಾಗೂ ಅಭಿಮಾನಿಗಳ ಜೊತೆಗೆ ಎಂದೆಂದಿಗೂ ಜೀವಂತವಾಗಿದ್ದಾರೆ ಎಂದರು. ಬಳಿಕ ಶಾಸಕ ಕೃಷ್ಣಮೂರ್ತಿ, ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ, ಮಾಜಿ ಶಾಸಕ ಆರ್ ನರೇಂದ್ರ ಸೇರಿದಂತೆ ಇನ್ನಿತರ ಗಣ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಹೊರರೋಗಿಗಳಿಗೆ ಹಣ್ಣು, ಹಂಪಲು ವಿತರಿಸುವ ಜೊತೆಗೆ ಆರೋಗ್ಯ ವಿಚಾರಿಸಿದರು. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ, ಉಗ್ರಾಣ ನಿಗಮ ಅಧ್ಯಕ್ಷ ಎಸ್.ಜಯಣ್ಣ, ಮಾಜಿ ಶಾಸಕ ಆರ್.ನರೇಂದ್ರ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಹಣ್ಣು ಹಂಪಲನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಮಧುವನಹಳ್ಳಿ ಶಿವಕುಮಾರ್, ಜಿಪಂ ಮಾಜಿ ಸದಸ್ಯ ಕೊಪ್ಪಳಿ ಮಹದೇವನಾಯಕ, ನಗರಸಭೆ ಸದಸ್ಯರಾದ ಶಾಂತರಾಜು, ಮಂಜುನಾಥ್, ರಾಘವೇಂದ್ರ, ಮಾಜಿ ಸದಸ್ಯ ಶಾಂತರಾಜು, ಅಕ್ಮಲ್, ರಮೇಶ್, ಮುಖಂಡರಾದ ಮಂಗಲ ಪುಟ್ಟರಾಜು, ರಾಜೇಂದ್ರ, ನಾಗರಾಜು, ಮುಡಿಗುಂಡ ಶಾಂತರಾಜು, ಸಿದ್ದಪ್ಪಾಜಿ, ನಂಜುಂಡಸ್ವಾಮಿ ಇದ್ದರು. ಮಾಜಿ ಸಂಸದರೂ, ನಮ್ಮೆಲ್ಲರ ಮೆಚ್ಚಿನ ನಾಯಕರಾದ ಆರ್ ಧ್ರುವನಾರಾಯಣ್ ಅವರು ಇಂದು ನಮ್ಮೊಂದಿಗಿಲ್ಲ, ಆದರೆ ಅವರು ತಮ್ಮ ಸರಳತೆ, ನೈಜತೆ ಮೂಲಕ ನಮ್ಮೊಡನೆ ಕಳೆದ ಕ್ಷಣಗಳ ಮೂಲಕ ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅವರು ಶಾಸಕರಾಗಿ, 2 ಬಾರಿ ಸಂಸದರಾಗಿ ಜಿಲ್ಲೆಗೆ ಅನೇಕ ಜನಪರ ಕೊಡುಗೆ ನೀಡುವ ಮೂಲಕ ಜನಮಾನಸದಲ್ಲಿ ಮರೆಯಲಾಗದ ರಾಜಕೀಯ ನೇತಾರರಾಗಿ ಉಳಿದಿದ್ದಾರೆ.- ಅಕ್ಮಲ್ ಪಾಶಾ, ನಗರಸಭೆ ಮಾಜಿ ಉಪಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌