ದಾಬಸ್‍ಪೇಟೆ: ಹೊಲದ ಬದಿಯಲ್ಲಿ ಹೊತ್ತಿದ್ದ ಬೆಂಕಿ ಆರಿಸಲು ಹೋಗಿದ್ದ ವ್ಯಕ್ತಿಗೆ ಬೆಂಕಿ ತಗುಲಿದ ಪರಿಣಾಮ ಸ್ಥಳದಲ್ಲೇ ಸಜೀವ ದಹನವಾದ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರ ಗ್ರಾಮದ ರೈತ ಕೃಷ್ಣಪ್ಪ (55) ಮೃತ ದುರ್ದೈವಿಯಾಗಿದ್ದು, ಈತ ತನ್ನ ಜಮೀನಿನಲ್ಲಿ ಹೊತ್ತಿದ್ದ ಬೆಂಕಿಯನ್ನು ಕಂಡು ಆರಿಸಲು ಹೋದಾಗ ಬೆಂಕಿಯೂ ಮೈಗೆಲ್ಲಾ ಆವರಿಸಿಕೊಂಡಿದೆ. ಈ ವೇಳೆ ಮೂರ್ಛೆರೋಗವೂ ಕಾಣಿಸಿಕೊಂಡ ಕಾರಣ ತೀವ್ರ ಸುಟ್ಟಗಾಯಗಳಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನಾ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.