ಬೆಳೆ ವಿಮೆ ಹಣ ಬಿಡುಗಡೆಗೆ ಆಗ್ರಹಿಸಿ ರೈತರ ಮನವಿ

KannadaprabhaNewsNetwork |  
Published : Oct 16, 2026, 02:15 AM IST
ಪೊಟೋ- ಬೆಳೆ ವಿಮೆಯ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

೨೦೨೫ನೇ ಸಾಲಿನ ಮೆಣಸಿನಕಾಯಿ ಬೆಳೆಯ ವಿಮೆ ಹಣ ಬಿಡುಗಡೆಗೆ ಆಗ್ರಹಿಸಿ ತಾಲೂಕಿನ ಯಳವತ್ತಿ, ಮಾಡಳ್ಳಿ ಹಾಗೂ ಯತ್ತಿನಹಳ್ಳಿ ಗ್ರಾಮದ ರೈತರು ಗುರುವಾರ ಪಟ್ಟಣದ ಶಿಗ್ಲಿ ಕ್ರಾಸ್‌ನಿಂದ ಬಜಾರ್ ರಸ್ತೆಯ ಮೂಲಕ ಪಾದಯಾತ್ರೆ ನಡೆಸಿ ತಹಸೀಲ್ದಾರ ಕಚೇರಿಗೆ ಆಗಮಿಸಿ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

೨೦೨೫ನೇ ಸಾಲಿನ ಮೆಣಸಿನಕಾಯಿ ಬೆಳೆಯ ವಿಮೆ ಹಣ ಬಿಡುಗಡೆಗೆ ಆಗ್ರಹಿಸಿ ತಾಲೂಕಿನ ಯಳವತ್ತಿ, ಮಾಡಳ್ಳಿ ಹಾಗೂ ಯತ್ತಿನಹಳ್ಳಿ ಗ್ರಾಮದ ರೈತರು ಗುರುವಾರ ಪಟ್ಟಣದ ಶಿಗ್ಲಿ ಕ್ರಾಸ್‌ನಿಂದ ಬಜಾರ್ ರಸ್ತೆಯ ಮೂಲಕ ಪಾದಯಾತ್ರೆ ನಡೆಸಿ ತಹಸೀಲ್ದಾರ ಕಚೇರಿಗೆ ಆಗಮಿಸಿ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ರೈತ ಮುಖಂಡ ಚನ್ನಪ್ಪ ಷಣ್ಮುಖಿ ಮಾತನಾಡಿ, ಕಳೆದ ವರ್ಷ ಅತಿವೃಷ್ಟಿಯಿಂದ ಹಾಳಾದ ತೋಟಗಾರಿಕಾ ಬೆಳೆಯಾದ ಮೆಣಸಿನಕಾಯಿ ಬೆಳೆ ಸಂಪೂರ್ಣ ಹಾಳಾಗಿ ಹೋಗಿದ್ದವು. ಇದರಿಂದ ರೈತರು ಅಪಾರ ಹಾನಿ ಅನುಭವಿಸುವಂತಾಗಿತ್ತು. ಈ ವೇಳೆ ರೈತರು ಮೆಣಸಿನಕಾಯಿ ಬೆಳೆಗೆ ಬೆಳೆ ವಿಮೆ ಹಣ ಪಾವತಿಸಿದ್ದರೂ ಇದುವರೆಗೂ ಬೆಳೆ ವಿಮೆಯ ಹಣ ತಾಲೂಕಿನ ರೈತರಿಗೆ ಸಂದಾಯವಾಗಿಲ್ಲ. ಜಿಲ್ಲೆಯ ಬೇರೆ ಬೇರೆ ಗ್ರಾಮದ ರೈತರಿಗೆ ಬೆಳೆ ವಿಮೆಯ ಹಣ ಪಾವತಿಯಾಗಿದೆ. ಆದರೆ ಲಕ್ಷ್ಮೇಶ್ವರ ತಾಲೂಕಿನ ಯತ್ತಿನಹಳ್ಳಿ, ಮಾಡಳ್ಳಿ ಹಾಗೂ ಯಳವತ್ತಿ ಗ್ರಾಮದ ನೂರಾರು ರೈತರಿಗೆ ಬೆಳೆ ವಿಮೆಯ ಹಣ ಪಾವತಿಯಾಗಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಆದ್ದರಿಂದ ಸರ್ಕಾರ ಮಧ್ಯಪ್ರವೇಶ ಮಾಡಿ ತಾಲೂಕಿನ ರೈತರಿಗೆ ಮೆಣಸಿನಕಾಯಿ ಬೆಳೆಯ ವಿಮೆ ಹಣ ಸಂದಾಯವಾಗುವಂತೆ ಮಾಡಬೇಕು, ಇಲ್ಲವಾದಲ್ಲಿ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಕ್ರಾಸ್ ಬಳಿ ರೈತರು ತಮ್ಮ ಎತ್ತು ಚಕ್ಕಡಿಗಳೊಂಡಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ರೈತ ಮುಖಂಡ ಟಾಕಪ್ಪ ಸಾತಪೂತೆ ಮಾತನಾಡಿ, ರೈತರು ಈ ವರ್ಷ ಮಳೆ ಇಲ್ಲದೆ ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಈಗಲಾದರೂ ವಿಮಾ ಕಂಪನಿಗೆ ೨೦೨೫ನೇ ಸಾಲಿನ ಮೆಣಸಿನಕಾಯಿ ಬೆಳೆಯ ಬೆಳೆ ವಿಮೆ ಹಣ ಪಾವತಿಸುವಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ನಿಂಬಣ್ಣ ಮಡಿವಾಳರ, ಶಿವನಗೌಡ ಪಾಟೀಲ, ನಿಂಗನಗೌಡ ನೆಗಳೂರ, ಶಂಕರಗೌಡ ಬೆಟದೂರ, ಪರಮೇಶ್ವರಗೌಡ ಪಾಟೀಲ, ಬಸವರಾಜ ಟೊಕಾಳಿ, ಬಸವಣ್ಣೆಪ್ಪ ಅಂಗಡಿ, ಮಂಜುನಾಥಗೌಡ ಕರಿಗೌಡರ, ರಾಮನಗೌಡ ಕುಂದಗೋಳ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಗಮಾಸ್ತಿ ಕ್ಷೇತ್ರದ ಮಹಿಳಾ ದಸರಾ ಜಿಲ್ಲೆಗೆ ಮಾದರಿ
ಅಗ್ನಿವೀರರಾಗಲು ಇಟಗಿಯಲ್ಲಿ ಉಚಿತ ತರಬೇತಿ ಶಿಬಿರ