ಶಿರಾ: ಒಬ್ಬ ಸಾಮಾನ್ಯ ರೈತ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಯರಗುಂಟೆ ಗ್ರಾಮದ ದಿಲೀಪ್‌ಕುಮಾರ್ ಅವರು ಸಾಕ್ಷಿ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಶಿರಾ: ಒಬ್ಬ ಸಾಮಾನ್ಯ ರೈತ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಯರಗುಂಟೆ ಗ್ರಾಮದ ದಿಲೀಪ್‌ಕುಮಾರ್ ಅವರು ಸಾಕ್ಷಿ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಯರಗುಂಟೆ ಗ್ರಾಮದಲ್ಲಿ ಜೀನಿ ಸಿರಿಧಾನ್ಯಗಳ ಹೆಲ್ತ್ ಮಿಲೇಟ್ ಮಿಕ್ಸ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಘಟಕವನ್ನು ವೀಕ್ಷಣೆ ಮಾಡಿ ಮಾತನಾಡಿದರು. ದಿಲೀಪ್ ಕುಮಾರ್ ಅವರು ಅದ್ಭುತವಾದ ಸಾಧನೆ ಮಾಡಿದ್ದಾರೆ. ಕುಗ್ರಾಮದಿಂದ ರಾಷ್ಟ್ರಮಟ್ಟಕ್ಕೆ ಬೆಳೆದಿದ್ದಾರೆ. ಸುಮಾರು ೫೦೦ ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ಸಿರಿಧಾನ್ಯಗಳಿಂದ ಹೊಸ ಉತ್ಪನ್ನಗಳನ್ನು ತಯಾರಿಸಿ ಅದರಲ್ಲಿ ಯಶಸ್ಸು ಗಳಿಸುವುದೆಂದರೆ ಸಾಮಾನ್ಯವಾದ ವಿಷಯವಲ್ಲ. ದೇಶದ ಲಕ್ಷಾಂತರ ಮಕ್ಕಳಿಗೆ ದೊಡ್ಡವರಿಗೆ ಆರೋಗ್ಯಕರವಾದ ಹೆಲ್ತ್ ಮಿಕ್ಸ್ ನೀಡುತ್ತಿದ್ದಾರೆ. ಪ್ರತಿ ತಿಂಗಳು ಅವರು ತಯಾರಿಸುತ್ತಿರುವ ಉತ್ಪನ್ನಕ್ಕೆ ಬೇಡಿಕೆ ಹೆಚ್ಚುತ್ತಿದೆ ಎಂದರು.
ದಿಲೀಪ್ ಕುಮಾರ್ ಅವರು ತಿಂಗಳಿಗೆ ೧೦ ಕೋಟಿ ವ್ಯವಹಾರ ಮಾಡಿದರೂ ಸಾಮಾನ್ಯರಂತೆಯೇ ಜೀವನ ಮಾಡುತ್ತಿದ್ದಾರೆ ಜೊತೆಗೆ ಹಲವಾರು ಸರ್ಕಾರಿ ಶಾಲೆಗಳ ದುರಸ್ತಿಗೆ ಸಹಾಯಧನ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಶಾಸಕ ಟಿ.ಬಿ. ಜಯಚಂದ್ರ ಮಾತನಾಡಿ, ಜೀನಿ ಸಿರಿಧಾನ್ಯ ಉತ್ಪನ್ನ ಶಿರಾ ತಾಲೂಕಿನಲ್ಲಿ ಸ್ಥಾಪಿಸಿರುವ ದಿಲೀಪ್ ಕುಮಾರ್ ಅವರ ಸಾಧನೆ ಮೆಚ್ಚುವಂತಹದ್ದು ಎಂದರು.
ಈ ಸಂದರ್ಭದಲ್ಲಿ ಜೀನಿ ಹೆಲ್ತ್ ಮಿಲೇಟ್ ಮಿಕ್ಸ್ ಮಾಲೀಕ ದಿಲೀಪ್ ಕುಮಾರ್, ಶಾಸಕ ಎಸ್.ಆರ್. ಶ್ರೀನಿವಾಸ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಮೇಶ್, ಮಧುಗಿರಿ ಉಪ ನಿರ್ದೇಶಕಿ ದೀಪಶ್ರೀ, ತಾಲೂಕು ಸಹಾಯಕ ನಿರ್ದೇಶಕ ಎಚ್. ನಾಗರಾಜ್, ಕೃಷಿ ಇಲಾಖೆಯ ಸತ್ಯನಾರಾಯಣ ಸೇರಿದಂತೆ ಹಲವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.