ಸವಣೂರು: ಪಟ್ಟಣದ ಕಂದಾಯ ಇಲಾಖೆ ಕಚೇರಿ ಆವರಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ರೈತರಿಗೆ ಸರ್ಕಾರದ ಪ್ರೋತ್ಸಾಹಧನವನ್ನು ನೀಡಲು ಒತ್ತಾಯಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಭರತರಾಜ್ ಕೆ.ಎನ್. ಅವರಿಗೆ ಮನವಿ ಸಲ್ಲಿಸಿದರು.ಹಾಲು ಒಕ್ಕೂಟ ಆಡಳಿತ ಮಂಡಳಿ ತಮ್ಮ ಲಾಭಕ್ಕಾಗಿ ದುರಾಡಳಿತ ಕೈಗೊಂಡು ಸುಮಾರು ₹20 ಕೋಟಿ ಹಾನಿ ಮಾಡಿದೆ. ಈ ಕುರಿತು ಸೂಕ್ತ ತನಿಖೆ ಕೈಗೊಳ್ಳಬೇಕು. ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೆಕು. ಹಾಲಿನ ದರದೊಂದಿಗೆ ಸರ್ಕಾರ ನೀಡುವ ₹4ಅನ್ನು ಹಾಲು ಒಕ್ಕೂಟ ರೈತರಿಗೆ ನೀಡಬೇಕು. ಈ ಕುರಿತು ಕೂಡಲೇ ಆದೇಶ ಹಿಂಪಡೆದು, ರೈತರ ಬೇಡಿಕೆ ಈಡೇರಿಕೆಯ ಆದೇಶ ಹೊರಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರೈತ ಸಂಘದ ಪದಾಧಿಕಾರಿಗಳಾದ ಚನ್ನಪ್ಪ ಮರಡೂರ, ಅಬ್ದುಲ್ ಬುಡಂದಿ, ಫಕ್ಕಿರಪ್ಪ ಲಮಾಣಿ, ವಿ.ಡಿ. ಮರಡೂರ, ಶಂಬಣ್ಣ ದೇವಗಿರಿ, ಆರ್.ಎಂ. ಪಟ್ಟಣಶೆಟ್ಟಿ, ಶಿವಪ್ಪ ಅಂಗಡಿ, ನಾಗಪ್ಪ ಹಡಪದ, ಬಾಬನಸಾಬ್ ಸವಣೂರ, ತಿಮ್ಮಣ್ಣ ಹಿರೇಮನಿ ಹಾಗೂ ಇತರರು ಇದ್ದರು. ಕ್ಯಾಂಟರ್ ಡಿಕ್ಕಿಯಾಗಿ ಮಹಿಳೆ ಸಾವುಬ್ಯಾಡಗಿ: ಕ್ಯಾಂಟರ್ ವಾಹನವೊಂದು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಬೈಕ್ ಸವಾರ ಗಾಯಗೊಂಡ ಘಟನೆ ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.ಮೃತರನ್ನು ಅದೇ ಗ್ರಾಮದ ಸುನಿತಾ ಕುಮಾರ ಕೊರವರ(32) ಎಂದು ಗುರುತಿಸಲಾಗಿದೆ. ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ ಎದುರುಗಡೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕ್ಯಾಂಟರ್ ವಾಹನವು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ಸುನಿತಾ ರಸ್ತೆ ಮೇಲೆ ಬಿದ್ದಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಬೈಕ್ ಸವಾರ ಉಮೇಶ್ ಭಜಂತ್ರಿ ಈತನಿಗೂ ತೀವ್ರ ತರಹದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಲಾಗುತ್ತಿದೆ.ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಘಟನೆ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.