ಚಾಮರಾಜನಗರದಲ್ಲಿ ಇತಿಹಾಸ ಉಪನ್ಯಾಸಕ ಡಿ.ಲಕ್ಷ್ಮಣ್‌ಗೆ ಬೀಳ್ಕೊಡುಗೆ

KannadaprabhaNewsNetwork |  
Published : Sep 01, 2024, 01:54 AM IST
ಚಾಮರಾಜನಗರ ತಾಲೂಕಿನ  ಚಂದಕವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸದ ಹಿರಿಯ ಉಪನ್ಯಾಸಕ ಡಿ.ಲಕ್ಷ್ಮಣ್  ವಯೋ ನಿವೃತ್ತಿ ಹೊಂದಿದ ಕಾರಣ ಅವರನ್ನು ಕಾಲೇಜು ವತಿಯಿಂದ ಆತ್ಮೀಯವಾಗಿ ಬೀಳ್ಕೋಡಲಾಯಿತು. | Kannada Prabha

ಸಾರಾಂಶ

ಚಾಮರಾಜನಗರ ತಾಲೂಕಿನ ಚಂದಕವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸದ ಹಿರಿಯ ಉಪನ್ಯಾಸಕ ಡಿ.ಲಕ್ಷ್ಮಣ್ ವಯೋ ನಿವೃತ್ತಿ ಹೊಂದಿದ ಕಾರಣ ಅವರನ್ನು ಕಾಲೇಜು ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಚಂದಕವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸದ ಹಿರಿಯ ಉಪನ್ಯಾಸಕ ಡಿ.ಲಕ್ಷ್ಮಣ್ ವಯೋ ನಿವೃತ್ತಿ ಹೊಂದಿದ ಕಾರಣ ಅವರನ್ನು ಕಾಲೇಜು ವತಿಯಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಈ ವೇಳೆ ಉಪನ್ಯಾಸಕ ಪಿ.ನಟರಾಜ್ ಮಾತನಾಡಿ, ಕಾಲೇಜಿಗೆ ಹಿರಿಯರಾಗಿ ಲಕ್ಷ್ಮಣ್ ಅವರು ನಮಗೆ ಮಾರ್ಗದರ್ಶನ ನೀಡುತ್ತಿದ್ದರು. ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ದೊರೆಯುತ್ತಿತ್ತು, ಕಾಲೇಜಿನಲ್ಲಿ ಎಲ್ಲರೊಡನೆ ಉತ್ತಮ ಬಾಂಧವ್ಯ ಹೊಂದಿದ್ದರು ಅವರ ನಿವೃತ್ತಿ ಸಹಜವಾಗೆ ಬೇಸರ ತರಿಸುತ್ತದೆ ಎಂದರು.ನಿವೃತ್ತ ಉಪ ನಿರ್ದೇಶಕ ಡಿ.ಎಸ್.ಕೃಷ್ಣಮೂರ್ತಿ ಮಾತನಾಡಿ, ಪ್ರತಿಯೊಬ್ಬರು ಸರ್ಕಾರಿ ವೃತ್ತಿಯಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು, ಸಂಸ್ಥೆಯ ಅಭಿವೃದ್ಧಿಗೆ ಸದಾ ದುಡಿಯಬೇಕು. ನಾವು ನಶಿಸುತ್ತೇವೆ ಆದರೆ ನಮ್ಮ ಸೇವೆ ಸ್ಮರಣೀಯವಾಗಿರುತ್ತದೆ ಎಂದರು.ನಿವೃತ್ತಿಯಾಗುತ್ತಿರುವ ಡಿ.ಲಕ್ಷ್ಮಣ್ ಮಾತನಾಡಿ, ನನ್ನ ವೃತ್ತಿ ಜೀವನದಲ್ಲಿ ಆತ್ಮೀಯತೆಯನ್ನು ಕಂಡುಕೊಂಡೆ, ವಯಸ್ಸಿನಲ್ಲಿ ಹಿರಿಯನಾದರೂ ವೃತ್ತಿ ಜೀವನದಲ್ಲಿ ಕಿರಿಯವನಾಗಿ ಕೆಲಸ ಮಾಡಿದ ಸಂತೃಪ್ತಿ ನನಗಿದೆ. ವರ್ಗಾವಣೆಗೆ ಅವಕಾಶವಿತ್ತು. ಇಲ್ಲಿನ ವಾತಾವರಣದಿಂದ ವರ್ಗಾವಣೆಗೆ ಮನಸ್ಸು ಮಾಡದೆ ಚಂದಕವಾಡಿ ಸರ್ಕಾರಿ ಕಾಲೇಜಿನಲ್ಲೆ ನಿವೃತ್ತಿ ಹೊಂದುತ್ತಿದ್ದೇನೆ ಎಂದರು. ಇದೆ ವೇಳೆ ಡಿ.ಲಕ್ಷ್ಮಣ್, ವರ್ಗಾವಣೆಗೊಂಡ ಉಪನ್ಯಾಸಕಿಯರಾದ ಸುಧಾ.ಬಿ.ವಿ. ಮತ್ತು ಶಕುಂತಲಾ ಹೊಸದಾಗಿ ಕರ್ತವ್ಯಕ್ಕೆ ಹಾಜರಾದ ಕೇಶವ್ ಮತ್ತು ಸಾವಿತ್ರಿ ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಚಂದ್ರಶೇಖರ್, ದಡದಹಳ್ಳಿ ರಮೇಶ್, ಮುನೀರ್, ನಿವೃತ್ತ ಪ್ರಾಂಶುಪಾಲ ಬಂಗಾರನಾಯಕ, ಡಿ.ಎಸ್.ಲಿಂಗರಾಜು, ಮಂಜುನಾಥ್, ಪ್ರಿಯಶಂಕರ್, ಸತೀಶ್, ಪ್ರಭುಸ್ವಾಮಿ, ಗಾಯಿತ್ರಿ, ಹೇಮಾ, ಶಿವಸ್ವಾಮಿ, ಅಮಚವಾಡಿ ಮೂರ್ತಿ, ಪಟ್ಟೇಶ್, ಶಾಜೀಯ ಹಸನ್, ರತ್ನಮ್ಮ,ಬಸವಣ್ಣ, ಸಿದ್ದರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!