ರೈತ ವಿಷ ಸೇವಿಸಿ, ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ವಿಫಲ ಯತ್ನ

KannadaprabhaNewsNetwork |  
Published : Sep 27, 2025, 12:00 AM IST
26ಕೆಆರ್ ಎಂಎನ್ 5.ಜೆಪಿಜಿರಾಮನಗರದ ಅರಣ್ಯ ಭವನದ ಮುಂಭಾಗ ರೈತನೊಬ್ಬ ತಲೆ ಮೇಲೆ ಡೀಸೆಲ್ ಸುರಿದುಕೊಳ್ಳುತ್ತಿರುವುದು. | Kannada Prabha

ಸಾರಾಂಶ

ರಾಮನಗರ: ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಓರ್ವ ರೈತ ವಿಷ ಸೇವಿಸಿ, ಮತ್ತೊರ್ವ ರೈತ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿ ಕೊಳ್ಳಲು ಯತ್ನಿಸಿದ ಘಟನೆ ನಗರದ ಹೊರ ವಲಯದ ಜಿಲ್ಲಾ ಅರಣ್ಯ ಭವನದ ಮುಂಭಾಗ ಶುಕ್ರವಾರ ನಡೆದಿದೆ.

ರಾಮನಗರ: ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಓರ್ವ ರೈತ ವಿಷ ಸೇವಿಸಿ, ಮತ್ತೊರ್ವ ರೈತ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿ ಕೊಳ್ಳಲು ಯತ್ನಿಸಿದ ಘಟನೆ ನಗರದ ಹೊರ ವಲಯದ ಜಿಲ್ಲಾ ಅರಣ್ಯ ಭವನದ ಮುಂಭಾಗ ಶುಕ್ರವಾರ ನಡೆದಿದೆ.

ತಾಲೂಕಿನ ಕುಂಬಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಕಾಡಾನೆ ದಾಳಿ ಮಾಡಿ ನೂರಾರು ತೆಂಗಿನ ಮರ ಸೇರಿದಂತೆ ಸಾಕಷ್ಟು ಬೆಳೆಯನ್ನು ಹಾನಿ ಮಾಡಿದೆ. ಇದರಿಂದ ಮನನೊಂದ ರೈತರು ಡಿಎಫ್ ಒ ಕಚೇರಿಗೆ ಬೀಗ ಜಡಿದು ಜಿಲ್ಲಾ ಅರಣ್ಯ ಭವನದ ಮುಂದೆ ವಿಷದ ಬಾಟಲಿ ಹಾಗೂ ಡೀಸೆಲ್ ಕ್ಯಾನ್ ಹಿಡಿದು ಪ್ರತಿಭಟನೆ ನಡೆಸಿದರು.

ನಮ್ಮ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳೇ ಹೊಣೆಗಾರರು ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು ಡಿಎಫ್ ಒ ರಾಮಕೃಷ್ಣಪ್ಪ ಹಾಗೂ ಎಸಿಎಫ್ ಪುಟ್ಟಮ್ಮ ಅವರನ್ನು ತರಾಟೆ ತೆಗೆದುಕೊಂಡರು.

ಈ ವೇಳೆ ವಿಷ ಸೇವಿಸಲು ಮುಂದಾದ ರೈತ ಮಹದೇವು ಅವರ ಕೈಯಿಂದ ಪೊಲೀಸರು ಬಲವಂತವಾಗಿ ವಿಷದ ಬಾಟಲಿ ಯನ್ನು ಕಸಿದು ಕೊಂಡರು. ಇದಾದ ಬಳಿಕ ಮತ್ತೋರ್ವ ರೈತ ಡೀಸೆಲ್ ಅನ್ನು ತಲೆ ಮೇಲಿಂದ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ವಿಫಲ ಯತ್ನ ನಡೆಸಿದರು.

ಕಾಡಾನೆಗಳು ನಿರಂತರವಾಗಿ ದಾಳಿ ಮಾಡುತ್ತಲೇ ಇವೆ. ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಈಗ ಕಾಡಾನೆ ದಾಳಿಗೆ ತೆಂಗು, ರೇಷ್ಮೆ ಬೆಳೆ ನಾಶವಾಗಿದೆ. ತಾಲ್ಲೂಕಿನ ಕುಂಬಾಪುರ, ದೇವರದೊಡ್ಡಿ, ಚನ್ನಮಾನಹಳ್ಳಿ, ಸೇರಿದಂತೆ ಹಲವು ಗ್ರಾಮಗಳಲ್ಲಿ ನಿರಂತರ ಕಾಡಾನೆ ದಾಳಿಯಿಂದಾಗಿ ರೈತರು ಹೈರಾಣಾಗಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾಡಾನೆ ಹಾವಳಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಲಹೆ ಯಂತೆ ಕುಂಬಾಪುರ ಗ್ರಾಮದಲ್ಲಿ ಮೈಕ್ ಅಳವಡಿಸಿದ್ದೆವು. ಆದರೆ, ಸಮೀಪದಲ್ಲಿ ಜಿಲ್ಲಾಧಿಕಾರಿ ನಿವಾಸ ಇದೆ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿ ಪೊಲೀಸರನ್ನು ಕಳುಹಿಸಿ ಮೈಕ್ ಕಿತ್ತು ಕೊಂಡು ಹೋಗಿದ್ದಾರೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು.

--------------------------

26ಕೆಆರ್ ಎಂಎನ್ 5.ಜೆಪಿಜಿ

ರಾಮನಗರದ ಅರಣ್ಯ ಭವನದ ಮುಂಭಾಗ ರೈತನೊಬ್ಬ ತಲೆ ಮೇಲೆ ಡೀಸೆಲ್ ಸುರಿದುಕೊಳ್ಳುತ್ತಿರುವುದು.

-------------------------

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ