ರೈತರು ವೈಜ್ಞಾನಿಕ ಕೃಷಿ ಪದ್ದತಿ ಅಳವಡಿಸಿಕೊಳ್ಳಿ

KannadaprabhaNewsNetwork |  
Published : Dec 29, 2024, 01:20 AM IST
ಪೋಟೋ: ೨೮-೧೨ ಸಿಟಿಪಿಅರ್ ೧ಚಿತ್ತಾಪುರ ತಾಲೂಕಿನ ಮಾಡಬೂಳ ತಾಂಡಾದಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟಿçÃಯ ರೈತ ದಿನಾಚರಣೆ ಹಾಗೂ ಚೌದರಿ ಚರಣಸಿಂಗ್ ನಮನ ಪ್ರಗತಿಪರ ರೈತರಿಗೆ ಸತ್ಕಾರ, ರೈತರಿಗೆ ಸಲಹೆಗಳು ಕಾರ್ಯಕ್ರಮವನ್ನು ನಿವೃತ್ತ ಕೃಷಿ ಅಧಿಕಾರಿ ಶಿವಯೊಗಪ್ಪಾ ಬಿರಾದಾರ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ರೈತರು ಯಾವುದೇ ಒಂದು ಬೆಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿಸಬಾರದು ವಿವಿಧ ಬೆಳೆಗಳು, ತರಕಾರಿ, ಹಣ್ಣುಗಳು, ಹೂವುಗಳ ಕೃಷಿ ಮಾಡಬೇಕು. ಒಂದು ವೇಳೆ ಒಂದು ಬೆಳೆ ವಿಫಲವಾದರೆ ಮತ್ತೊಂದು ಬೆಳೆಯಲು ಮತ್ತು ವರ್ಷಪೂರ್ತಿ ಇಳುವರಿ ಸಾಧ್ಯವಾಗುತ್ತದೆ ನಿವೃತ್ತ ಕೃಷಿ ಅಧಿಕಾರಿ ಕೃಷಿಕ ಸಮಾಜದ ಸದಸ್ಯ ಶಿವಯೊಗೆಪ್ಪಾ ಎಸ್.ಬಿರಾದಾರ ರೈತರಿಗೆ ಸಲಹೆ ನೀಡಿದರು.

ರೈತರ ಸಲಹೆ ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಶಿವಯೊಗಪ್ಪಾ ಬಿರಾದಾರ ಸಲಹೆ

ಕನ್ನಡ ಪ್ರಭ ವಾರ್ತೆ ಚಿತ್ತಾಪುರ

ರೈತರು ಯಾವುದೇ ಒಂದು ಬೆಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿಸಬಾರದು ವಿವಿಧ ಬೆಳೆಗಳು, ತರಕಾರಿ, ಹಣ್ಣುಗಳು, ಹೂವುಗಳ ಕೃಷಿ ಮಾಡಬೇಕು. ಒಂದು ವೇಳೆ ಒಂದು ಬೆಳೆ ವಿಫಲವಾದರೆ ಮತ್ತೊಂದು ಬೆಳೆಯಲು ಮತ್ತು ವರ್ಷಪೂರ್ತಿ ಇಳುವರಿ ಸಾಧ್ಯವಾಗುತ್ತದೆ ನಿವೃತ್ತ ಕೃಷಿ ಅಧಿಕಾರಿ ಕೃಷಿಕ ಸಮಾಜದ ಸದಸ್ಯ ಶಿವಯೊಗೆಪ್ಪಾ ಎಸ್.ಬಿರಾದಾರ ರೈತರಿಗೆ ಸಲಹೆ ನೀಡಿದರು.

ತಾಲೂಕಿನ ಮಾಡಬೂಳ ತಾಂಡಾದ ಪವಾರ ತೊಟದಲ್ಲಿ ಕಲಬುರರ್ಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆ ಹಾಗೂ ಚೌದರಿ ಚರಣಸಿಂಗ್ ನಮನ ಪ್ರಗತಿಪರ ರೈತರಿಗೆ ಸತ್ಕಾರ, ರೈತರಿಗೆ ಸಲಹೆಗಳು ಕಾರ್ಯಕ್ರಮವನ್ನು ನಿವೃತ್ತ ಕೃಷಿ ಅಧಿಕಾರಿ ಶಿವಯೊಗಪ್ಪಾ ಬಿರಾದಾರ ಉದ್ಘಾಟಿಸಿ ಮಾತನಾಡಿದರು.

ಸಾವಯವ ಗೊಬ್ಬರದ ವ್ಯಾಪಕ ಬಳಕೆ, ಬೀಜೊಪಚಾರ, ಹೊಸ ತಂತ್ರಜ್ಞಾನದ ಬಳಕೆ ಸುಧಾರಿತ ಬೀಜಗಳ ಬಳಕೆ, ನಿಯಮಿತವಾಗಿ ಮಣ್ಣಿನ ಪರೀಕ್ಷೆ, ಕೃಷಿಯ ಜೊತೆ ಹೈನುಗಾರಿಕೆ, ತೊಟಗಾರಿಕೆ, ಕೊಳಿ, ಕುರಿ ಸಾಕಾಣೆಕೆಯ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು ಎಂದರು. ಬಳಗದ ಅಧ್ಯಕ್ಷ ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ ದೇಶದ ಐದನೇ ಪ್ರಧಾನಿ ಚೌದರಿ ಚರಣಸಿಂಗ್ ಅವರ ಜನ್ಮದಿನವನ್ನು ರಾಷ್ಟ್ರೀಯ ರೈತರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಅವರು ತಮ್ಮ ಆಡಳಿತದಲ್ಲಿ ರೈತರಪರ ನೀತಿ, ಯೊಜನೆಗಳನ್ನು ಜಾರಿಗೊಳಿಸಿ ದಿನಾಚರಣೆಯ ರೂವಾರಿಯಾಗಿದ್ದಾರೆ. ರೈತರು ಕೃಷಿ ವಿಜ್ಞಾನಿಗಳು, ಕೃಷಿ ಪಂಡಿತರು ಮತ್ತು ಪ್ರಗತಿಪರ ರೈತರಿಂದ ಸೂಕ್ತ ಮಾಹಿತಿಯನ್ನು ಪಡೆದು ಕೃಷಿಯಲ್ಲಿ ತೊಡಗಿದರೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಸಮಾಜ ಸೇವಕ ರವಿ ನಾಯಕ ಮಾತನಾಡಿ ಕೃಷಿ ಹಾಗೂ ರೈತರ ಬೆನ್ನೆಲಬು ರೈತನೇ ನೈಜ್ಯ ದಾಸೊಹಿ, ಆತನ ಋಣ ತೀರಿಸಲು ಸಾಧ್ಯವಿಲ್ಲಾ. ರೈತರು ಮತ್ತು ಕೃಷಿಯ ಅಭಿವೃದ್ದಿಗೆ ಪೂರಕವಾದ ನೀತಿಗಳು ಜಾರಿಗೊಳಿಸಬೇಕಾಗಿದೆ. ರೈತರು ಮತ್ತು ಕೃಷಿಯ ಅಭಿವೃದ್ದಿಗೆ ಪೂರಕವಾದ ನೀತಿಗಳು ಜಾರಿಗೊಳಿಸಬೇಕಾಗಿದೆ. ರೈತರು ಯಾವುದೇ ಕಾರಣಕ್ಕೆ ಧೃಡಿಗೆಡದೇ, ಆತ್ಮಹತ್ಯೆಯ ದಾರಿ ತುಳಿಯಬೇಡಿ ಎಂದು ಮಾನಸಿಕ ಸ್ಥೈರ್ಯ ತುಂಬಿದರು.ತಾಂಡಾದ ಪ್ರಗತಿಪರ ರೈತರಾದ ಲಕ್ಷ್ಮಣ ರಾಠೋಡ, ಹರಿಶ್ಚಂದ್ರ ಪವಾರ ಕಾರಬಾರಿ, ಮಾಡಬೂಳನ ವಿಜಯ ಪ್ಯಾಟಿ, ಬೋಳೆವಾಡದ ಜಗನಾಥ ಹೊನಮಡಿ ಅವರಿಗೆ ಸತ್ಮರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರವಿ ಪವಾರ, ಕಿಶನ್ ರಾಠೋಡ, ಧರ್ಮ ಪವಾರ, ಕಾಶಿನಾಥ ಪವಾರ, ದಿನೇಶ ಪವಾರ, ಪಂಡಿತ ಬಿರಾದಾರ ಹಾಗೂ ರೈತರು ತಾಂಡಾ ಮತ್ತು ಮಾಡಬೂಳ ಗ್ರಾಮಸ್ಥರು ಪಾಲ್ಗೊಂಡಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ