-ಲಿಂಗಸುಗೂರಲ್ಲಿ ರೈತ ಸಂಘದ ಮಹಿಳಾ ಘಟಕದಿಂದ ಪ್ರತಿಭಟನೆ
-------ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಪಹಣಿ ದಾಖಲೆಗಳಲ್ಲಿ ವಕ್ಫ್ ಹೆಸರು ನಮೂದು ಮಾಡಿರುವ ಸರ್ಕಾರದ ದೋರಣೆ ಖಂಡಿಸಿ ನಡೆಯುತ್ತಿರುವ ಹೋರಾಟಗಳು ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ. ಬುಧವಾರ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದಿಂದ ಮಹಿಳೆಯರು ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತ ಬಸವಣೆಪ್ಪನವರಿಗೆ ಮನವಿ ಸಲ್ಲಿಸಿದರು.ಕಲ್ಯಾಣ ಕರ್ನಾಟಕದಲ್ಲಿ 2010ರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿ ರೈತರ ಭೂಮಿಯ ಪಹಣಿ ದಾಖಲೆಯಲ್ಲಿ ವಕ್ಫ್ ಹೆಸರು ಸೇರ್ಪಡೆ ಮಾಡಿದ್ದು ಖಂಡನೀಯವಾಗಿದೆ. ವಕ್ಫ್ ಹೆಸರು ಸೇರ್ಪಡೆ ಮಾಡುವಾಗ ಸರ್ಕಾರದ 2013ರ ತಿದ್ದುಪಡಿ ಕಾಯ್ದೆ ಅನುಸರಿಸಿಲ್ಲ ಎಂದು ಆರೋಪಿಸಿದರು.
ಪಹಣಿ ದಾಖಲೆಯಲ್ಲಿ ವಕ್ಫ ಹೆಸರು ಸೇರ್ಪಡೆ ಮಾಡಿರುವುದರಿಂದ ಅನೇಕ ರೈತರು ಸಂಸಾರಿಕ ಆರ್ಥಿಕ ಸಂಕಷ್ಟಗಳ ಎದುರಾದಾಗ ಪಹಣಿಯಲ್ಲಿ ವಕ್ಫ ಹೆಸರು ತೆಗೆದು ಹಾಕಲು ತೀವ್ರ ತೊಂದರೆ ಅನುಭವಿಸಿದ್ದಾರೆ. ಸರ್ಕಾರದ ಭೂ ಕಂದಾಯ ಕಾಯ್ದೆ, ಭೂ ನ್ಯಾಯಾಧೀಕರಣ, ಉಳುವವನೆ ಭೂಮಿ ಒಡೆಯ ಸೇರಿದಂತೆ ಕಾಯ್ದೆಗಳನ್ನು ಸಂಪೂರ್ಣ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿದರು. ಕೂಡಲೇ 2010 ರಾಜ್ಯ ಸರ್ಕಾರದ ಸುತ್ತೋಲೆ ಮುಂದಿಟ್ಟುಕೊಂಡು ರೈತರ ಆಸ್ತಿ ಪಹಣಿ ಮಾಲೀಕರ ವಿಚಾರಣೆ ನಡೆಸದೆ ಏಕಪಕ್ಷೀಯವಾಗಿ ಹೆಸರು ಸೇರ್ಪಡೆ ಮಾಡಿದ್ದಾರೆ. ಕೂಡಲೇ ರದ್ದುಪಡಿಸಿ ರೈತ ಹಿತ ಕಾಯಬೇಕು ಎಂದು ಒತ್ತಾಯಿಸಿದರು.ಈ ವೇಳೆ ರೈತ ಸಂಘ ಜಿಲ್ಲಾರ್ಧಯಕ್ಷೆ ಗುರುಬಾಯಿ ಹಿರೇಮಠ, ಅಮರಮ್ಮ, ಶಶಿಕಲಾ ಹಿರೇಮಠ, ಮುದುಕಮ್ಮ, ಬಸ್ಸಮ್ಮ ಹಿರೇಮಠ,ಗದ್ದೆಮ್ಮ, ಮಹಾದೇವಪ್ಪ, ಶ್ವೇತಾ ಲಾಲಗುಂದಿ, ಅಂಬುಜಾ ಬಯ್ಯಾಪುರ, ಯಮನಮ್ಮ, ಸದಾನಂದ, ಖಾಜಾವಲಿ, ಸಂಗನಗೌಡ ಹೊಸೂರು, ರಾಮಣ್ಣ, ಮರೆಪ್ಪ ಸೇರಿದಂತೆ ಇದ್ದರು.
-----------------ಫೋಟೊ: ಲಿಂಗಸುಗೂರಲ್ಲಿ ರೈತ ಸಂಘದ ಮಹಿಳಾ ಘಟಕದಿಂದ ಪಹಣಿಯಲ್ಲಿ ಹೆಸರು ಸೇರ್ಪಡೆ ವಿರೋಧಿಸಿ ಪ್ರತಿಭಟನೆ ನಡೆಸಿದರು.-----------------
13ಕೆಪಿಎಲ್ಎನ್ಜಿ03 :