ಕನ್ನಡಪ್ರಭ ವಾರ್ತೆ ಇಳಕಲ್ ನಗರದ ಸಾರಿಗೆ ಘಟಕದಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಮರೇಶ ಗುಣಸಾಗರ ಹಾಗೂ ರಮೇಶ್ ನಾಗಲಿಕ ಅವರಿಗೆ ಇಳಕಲ್ ಸಾರಿಗೆ ಘಟಕದಲ್ಲಿ ಬೀಳ್ಕೊಡಲಾಯಿತು.
ಇಲಾಖೆಯ ಪರವಾಗಿ ಸಾರಿಗೆ ಘಟಕದ ವ್ಯವಸ್ಥಾಪಕ ಜಿ.ಎಸ್ ಬಿರಾದಾರ್ ಸತ್ಕರಿಸಿದರು. ಬಳಿಕ ಮಾತನಾಡಿದ ಅವರು, ನಿವೃತ್ತಿ ಹೊಂದಿದ ಇಬ್ಬರು ಚಾಲಕರು ತಮ್ಮ ಸೇವಾ ಅವಧಿಯಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಿದ್ದಾರೆ. ಇಂದು ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಅವರ ಜೀವನ ಸುಖಕರವಾಗಲಿ ಎಂದು ಆಶಿಸಿದರು.
ಇಲ್ಲಿಯವರೆಗೂ ಸಾರಿಗೆ ಘಟಕದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇಬ್ಬರು ಚಾಲಕರು ಗೆಳೆಯರ ಆತ್ಮೀಯತೆಗೆ ಭಾವುಕರಾದರು, ಇವರನ್ನು ಸನ್ಮಾನ ಮಾಡಲು ಬಂದ ಅವರ ಎಲ್ಲ ಗೆಳೆಯರ ಬಳಗದವರು ಸಹಿತ ಭಾವುಕರಾದ ಘಟನೆ ನಡೆಯಿತು.