ರೈತ ದಿನಾಚರಣೆ ಸರ್ಕಾರಿ ಕಾರ್ಯಕ್ರಮವಾಗಲಿ

KannadaprabhaNewsNetwork | Published : Dec 24, 2024 12:46 AM

ಸಾರಾಂಶ

ದೇಶದಲ್ಲಿ ರೈತ, ಕೂಲಿ ಕಾರ್ಮಿಕರು ಶೇ.೭೫ ರಷ್ಟಿದ್ದಾರೆ, ಯಾವುದೇ ರಾಜ್ಯವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಇದುವರೆಗೂ ರೈತ ದಿನಾಚರಣೆ ಇಲ್ಲಿವರೆಗೆ ಆಚರಿಸಿಲ್ಲ. ಎಲ್ಲಾ ಆಚರಣೆಗಳನ್ನು ಆಚರಿಸುವ ಸರಕಾರಗಳು, ರೈತ ದಿನಾಚರಣೆಗೆ ಯಾಕೆ ನಿರ್ಲಕ್ಷ್ಯ ತೋರಿದ್ದಾರೆ, ಸರ್ಕಾರದ ಮೂಲಕವೇ ಆಚರಿಸಲು ಕ್ರಮ ವಹಿಸಬೇಕು.

ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರದ ವತಿಯಿಂದಲ್ಲೇ ಡಿ.೨೩ ರಂದು ರೈತ ದಿನಾಚರಣೆ ಆಚರಿಸಲು ಅಧಿವೇಶನದಲ್ಲಿ ಪ್ರಸ್ತಾಪಿಸಿ ಜಾರಿ ಮಾಡಲು ಸರಕಾರವನ್ನು ಒತ್ತಾಯಿಸಲಾಗುತ್ತದೆ, ರೈತ ಸಂಘಟನೆಗಳ ಕೂಗು ಇದಕ್ಕೆ ಹೆಚ್ಚಾಗಬೇಕು ಎಂದು ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ತಿಳಿಸಿದರು.ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕರುನಾಡ ರೈತ ಸಂಘದಿಂದ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ರೈತ, ಕೂಲಿ ಕಾರ್ಮಿಕರು ಶೇ.೭೫ ರಷ್ಟಿದ್ದಾರೆ, ಯಾವುದೇ ರಾಜ್ಯವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಇದುವರೆಗೂ ರೈತ ದಿನಾಚರಣೆ ಇಲ್ಲಿವರೆಗೆ ಆಚರಿಸಿಲ್ಲ. ಎಲ್ಲಾ ಆಚರಣೆಗಳನ್ನು ಆಚರಿಸುವ ಸರಕಾರಗಳು, ರೈತ ದಿನಾಚರಣೆಗೆ ಯಾಕೆ ನಿರ್ಲಕ್ಷ್ಯ ತೋರಿದ್ದಾರೆ, ಸರ್ಕಾರದ ಮೂಲಕವೇ ಆಚರಿಸಲು ಕ್ರಮ ವಹಿಸಬೇಕು ಎಂದರು.ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ

ಸಮಾಜದಲ್ಲಿ ಸ್ವಾಭಿಮಾನದ ಬದುಕು ರೈತರಿಂದ ಮಾತ್ರವೇ ಸಾಧ್ಯ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ರೀತಿಯಲ್ಲಿ ಬೆಂಬಲಬೆಲೆ ಇಲ್ಲದಿದ್ದರೂ ಕೂಡ ಸ್ವಾಭಿಮಾನ ಬಿಟ್ಟಿಲ್ಲ. ಕೊರೊನಾ ಸಂದರ್ಭದಲ್ಲಿ ರೈತರು ಬೆಳೆಗಳು ಮಾತ್ರವೇ ಜನರ ಕೈಹಿಡಿದಿದೆ ರೈತರಿಗೆ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳು ಸಮಸ್ಯೆಗಳು ಬರುತ್ತದೆ ಸಂಘಟನೆಯು ಅಂತಹ ಸಮಸ್ಯೆಗಳ ಪರಿಹಾರಕ್ಕೆ ಜೊತೆಯಾಗಬೇಕು ಎಂದು ಹೇಳಿದರು.ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ದೇಶದ ಆಸ್ತಿ ರೈತರು ಪ್ರತಿನಿತ್ಯ ಆಹಾರ ಸೇವನೆ ರೈತರಿಂದ ಆದರೆ ಸಮಾಜದಲ್ಲಿ ರೈತರನ್ನು ಗುರುತಿಸುತ್ತಿಲ್ಲ, ರೈತರು ಸಂಘಟನೆಗಳು ಒಗ್ಗಟ್ಟಿನಿಂದ ತಮ್ಮ ಸಮಸ್ಯೆಗಳನ್ನು ಪ್ರಶ್ನೆ ಮಾಡುವಂತೆ ಮಾಡಬೇಕು, ರೈತ ದಿನಾಚರಣೆ ಮುಂದಿನ ವರ್ಷ ಅದ್ದೂರಿಯಾಗಿ ನಡೆಸುವ ಜೊತೆಗೆ ನಿಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದರು.

ರೈತರಿಗೆ ಸರ್ಕಾರ ನೆರವಾಗಲಿ

ಚಿತ್ರದುರ್ಗ ಜಿಲ್ಲೆಯ ಮುರುಗಮಠ ಮಠದ ಡಾ.ಬಸವಪ್ರಭು ಮಾತನಾಡಿ, ದೇಶದಲ್ಲಿ ತ್ರಿಮೂರ್ತಿಗಳಾದ ರೈತರು, ಸೈನಿಕರು, ಹಾಗೂ ಶಿಕ್ಷಕರು ಅವರ ಉದ್ದಾರ ಮಾಡುವುದು ಆಳುವ ಸರಕಾರದ ಜವಾಬ್ದಾರಿಯಾಗಬೇಕು, ರೈತರ ಕಾಯಕವು ಸಮಾಜದಲ್ಲಿ ಮೋಸ, ವಂಚನೆ ಇಲ್ಲದೇ, ಪ್ರಾಮಾಣಿಕ ವಾಗಿದ್ದು ಇಂತಹ ಕಾಯಕಕ್ಕೆ ನಾವು ಎಲ್ಲರೂ ಬೆಂಬಲಿಸುವಂತೆ ಮನವಿ ಮಾಡಿದರು.ಸಂಘಟನೆಯ ರಾಜ್ಯ ಅಧ್ಯಕ್ಷ ಡಾ.ಜಿ.ಸಿ.ನಾರಾಯಣಸ್ವಾಮಿ, ಸಂಸ್ಥಾಪಕ ಅಧ್ಯಕ್ಷ ಗೋಪಾಲಯ್ಯ, ಮುಖಂಡರಾದ ರಮೇಶ್, ರಾಜಪ್ಪ, ರವಿಕುಮಾರ್, ಅಪ್ಪಾ ಸಾಹೇಬ್ ಬುಗಡೆ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ತೋಟಗಾರಿಕೆ ಇಲಾಖೆಯ ಪರಮೇಶ್, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ವಿಜಯಲಕ್ಷ್ಮಿ ಇದ್ದರು.

Share this article