ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಜಿನ್ನೇನಹಳ್ಳಿ ಗೇಟ್ ಬಳಿಯಿರುವ ರೈತ ಕೇಶವಣ್ಣ ಎಂಬುವವರ ಎರಡು ಮಿಶ್ರತಳಿ ಸೀಮೆ ಹಸುಗಳ ಮೈತೊಳೆದು ಮೈಮೇಲೆ ಸೀರೆ ಹಾಕಿ ಹಣೆಗೆ ಅರಿಶಿನ ಕುಂಕುಮವಿಟ್ಟು ಕೊರಳಿಗೆ ಹೂವಿನ ಹಾರವನ್ನು ಹಾಕಿ ಸಿಂಗರಿಸಲಾಯಿತು. ಬಳಿಕ ಟೇಬಲ್ ಮೇಲೆ ಫಲ-ಪುಷ್ಪಗಳು ಹಾಗೂ ವಿವಿಧ ಬಗೆಯ ಸಿಹಿ ತಿನಿಸುಗಳನ್ನು ಇರಿಸಿ ಸಿಂಗಾರಗೊಂಡಿರುವ ಗರ್ಭಿಣಿ ಹಸುಗಳನ್ನು ನಿಲ್ಲಿಸಿ ವಿಶೇಷ ಪೂಜೆ ಮಾಡುವ ಮೂಲಕ ಸೀಮಂತ ಕಾರ್ಯವನ್ನು ನೆರವೇರಿಸಲಾಯಿತು. ಮಹಿಳೆಯರು ಹಸುಗಳ ಹಣೆಗೆ ಕುಂಕುಮ ಇಟ್ಟು ಅಕ್ಷತೆ ಹಾಕಿ ಹರಸಿದರು. ಹಿರಿಯ ತಾಯಂದಿರು ಸೋಬಾನ ಪದ ಹಾಡುವ ಮೂಲಕ ಸೀಮಂತ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಕಾಲಭೈರವೇಶ್ವರ ಟ್ರೇಡರ್ಸ್ ಮಾಲೀಕರಾದ ಜೆ.ಎಸ್. ಕಾರ್ತಿಕ್, ಜೆ.ಎಸ್. ಆಕರ್ಷ, ಗೋದ್ರೆಜ್ ಕಂಪನಿಯ ಸುನಿಲ್, ಎನ್. ಶ್ರೀಕಂಠ, ಡಾ. ಕವಿತಾ, ಪ್ರಮುಖರಾದ ಸುದೀಪ್, ಪ್ರಶಾಂತ್, ಕೇಶವಣ್ಣ, ಮಂಜುನಾಥ್ ಹಾಗೂ ಇತರರು ಭಾಗವಹಿಸಿದ್ದರು.