ಸಾವಯವ ಕೃಷಿಯಿಂದ ರೈತರ ಆತ್ಮಹತ್ಯೆ ತಡೆಗಟ್ಟಲು ಸಾಧ್ಯ

KannadaprabhaNewsNetwork | Published : Oct 22, 2023 1:00 AM

ಸಾರಾಂಶ

ರೈತರು ಸಾವಯವ ಕೃಷಿ ಅನುಸರಿಸಿದಲ್ಲಿ ಆತ್ಮಹತ್ಯೆಯಂತಹ ಜೀವ ವಿರೋಧಿ ನಿಲುವುಗಳಿಂದ ದೂರ ಸರಿಯಬಹುದೆಂದು ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹೇಳಿದರು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ಅನುಭವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕೃಷಿ ಮೇಳಧ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಾವು ಬೆಳೆದ ಉತ್ಪನ್ನಗಳಿಗೆ ರೈತರೇ ಬೆಲೆ ನಿಗದಿ ಮಾಡುವವರೆಗೂ ಶೋಷಣೆ ತಪ್ಪಿದ್ದಲ್ಲ. ಸರ್ಕಾರ ಮತ್ತು ಮಧ್ಯವರ್ತಿಗಳು ಬೆಲೆ ನಿಗದಿ ಮಾಡುವ ಪ್ರಕ್ರಿಯೆಗೆ ಇತಿಶ್ರೀ ಹಾಡಬೇಕಿದೆ ಎಂದರು.

ಶರಣ ಸಂಸ್ಕೃತಿ ಉತ್ಸವದ ಕೃಷಿ ಮೇಳದಲ್ಲಿ ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಕನ್ನಡಪ್ರಭ ವಾರ್ತೆ, ಚಿತ್ರದುರ್ಗ ರೈತರು ಸಾವಯವ ಕೃಷಿ ಅನುಸರಿಸಿದಲ್ಲಿ ಆತ್ಮಹತ್ಯೆಯಂತಹ ಜೀವ ವಿರೋಧಿ ನಿಲುವುಗಳಿಂದ ದೂರ ಸರಿಯಬಹುದೆಂದು ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹೇಳಿದರು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದ ಅನುಭವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕೃಷಿ ಮೇಳಧ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತಾವು ಬೆಳೆದ ಉತ್ಪನ್ನಗಳಿಗೆ ರೈತರೇ ಬೆಲೆ ನಿಗದಿ ಮಾಡುವವರೆಗೂ ಶೋಷಣೆ ತಪ್ಪಿದ್ದಲ್ಲ. ಸರ್ಕಾರ ಮತ್ತು ಮಧ್ಯವರ್ತಿಗಳು ಬೆಲೆ ನಿಗದಿ ಮಾಡುವ ಪ್ರಕ್ರಿಯೆಗೆ ಇತಿಶ್ರೀ ಹಾಡಬೇಕಿದೆ ಎಂದರು. ರಾವಂದೂರು ಮುರುಘಾ ಮಠದ ಮೋಕ್ಷಪತಿ ಶ್ರೀಗಳು ಮಾತನಾಡಿ, 1978-1980ರಲ್ಲಿ ದೇಶದ ತಲಾ ಆದಾಯ 250 ರಿಂದ 300 ರು.ಗಳಷ್ಟಿತ್ತು. ಇಂದಿನ ತಲಾದಾಯ 25 ರಿಂದ 30 ಸಾವಿರವಿದೆ. ಗಿಡಮರಗಳನ್ನು ನೆಟ್ಟು ಮಳೆನೀರನ್ನು ಸಂರಕ್ಷಿಸುವತ್ತ ರೈತರು ಗಮನಹರಿಸಬೇಕಾಗಿದೆ ಎಂದು ತಿಳಿಸಿದರು.

ಕೃಷಿಮೇಳ, ಕೃಷಿ ಮತ್ತು ಕೈಗಾರಿಕ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ್ ಎಸ್ ಆಲೂರು ಮಾತನಾಡಿ, ಚಿನ್ನದ ಮಾತೇ ಎಲ್ಲಾ ಕಡೇ, ಅನ್ನದ ಮಾತೇ ಇಲ್ಲದಂತಾಗಿದೆ. ದೇವರ ಸಮಾನವಾದ ಮಣ್ಣಿನ ಕಡೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಇಂದಿನ ಜನ ನೀಡುತ್ತಿಲ್ಲವೆಂದು ವಿಷಾದಿಸಿದರು. ದೇಶದಲ್ಲಿ ಶೇಕಡ 80 ರಿಂದ 85ರಷ್ಟು ಜನ ಒಂದು ಎಕರೆಗೂ ಕಡಿಮೆ ಕೃಷಿಭೂಮಿ ಹೊಂದಿದ್ದಾರೆ. ಅವರುಗಳಿಗೆ ಕೃಷಿ ಉಪಯೋಗಿ ಸಲಕರಣೆ ಬಳಕೆಗಳ ಮಾಹಿತಿ ಕಡಿಮೆಯಾಗುತ್ತಾ ಹೋಗಿದ್ದು, ಸುಧಾರಿಸಲು ಇಂತಹ ಕೃಷಿ ಸಮಾವೇಶಗಳು ಅವಶ್ಯವಾಗಿವೆ. ಎಷ್ಟೇ ಗೊಬ್ಬರ ಹಾಕಿದರೂ ಇಳುವರಿ ಕಡಿಮೆ ಬರುತ್ತಿದೆ. ಸಾವಯವ ಕೃಷಿ ಉಪಯೋಗ ಕಡಿಮೆ ಇರುವುದು, ಜನಸಂಖ್ಯೆ ಹೆಚ್ಚಾದಂತೆ ಜಮೀನುಗಳು ಕಡಿಮೆಯಾಗುತ್ತಿರುವುದು ಕಾರಣ. ಇಸ್ರೇಲ್ ರಾಷ್ಟ್ರದಲ್ಲಿ ಒಂದು ಇಂಚು ಮಳೆ ಬೀಳುತ್ತಿದೆ. ಯುರೋಪ್ ದೇಶಗಳಲ್ಲಿ ನೀರನ್ನು ಸಂಸ್ಕರಿಸಿ ಶುದ್ಧೀಕರಿಸಿ ಉತ್ತಮ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ನಮ್ಮಲ್ಲಿ ನೀರಿನ ಕೊರತೆ ಬಾರದಂತೆ ಅದರ ಸದುಪಯೋಗ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡು ಕೃಷಿಯನ್ನು ಲಾಭದಾಯಕ ರೂಪದಲ್ಲಿ ನೋಡಬೇಕಾಗಿದೆ ಎಂದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ ಮುರುಘಾ ಪರಂಪರೆಯ ಸ್ವಾಮಿಗಳು ಸಾಹಿತ್ಯ ಪಂಡಿತರು. ಸಂದರ್ಭ ಬಂದಾಗ ರಾಜರುಗಳನ್ನು ವಿರೋಧಿಸುವವರು ಆಗಿದ್ದರು. ಅಪರೂಪದ ಪ್ರಜ್ಞೆಯನ್ನು ಬೆಳಗಿದವರು ಎಂದರು. ಹೆಬ್ಬಾಳು ಮಹಾಂತ ರುದ್ರೇಶ್ವರಮಠದ ಮಹಾಂತ ರುದ್ರೇಶ್ವರಸ್ವಾಮಿಗಳು, ಶರಣಸಂಸ್ಕೃತಿ ಉತ್ಸವ-2023ರ ಗೌರವಾಧ್ಯಕ್ಷ ಅಥಣಿ ಗಚ್ಚಿನಮಠದ ಶಿವಬಸವ ಮಹಾಸ್ವಾಮಿಗಳು, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಬಿ ಎಸ್ ರೇಖಾ, ಕೆಪಿಟಿಸಿಎಲ್‍ನ ನಿವೃತ್ತ ನಿರ್ದೇಶಕ ಕೆ.ವಿ.ಶಿವಕುಮಾರ್, ಬಿಜೆಪಿ ಯುವ ಮುಖಂಡ ಜಿ.ಎಸ್ ಅನಿತ್ ಕುಮಾರ್, ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಸಿದ್ದವೀರಪ್ಪ ಈಚಘಟ್ಟ, ಶರಣಸಂಸ್ಕೃತಿ ಉತ್ಸವ-2023ರ ಕಾರ್ಯಾಧ್ಯಕ್ಷರಾದ ಕೆ.ಸಿ.ನಾಗರಾಜ್, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ಡಯಟ್‍ನ ಶಿವಾನಂದ್ ಎಸ್‍ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿಗಳಾದ ಎಂ.ಭರತ್ ಕುಮಾರ್ ಉಪಸ್ಥಿತರಿದ್ದರು. ಬಸವತತ್ವ ಧ್ವಜಾರೋಹಣ:

ಶರಣ ಸಂಸ್ಕೃತಿ ಉತ್ಸವ 2023ರ ಅಂಗವಾಗಿ ಶನಿವಾರ ಬೆಳಗ್ಗೆ 10 ಗಂಟೆಗೆ ಶ್ರೀಮಠದ ಅನುಭವ ಮಂಟಪದ ಅವರಣದಲ್ಲಿ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಬಸವತತ್ವ ಧ್ವಜಾರೋಹಣ ನೆರವೇರಿಸಿದರು. ಸವಣೂರು ದೊಡ್ಡಹುಣಸೇಮಠದ ಚನ್ನಬಸವ ಸ್ವಾಮಿಗಳು, ಹುಲಸೂರು ಗುರು ಬಸವೇಶ್ವರ ಸಂಸ್ಥಾನಮಠದ ಶಿವಾನಂದ ಸ್ವಾಮಿಗಳು, ಉಸ್ತುವಾರಿ ಬಸವಪ್ರಭು ಸ್ವಾಮಿಗಳು, ಅಥಣಿ ಗಚ್ಚಿನಮಠದ ಶಿವಬಸವ ಮಹಾಸ್ವಾಮಿಗಳು ಇದ್ದರು.ಪ್ರಗತಿಪರ ರೈತರಾದ ದೇವರಮರಿಕುಂಟೆ ಅರ್.ಎ ದಯಾನಂದಮೂರ್ತಿ ಹಾಗೂ ಚಳ್ಳಕರೆಯ ಕೆ.ಎಂ.ವಿಜಯ ಇವರುಗಳನ್ನು ಸನ್ಮ್ಮಾನಿಸಲಾಯಿತು. ಚಿತ್ರದುರ್ಗದ ನಾಟ್ಯ ರಂಜಿನಿ ನೃತ್ಯ ಕಲಾಕೇಂದ್ರದವರು ನೃತ್ಯ ಪ್ರದರ್ಶಿಸಿದರು.

Share this article