ಬೆಳೆ ರಕ್ಷಣೆಗೆ ಟ್ಯಾಂಕರ್‌ ಮೊರೆ ಹೋದ ರೈತ

KannadaprabhaNewsNetwork |  
Published : Sep 22, 2026, 02:45 AM IST
ಕೊಟ್ಟೂರು ತಾಲೂಕು ನಿಂಬಳಗೆರೆ ರೈತ ತನ್ನ ಭೂಮಿಯಲ್ಲಿ ಬಿತ್ತಿದ ರಾಗಿ ಬೆಳೆ ರಕ್ಷಣೆಗೆ  ಟ್ಯಾಂಕರ್ ಮೂಲಕ ನೀರು ಪೂರೈಸುವತ್ತ ಮುಂದಾಗಿರುವುದು. | Kannada Prabha

ಸಾರಾಂಶ

ಸರ್ಕಾರ ಬರ ಘೋಷಣೆ ಮಾಡುವ ಹೊಸ್ತಿಲಲ್ಲಿ ಇದ್ದರೆ ತಾಲೂಕಿನ ರೈತರು ಇದೀಗ ಅಲ್ಪಸ್ವಲ್ಪ ಬೆಳೆ ರಕ್ಷಿಸಿಕೊಳ್ಳಲು ಟ್ಯಾಂಕರ್‌ ನೀರು ಪೂರೈಸಿಕೊಳ್ಳುವ ಸಾಹಸಕ್ಕೆ ಇಳಿದಿದ್ದಾರೆ.

ದಿನಕ್ಕೆ 5 ಸಾವಿರ ಬಾಡಿಗೆ ಟ್ಯಾಂಕರ್ ಪಡೆದ ರೈತ

ಜಿ.ಸೋಮಶೇಖರ

ಕನ್ನಡಪ್ರಭ ವಾರ್ತೆ ಕೊಟ್ಟೂರು

ಸರ್ಕಾರ ಬರ ಘೋಷಣೆ ಮಾಡುವ ಹೊಸ್ತಿಲಲ್ಲಿ ಇದ್ದರೆ ತಾಲೂಕಿನ ರೈತರು ಇದೀಗ ಅಲ್ಪಸ್ವಲ್ಪ ಬೆಳೆ ರಕ್ಷಿಸಿಕೊಳ್ಳಲು ಟ್ಯಾಂಕರ್‌ ನೀರು ಪೂರೈಸಿಕೊಳ್ಳುವ ಸಾಹಸಕ್ಕೆ ಇಳಿದಿದ್ದಾರೆ.

ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹಿಂಗಾರು ಮಳೆಯಾದರೂ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಕೃಷಿ ಭೂಮಿಯಲ್ಲಿ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಆದರೂ ವರುಣನ ಅವಕೃಪೆಯಿಂದ ಮಳೆ ಬಾರದಿರುವುದರಿಂದ ತಾಲೂಕಿನ ನಿಂಬಳಗೆರೆ ಗ್ರಾಮದ ರೈತ ಬೇರೆ ದಾರಿ ಕಾಣದೇ ನಿತ್ಯ ₹5 ಸಾವಿರಕ್ಕೆ ಟ್ಯಾಂಕರ್ ಬಾಡಿಗೆ ಪಡೆದು ನೀರು ಪೂರೈಸಿಕೊಳ್ಳಲು ಮುಂದಾಗಿದ್ದಾರೆ.

ತಾಲೂಕಿನಲ್ಲಿ 30 ಸಾವಿರ ಹೆಕ್ಟರ್ ಪ್ರದೇಶದಲ್ಲಿ ರೈತರು ಸೂರ್ಯಕಾಂತಿ, ಮೆಕ್ಕೆಜೋಳ ಮತ್ತು ಜೋಳ ಬಿತ್ತನೆ ಮಾಡಿದ್ದರು. ಮಳೆ ಕೊರತೆಯಿಂದ ಕೆಲವಡೆ ಚಿಗುರಿ ನಿಂತಿದ್ದ ಬೆಳೆ ಸಂಪೂರ್ಣ ಬಾಡಿ ಹೋಗುವ ಹಂತ ತಲುಪಿವೆ.

ಕೊಟ್ಟೂರು ಭಾಗದಲ್ಲಿ ಮುಂಗಾರು ಸಮರ್ಪಕವಾಗಿ ಬೀಳುವುದು ಅಪರೂಪದ ಸಂಗತಿ, ಹಿಂಗಾರಿನಲ್ಲಿ ಮಳೆ ಚೆನ್ನಾಗಿ ಬರುವ ವಾಡಿಕೆ ಇದ್ದು, ಮುಂಗಾರು, ಹಿಂಗಾರು ಎರಡೂ ಕೈ ಕೊಡುವ ಎಲ್ಲ ಲಕ್ಷಣ ಕಂಡು ಬರುತ್ತಿವೆ. ಮುಂಗಾರಿನಲ್ಲಿ ಕೃಷಿ ಭೂಮಿಯಲ್ಲಿ ಬಿತ್ತಿದ ಬೆಳೆ ಅಲ್ಪಸ್ವಲ್ಪ ತೇವಾಂಶದಿಂದ ತೀವ್ರ ಮಳೆಯ ಕೊರತೆಯ ಬಾಧೆಯಿಂದ ಬಾಡಿ ಹೋಗುವ ಹಂತ ತಲುಪಿದೆ.

ಅಳಿದುಳಿದ ಬೆಳೆ ರಕ್ಷಣೆಗೆ ರೈತರು ಇದೀಗ ಟ್ರ್ಯಾಕ್ಟರ್ ಬಾಡಿಗೆ ಪಡೆದು ನೀರು ಪೂರೈಸಿಕೊಳ್ಳಲು ಮುಂದಾಗಿದ್ದಾರೆ. ಈ ಪೈಕಿ ತಾಲೂಕಿನ ನಿಂಬಳಗೆರೆ ಗ್ರಾಮದ ಗಂಗಾಧರ ಎಂಬ ರೈತ ದಿನಕ್ಕೆ ₹5 ಸಾವಿರ ಬಾಡಿಗೆಗೆ ಟ್ಯಾಂಕರ್ ನೀರಿನಿಂದ ಬೆಳೆ ರಕ್ಷಿಸಿಕೊಳ್ಳಲು ನಿರಂತರ ಪ್ರಯತ್ನ ಸಾಗಿಸಿದ್ದಾರೆ. ಇವರ ಪ್ರಯತ್ನ ಉತ್ತಮ ನಿರೀಕ್ಷೆ ಕೊಡುತ್ತದೆ ಎಂಬ ವಿಶ್ವಾಸ ತಂದಿದೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬ ಆತಂಕವೂ ಸಹ ರೈತ ಗಂಗಾಧರಪ್ಪನನ್ನು ಕಾಡ ತೊಡಗಿದೆ.ಹಿಂಗಾರು ಮಳೆ ನಂಬಿ 12 ಎಕರೆ ಕೃಷಿ ಭೂಮಿಯಲ್ಲಿ ರಾಗಿ ಬಿತ್ತನೆ ಮಾಡಿದ್ದೆ, ಈವರೆಗೂ ಮಳೆ ಬಾರದೇ ಬಿರು ಬಿಸಿಲು ಬೀಳ ತೊಡಗಿರುವುದರಿಂದ ಬೆಳೆ ಬಾಡುವುದನ್ನು ನೋಡಿ ದಿನಕ್ಕೆ ₹5 ಸಾವಿರ ಖರ್ಚು ಮಾಡಿ ಟ್ಯಾಂಕರ್ ನಿಂದ ನೀರು ಪೂರೈಸಿಕೊಳ್ಳಲು ಮುಂದಾಗಿರುವೆ. ಆದರೂ ಬೆಳೆ ಕೈಗೆ ಸಿಗುತ್ತದೆಯೋ ಇಲ್ಲವೋ ಎನ್ನುವ ಅನುಮಾನವಿದೆ ಎನ್ನುತ್ತಾರೆ ನಿಂಬಳಗೆರೆ ರೈತ ಗಂಗಾಧರ.

ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋಗಲು ಮುಂದಾಗಿದ್ದೇವೆ, ಆದರೆ ಇದು ಬೆಳೆಗೆ ಪೂರ್ಣ ಪ್ರಮಾಣದ ಹಸಿ ನೀಡಲಾಗದು. ಮಳೆ ನಂಬಿರುವ ನಾವು ಮುಂದಿನ ಬದುಕನ್ನು ಹೇಗೆ ಸಾಗಿಸಬೇಕೆನ್ನುವುದೇ ದೊಡ್ಡ ಸಮಸ್ಯೆಯಾಗಿದೆ ಎನ್ನುತ್ತಾರೆ ಉಜ್ಜಿನಿ ರೈತ ಗುರುಬಸವರಾಜ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂರ್ನಾಡಿನಲ್ಲಿ ವಿಜೃಂಭಣೆಯ ಗಣೇಶ ವಿಸರ್ಜನಾ ಮಹೋತ್ಸವ
ಕುಶಾಲನಗರ ಆನೆಕಾಡು: ಸರಣಿ ಅಪಘಾತಕ್ಕೆ ಮೂವರು ಬಲಿ