ಕನ್ನಡಪ್ರಭ ವಾರ್ತೆ ಹಲಗೂರು
ಗುಂಡಾಪುರ ಗ್ರಾಮದಲ್ಲಿ ಹಲಗೂರು ತಾಂತ್ರಿಕ ಸೇವಾ ಕೇಂದ್ರ ಮತ್ತು ತಾಪಂನಿಂದ ನಡೆದ ದ್ವಿತಳಿ ರೇಷ್ಮೆ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿ, ರೈತರು ತಮ್ಮ ಭೂಮಿಗೆ ರಾಸಾಯಿನಿಕ ಗೊಬ್ಬರ ಬಳಸದೆ ಸಾವಯವ ಕೃಷಿ ಮಾಡಬೇಕು ಎಂದರು.
ರೇಷ್ಮೆ ತ್ಯಾಜ್ಯವನ್ನು ರಸ್ತೆಗಳಲ್ಲಿ ಬಿಸಾಡದೆ ಹಿಪ್ಪುನೇರಳೆ ತೋಟಗಳಲ್ಲಿ ಟ್ರಂಚಿಂಗ್ ಮಲ್ಚಿಂಗ್ ಮಾಡುವ ಮೂಲಕ ಭೂಮಿಗೆ ಸೇರಿಸಿದ ನಂತರ ಜೀವಾಮೃತ ಬಳಸಿ ಹಿಪ್ಪು ನೇರಳೆ ಸೊಪ್ಪಿನ ಇಳುವರಿ ಹೆಚ್ಚಿಸಬೇಕು ಎಂದರು.ಕನಿಷ್ಠ ಒಂದು ಎಕರೆ ಹಿಪ್ಪು ನೇರಳೆ ತೋಟದಲ್ಲಿ 250-300 ಮೊಟ್ಟೆಗಳ ಸಾಕಾಣಿಕೆ ಮಾಡಬಹುದು. ರೈತರು ವಾರ್ಷಿಕ 5 ರಿಂದ 6 ಲಕ್ಷ ರು. ಆದಾಯ ಪಡೆಯುವಂತೆ, ಜೊತೆಗೆ ಎರೆಹುಳು ಸಾಕಾಣಿಕೆ ಮಾಡಿ ಎರೆಹುಳು ಗೊಬ್ಬರ ಮಾರಾಟ ಮಾಡಿಯು ರೈತರು ಆದಾಯ ಪಡೆಯಬಹುದು ಎಂದರು.
ಇಲಾಖೆಯಲ್ಲಿ ಈಗಾಗಲೇ ಸೋಂಕು ನಿವಾರಕಗಳನ್ನು ಖರೀದಿ ಮಾಡಿದ್ದು, ದ್ವಿತಳಿ ಬೆಳೆಗಾರರು ಉಚಿತವಾಗಿ ಹತ್ತಿರದ ತಾಂತ್ರಿಕ ಸೇವಾ ಕೇಂದ್ರಗಳಲ್ಲಿ ಪಡೆಯಬಹುದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಮಂಜುನಾಥ್, ರೇಣುಕಾ, ಹಲಗೂರು ತಾಂತ್ರಿಕ ಸೇವಾ ಕೇಂದ್ರ ವಿಸ್ತರಣಾಧಿಕಾರಿ ಜಿ.ವಿ. ಶ್ರೀನಿವಾಸಗೌಡ ಮತ್ತು ಇಲಾಖೆಯ ಕಿರಣ್ ಘಾಟಗೆ, ಎಸ್.ವಿ.ನರಸಿಂಹಮೂರ್ತಿ, ಎಚ್.ಜೆ.ಆಶಾ, ಪೂಜಾ, ಟಿ.ಆರ್. ಜಯರಾಜು, ಪುರುಷೋತ್ತಮ್, ಎಂ.ಸಿ.ನವೀನ್ ಕುಮಾರ್, ಕುಮಾರ್ ಇನ್ನಿತರರು ಇದ್ದರು.