ಬಸವಸಾಗರ ಜಲಾಶಯಕ್ಕೆ ರೈತರ ಮುತ್ತಿಗೆ ಯತ್ನ

KannadaprabhaNewsNetwork |  
Published : Nov 03, 2026, 01:15 AM IST
ಬಸವಸಾಗರ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನ.30 ವರೆಗೆ ನೀರು ಹರಿಸುವಂತೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜದ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿಭಟನಾ ನಿರತ ಹಲವು ರೈತರೂ ಸೋಮವಾರ ಧರಣಿ ಸ್ಥಳದಿಂದಲೇ ಘೋಷಣೆ ಕೂಗುತ್ತಾ ಜಲಾಶಯ ಮುತ್ತಿಗೆ ಹಾಕಲು ಯತ್ನಿಸಿದಾಗ, ಈ ಸಂದರ್ಭದಲ್ಲಿ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್‌ ಶಂಕರ್‌ ಮಧ್ಯಪ್ರವೇಶಿಸಿ, ನೀರಾವರಿ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸುವ ಬಗ್ಗೆ ಭರವಸೆ ನೀಡಿದರು. ರೈತರು ಯಾವುದಕ್ಕೂ ತಾಳ್ಮೆ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ರೈತರು ಜಲಾಶಯಕ್ಕೆ ಮುತ್ತಿಗೆ ಹಾಕುವದನ್ನು ಹಿಂದಕ್ಕೆ ಪಡೆದು ರಸ್ತೆಯ ಮಧ್ಯದಲ್ಲಿಯೇ ಕುಳಿತು ಊಟ ಮಾಡುವ ಮೂಲಕ ಸರ್ಕಾರ, ನೀರಾವರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ರೈತರ ಬೆಳೆ ಉಳಿಯಬೇಕಾದರೆ ನ.30 ರವರಗೆ ಮುಖ್ಯ ಕಾಲುವೆಗಳಿಗೆ ನೀರು ಹರಿಸಲೇಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು. | Kannada Prabha

ಸಾರಾಂಶ

ತಾಲೂಕಿನ ಬಸವಸಾಗರ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನ.30 ವರೆಗೆ ನೀರು ಹರಿಸುವಂತೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜದ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿಭಟನಾ ನಿರತ ಹಲವು ರೈತರೂ ಸೋಮವಾರ ಧರಣಿ ಸ್ಥಳದಿಂದಲೇ ಘೋಷಣೆ ಕೂಗುತ್ತಾ ಜಲಾಶಯ ಮುತ್ತಿಗೆ ಹಾಕಲು ಯತ್ನಿಸಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ತಾಲೂಕಿನ ಬಸವಸಾಗರ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನ.30 ವರೆಗೆ ನೀರು ಹರಿಸುವಂತೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜದ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿಭಟನಾ ನಿರತ ಹಲವು ರೈತರೂ ಸೋಮವಾರ ಧರಣಿ ಸ್ಥಳದಿಂದಲೇ ಘೋಷಣೆ ಕೂಗುತ್ತಾ ಜಲಾಶಯ ಮುತ್ತಿಗೆ ಹಾಕಲು ಯತ್ನಿಸಿದರು.

ಕಳೆದ 9 ದಿನಗಳಿಂದ ಹೋರಾಟ ನಡೆಸುತ್ತಿರುವ ರೈತರಿಗೆ ಸರ್ಕಾರ ಹಾಗೂ ನೀರಾವರಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿ, ರೊಚ್ಚಿಗೆದ್ದ ನೂರಾರು ರೈತರು ಪ್ರತಿಭಟನಾ ಸ್ಥಳದಿಂದ ನಾರಾಯಣಪುರ ಮುಖ್ಯ ರಸ್ತೆಯ ಮೂಲಕ ಜಲಾಶಯಕ್ಕೆ ಮುತ್ತಿಗೆ ಹಾಕಲು ಹೊರಟಿರುವಾಗ ಐಬಿ ತಾಂಡಾದ ಹತ್ತಿರ ಪೋಲಿಸರು ತಡೆಯೊಡ್ಡಿ ರೈತರ ಮನವೊಲೈಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕೆ ಒಪ್ಪಂದ ರೈತರು ಸ್ಥಳದಲ್ಲಿಯೇ ರಸ್ತೆ ತಡೆ ನಡೆದು ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್‌ ಶಂಕರ್‌ ಮಧ್ಯಪ್ರವೇಶಿಸಿ, ನೀರಾವರಿ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸುವ ಬಗ್ಗೆ ಭರವಸೆ ನೀಡಿದರು. ರೈತರು ಯಾವುದಕ್ಕೂ ತಾಳ್ಮೆ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ರೈತರು ಜಲಾಶಯಕ್ಕೆ ಮುತ್ತಿಗೆ ಹಾಕುವದನ್ನು ಹಿಂದಕ್ಕೆ ಪಡೆದು ರಸ್ತೆಯ ಮಧ್ಯದಲ್ಲಿಯೇ ಕುಳಿತು ಊಟ ಮಾಡುವ ಮೂಲಕ ಸರ್ಕಾರ, ನೀರಾವರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ರೈತರ ಬೆಳೆ ಉಳಿಯಬೇಕಾದರೆ ನ.30 ರವರಗೆ ಮುಖ್ಯ ಕಾಲುವೆಗಳಿಗೆ ನೀರು ಹರಿಸಲೇಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ರಸ್ತೆ ತಡೆ ನಡೆಸಿದ್ದರಿಂದ ಕೆಲಕಾಲ ಮುದ್ದೇಬಿಹಾಳ, ಲಿಂಗಸೂಗುರು ಕಡೆ ಹೋಗುವ ಬರುವ ಸಾರಿಗೆ ಬಸ್ಸ್ ಪ್ರಯಾಣಿಕರಿಗೆ ಸೇರಿ ಖಾಸಗಿ ವಾಹನ ಸವಾರರು ಪರದಾಡುವ ಸ್ಥಿತಿ ಉಂಟಾಯಿತು. ನಂತರ ಮುಖ್ಯ ಇಂಜನಿಯರ್‌ ಕಚೇರಿಯ ಧರಣಿ ಸ್ಥಳಕ್ಕೆ ಆಗಮಿಸಿದ ಪ್ರತಿಭಟನಾಕಾರ ಅನಿಧಿಷ್ಟಾವದಿ ಧರಣಿ ಸೋಮವಾರವು ಮುಂದುವರೆಸಿದ್ದಾರೆ.

* ಸೂಕ್ತ ಬಂದೋಬಸ್ತ್: ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ, ಎಎಸ್ಪಿ ಧರಣೀಶ, ಸಿಪಿಐ ರವಿಕುಮಾರ ನೇತೃತ್ವದಲ್ಲಿ ಸುರಪುರ ನಾರಾಯಣಪುರ, ಕೊಡೇಕಲ್, ಹುಣಸಗಿ, ಕೆಂಭಾವಿ, ಗೋಗಿ ಠಾಣೆಗಳ ಪಿಎಸ್ಐಗಳು ಹಾಗೂ ಕೆಎಸ್ಆರ್ಪಿ ಪಡೆಯ ಪೋಲಿಸರಿಂದ ಸೂಕ್ತ ಬಸ್ತ್ ಒದಗಿಸಲಾಗಿತ್ತು.

ರೈತರಿಗೆ ತಾಳ್ಮೆಯಿರಲಿ: ಶಾಸಕ ನಾಯಕ: ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಶಾಸಕ ರಾಜಾ ವೇಣುಗೋಪಾಲ ನಾಯಕಕೃಷಿಕ ಸಮಾಜದ ಮುಖಂಡ ಮಲ್ಲನಗೌಡ ಹಗರಟಗಿ ಅವರಿಗೆ ದೂರವಾಣಿ ಕರೆ ಮಾಡಿ ರೈತರು ತಾಳ್ಮೆ ಕಳೆದುಕೊಳ್ಳಬೇಡಿ. ನಮ್ಮ ತಂದೆ ದಿ. ಶಾಸಕ ರಾಜಾ ವೆಂಕಟಪ್ಪನಾಯಕ ಅವರು ರೈತರು ಪರವಾಗಿದ್ದರು. ನಾನೂ ಕೂಡಾ ರೈತರ ಪರವಾಗಿ ಕೆಲಸ ಮಾಡುತ್ತೇನೆ. ಆದಷ್ಟು ಬೇಗ ಮುಖ್ಯ ಮಂತ್ರಿ ಡಿಕೆ ಶಿವಕುಮಾರ ಅವರಿಗೆ ಭೇಟಿಯಾಗಿ ರೈತರ ಸಮಸ್ಯೆಯನ್ನು ಗಮನಕ್ಕೆ ತಂದು ಸಾಧ್ಯವಾದಷ್ಟು ಕಾಲುವೆಗೆ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ