ಟೌನ್ ಶಿಪ್ ಪರ ರೈತರಿಂದ ಸಿಹಿ ಹಂಚಿ ಸಂಭ್ರಮ

KannadaprabhaNewsNetwork |  
Published : Jul 16, 2026, 01:15 AM IST
15ಕೆಆರ್ ಎಂಎನ್ 11.ಜೆಪಿಜಿಟೌನ್ ಶಿಪ್ ಯೋಜನೆ ಪರವಾಗಿರುವ ರೈತರು ಸಿಹಿ ಹಂಚಿ ಸಂಭ್ರಮಿಸಿದರು. | Kannada Prabha

ಸಾರಾಂಶ

ಕಳೆದ 20 ವರ್ಷಗಳ ರೆಡ್ ಜೋನ್ ವನವಾಸಕ್ಕೆ ಮುಕ್ತಿ ಸಿಕ್ಕಿತು. ತೊಲಗಿತು, ತೊಲಗಿತು ರೆಡ್ ಜೋನ್ ತೊಲಗಿತು. ನಮ್ಮ ಭೂಮಿ, ನಮ್ಮ ಹಕ್ಕು ನಮಗೆ ಟೌನ್ ಶಿಪ್ ಬೇಕು ಎಂದು ಯೋಜನೆ ಪರ ರೈತರು ಹೇಳಿದರು.

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗಾಗಿ ನಾಲ್ಕು ಕಂದಾಯ ಗ್ರಾಮಗಳ ಭೂ ಸ್ವಾಧೀನಕ್ಕೆ ರಾಜ್ಯಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ ಸುದ್ದಿ ತಿಳಿಯುತ್ತಿದ್ದಂತೆ ಯೋಜನೆ ಪರವಾಗಿರುವ ರೈತರು ಸಿಹಿ ಹಂಚಿ ಸಂಭ್ರಮಿಸಿದರು.

ಬೈರಮಂಗಲ ಶಾಲೆ ಎದುರು ಟೌನ್ ಶಿಪ್ ಯೋಜನೆ ಜಾರಿಗಾಗಿ ಪ್ರತಿಭಟನೆ ನಡೆಸುತ್ತಿರುವ ರೈತರು, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರವಾಗಿ ಘೋಷಣೆ ಕೂಗಿ ಸಂಭ್ರಮ ವ್ಯಕ್ತಪಡಿಸಿದರು.

ಕಳೆದ 20 ವರ್ಷಗಳ ರೆಡ್ ಜೋನ್ ವನವಾಸಕ್ಕೆ ಮುಕ್ತಿ ಸಿಕ್ಕಿತು. ತೊಲಗಿತು, ತೊಲಗಿತು ರೆಡ್ ಜೋನ್ ತೊಲಗಿತು. ನಮ್ಮ ಭೂಮಿ, ನಮ್ಮ ಹಕ್ಕು ನಮಗೆ ಟೌನ್ ಶಿಪ್ ಬೇಕು ಎಂದು ಯೋಜನೆ ಪರ ರೈತರು ಹೇಳಿದರು.

ರೈತ ಮುಖಂಡರಾದ ಹೊಸೂರು ರಾಜಣ್ಣ, ಎಚ್.ಎಸ್.ಸಿದ್ದರಾಜು, ಬೈರಮಂಗಲ ವಿಎಸ್ಎಸ್ಎನ್ ಅಧ್ಯಕ್ಷ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಆರ್.ಜಯಚಂದ್ರ, ರೈತಮುಖಂಡರಾದ ಶಿವರಾಮ್, ರಾಮಾಂಜಿನಿ, ಕೃಷ್ಣಮೂರ್ತಿ, ಯಾಲಕಯ್ಯ, ವೆಂಕಟಾಚಲಯ್ಯ, ನಾಗರಾಜು, ಸಂಜೀವರೆಡ್ಡಿ, ತಾಯಪ್ಪನದೊಡ್ಡಿಸ್ವಾಮಿ, ವಿನಯ್ ಕುಮಾರ್, ನಾಗೇಶ್, ಅಂಚೀಪುರ ಶೇಖರ್ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯಲ್ಲಿ ಶೇ.98.16ರಷ್ಟು ಎನುಮೆರೇಶನ್ ಫಾರಂ ವಿತರಣೆ
ಬಡವರ ಹೆಸರಿನ ಖಾತೆಯ ಬಹುಕೋಟಿ ಹಗರಣ ತನಿಖೆಗೆ ಆಗ್ರಹ