ತಹಸೀಲ್ದಾರ್ ಕಚೇರಿ ಮುಂಭಾಗ ರೈತ ಸಂಘ ಪ್ರತಿಭಟನೆ

KannadaprabhaNewsNetwork |  
Published : Jun 13, 2025, 01:13 AM IST
52 | Kannada Prabha

ಸಾರಾಂಶ

ಸಿಂಧುವಳ್ಳಿ ಬಳಿ ಕಬಿನಿ ಬಲದಂಡೆ ಕಾಲುವೆಯಲ್ಲಿ ಬುಧವಾರ ಖಾಸಗಿಯವರು ಜೆಸಿಬಿ, ಟಿಪ್ಪರ್ ಬಳಸಿ ಕಾಲುವೆಯ ಏರಿ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದುದ್ದನ್ನು ರೈತ ಸಂಘದ ಕಾರ್ಯಕರ್ತರು ತಡೆದು, ಸಾಗಾಣಿಕೆಗೆ ಬಳಸುತ್ತಿದ್ದ ವಾಹನಗಳನ್ನು ನೀರಾವರಿ ಇಲಾಖೆ ಎಂಜಿನಿಯರ್ ದರ್ಶನ್ ಅವರಿಗೆ ನೀಡಲಾಗಿತ್ತು, ನೀರಾವರಿ ಇಲಾಖೆ ಅಧಿಕಾರಿಗಳು ಅಕ್ರಮ ಮಣ್ಣು ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ದೂರು ದಾಖಲಿಸದೆ, ಶಾಮೀಲಾಗಿ ಅಕ್ರಮ ಸಾಗಾಣಿಕೆದಾರರಿಗೆ ಬೆಂಬಲ ನೀಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ತಾಲೂಕಿನ ಸಿಂಧುವಳ್ಳಿ ಬಳಿ ಕಬಿನಿ ಬಲದಂಡೆಯ ಕಾಲುವೆ ಏರಿಯ ಮಣ್ಣನ್ನು ಕಳ್ಳ ಸಾಗಾಣಿಕೆ ಮಾಡುವವರ ವಿರುದ್ಧ ಕ್ರಮವಹಿಸುವಂತೆ ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಗುರುವಾರ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ತಾಲೂಕಿನ ಸಿಂಧುವಳ್ಳಿ ಬಳಿ ಕಬಿನಿ ಬಲದಂಡೆ ಕಾಲುವೆಯಲ್ಲಿ ಖಾಸಗಿಯವರು ಜೆಸಿಬಿ, ಟಿಪ್ಪರ್ ಬಳಸಿ ಕಾಲುವೆಯ ಏರಿ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದ್ದು, ರೈತ ಸಂಘದ ಕಾರ್ಯಕರ್ತರು ಈ ಅಕ್ರಮ ತಡೆದು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮಣ್ಣು ಸಾಗಣೆಯಲ್ಲಿ ತೊಡಗಿದ್ದ ವಾಹನಗಳನ್ನು ಒಪ್ಪಿಸಿದ್ದರು, ಅಧಿಕಾರಿಗಳು ದೂರು ದಾಖಲಿಸಿ, ಕ್ರಮ ವಹಿಸಿಲ್ಲ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್ ರಾವ್ ಆರೋಪಿಸಿದರು.

ತಾಲೂಕಿನ ಸಿಂಧುವಳ್ಳಿ ಬಳಿ ಕಬಿನಿ ಬಲದಂಡೆ ಕಾಲುವೆಯಲ್ಲಿ ಬುಧವಾರ ಖಾಸಗಿಯವರು ಜೆಸಿಬಿ, ಟಿಪ್ಪರ್ ಬಳಸಿ ಕಾಲುವೆಯ ಏರಿ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದುದ್ದನ್ನು ರೈತ ಸಂಘದ ಕಾರ್ಯಕರ್ತರು ತಡೆದು, ಸಾಗಾಣಿಕೆಗೆ ಬಳಸುತ್ತಿದ್ದ ವಾಹನಗಳನ್ನು ನೀರಾವರಿ ಇಲಾಖೆ ಎಂಜಿನಿಯರ್ ದರ್ಶನ್ ಅವರಿಗೆ ನೀಡಲಾಗಿತ್ತು, ನೀರಾವರಿ ಇಲಾಖೆ ಅಧಿಕಾರಿಗಳು ಅಕ್ರಮ ಮಣ್ಣು ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ದೂರು ದಾಖಲಿಸದೆ, ಶಾಮೀಲಾಗಿ ಅಕ್ರಮ ಸಾಗಾಣಿಕೆದಾರರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ದೂರಿದರು.

ತಾಲೂಕಿನ ಅಳಗಂಚಿಪುರ, ಅಳಗಂಚಿ, ಹರತಲೆ, ಶಿರಮಳ್ಳಿ, ಹೆಗ್ಗಡಹಳ್ಳಿ, ಮೊಬ್ಬಳ್ಳಿ ಮುಂತಾದ ಗ್ರಾಮಗಳಲ್ಲಿ ಕಾಲುವೆಗಳ ಏರಿ ಮಣ್ಣನ್ನು ಜೆಸಿಬಿ ಯಂತ್ರದಿಂದ ಬಗೆದು ಟಿಪ್ಪರ್ ಮೂಲಕ ಸಾಗಿಸುತ್ತಿದ್ದಾರೆ, ಇದರಿಂದಾಗಿ ನಾಲೆಗಳ ಏರಿ ಸಡಿಲಗೊಂಡು ಒಡೆಯುವ ಆತಂಕ ಎದುರಾಗಿದೆ, ಅಕ್ರಮ ಸಾಗಣೆದಾರರನ್ನು ರೈತರು ಹಿಡಿದುಕೊಟ್ಟರು, ನೀರಾವರಿ ಇಲಾಖೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಕೂಡಲೇ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳದಿದ್ದರೆ ಭೂ ವಿಜ್ಞಾನ ಇಲಾಖೆ ಹಾಗೂ ನೀರಾವರಿ ಇಲಾಖೆ ಮುಂಭಾಗ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ನಂಜುಂಡೇಗೌಡ, ದೇವರಾಜು, ದೊಡ್ಡಯ್ಯ, ಈ. ಶಿವಣ್ಣ, ಶ್ವೇತಾ, ಮಹದೇವನಾಯಕ, ಶ್ರೀಕಂಠ, ಮಹದೇವೇಗೌಡ, ಮಹೇಶ್ ಮೊದಲಾದವರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ