ಡಿಸಿಸಿ ಬ್ಯಾಂಕ್ ಹಗರಣ ಸಿ.ಬಿ.ಐತನಿಖೆಗೆ ರೈತರಿಂದ ಒತ್ತಾಯ

KannadaprabhaNewsNetwork |  
Published : May 13, 2026, 12:15 AM IST
೧೨ಕೆಎಲ್‌ಆರ್-೩ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿದ ರೈತರಿಗೆ ಕೃಷಿ ಸಾಲ ಯಾವುದೇ ಷರತ್ತು ಇಲ್ಲದೆ ವಿತರಣೆ ಮಾಡಬೇಕು, ಬ್ಯಾಂಕ್‌ನಲ್ಲಿ ನಡೆದಿರುವ ನೂರಾರು ಕೋಟಿ ಸಾಲ ವಿತರಣ ಹಗರಣವನ್ನು ಸಿ.ಬಿ.ಐ ಒಪ್ಪಿಸಬೇಕೆಂದು ರೈತ ಸಂಘದಿಂದ ಬಂಡಿಗಳು ಹಾಗೂ ಮುಳ್ಳಿನ ಗಿಡಗಳ ಸಮೇತ ಬ್ಯಾಂಕ್ ಮುಂದೆ ಹೋರಾಟ ನಡೆಸಿ ಬ್ಯಾಂಕ್ ಅಧಿಕಾರಿಗಳಿಗೆ ಮನವಿಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ರೈತರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರಿಗೆ ಸ್ವಾಭಿಮಾನದ ಬದುಕು ನೀಡಿರುವ ಡಿ.ಸಿ.ಸಿ ಬ್ಯಾಂಕನ್ನು ಇಂದು ರಾಜಕಾರಣಿಗಳು, ಅಧಿಕಾರಿಗಳು ಸೇರಿ ಲೂಟಿ ಮಾಡುತ್ತಿದ್ದಾರೆ. ರೈತರಿಗೆ ನೀಡಬೇಕಾದ ಸಾಲದ ಹಣ. ಹಾಲಿನ ಬಟವಾಡೆ ಹಣ ನೀಡದ ಮಟ್ಟಕ್ಕೆ ಬ್ಯಾಂಕ್ ಮುಳುಗಡೆಯಾಗುತ್ತಿದ್ದರೂ ಜನಪ್ರತಿನಿಧಿಗಳು ಧ್ವನಿ ಎತ್ತುತಿಲ್ಲ

ಕನ್ನಡಪ್ರಭ ವಾರ್ತೆ ಕೋಲಾರಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡಿದ ರೈತರಿಗೆ ಯಾವುದೇ ಷರತ್ತು ಇಲ್ಲದೆ ಕೃಷಿ ಸಾಲ ವಿತರಿಸಬೇಕು, ಬ್ಯಾಂಕ್‌ನಲ್ಲಿ ನಡೆದಿರುವ ನೂರಾರು ಕೋಟಿ ಸಾಲ ವಿತರಣ ಹಗರಣವನ್ನು ಸಿ.ಬಿ.ಐ ಒಪ್ಪಿಸಿ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ರೈತ ಸಂಘದಿಂದ ಬಂಡಿಗಳು ಹಾಗೂ ಮುಳ್ಳಿನ ಗಿಡಗಳ ಸಮೇತ ಬ್ಯಾಂಕ್ ಮುಂದೆ ಹೋರಾಟ ಮಾಡಿ ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ರೈತರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರಿಗೆ ಸ್ವಾಭಿಮಾನದ ಬದುಕು ನೀಡಿರುವ ಡಿ.ಸಿ.ಸಿ ಬ್ಯಾಂಕನ್ನು ಇಂದು ರಾಜಕಾರಣಿಗಳು, ಅಧಿಕಾರಿಗಳು ಸೇರಿ ಲೂಟಿ ಮಾಡುತ್ತಿದ್ದಾರೆ. ರೈತರಿಗೆ ನೀಡಬೇಕಾದ ಸಾಲದ ಹಣ. ಹಾಲಿನ ಬಟವಾಡೆ ಹಣ ನೀಡದ ಮಟ್ಟಕ್ಕೆ ಬ್ಯಾಂಕ್ ಮುಳುಗಡೆಯಾಗುತ್ತಿದ್ದರೂ ಜನಪ್ರತಿನಿಧಿಗಳು ಧ್ವನಿ ಎತ್ತುತಿಲ್ಲ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ತರಾಟೆಗೆ ತೆಗೆದುಕೊಂಡರು.ಕೆ.ಜಿ.ಎಫ್ ಬ್ಯಾಂಕಿನಲ್ಲಿ ೨.೫ ಕೋಟಿ ರು. ಸಾಲ ಮರುಪಾವತಿ ಮಾಡದ ಮಾಜಿ ಶಾಸಕ ಕೆ.ಎಂ. ನಾರಾಯಣಸ್ವಾಮಿ ಅವರಿಗೆ ಸಾಲ ಮುಕ್ತವಾಗಿದೆಯೆಂದು ಎನ್.ಓ.ಸಿ ನೀಡಿರುವ ಪ್ರಕರಣ ಗಂಭಿರವಾಗಿ ಪರಿಗಣಿಸಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಎಲ್ಲಾ ರೈತರಿಗೂ ಹಾಗೂ ಸ್ತ್ರೀಶಕ್ತಿ ಸಂಘಗಳಿಗೂ ಬ್ಯಾಂಕಿನಿಂದ ಎನ್.ಓ.ಸಿ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ರೈತರು ಬ್ಯಾಂಕ್ ಅಧಿಕಾರಿಗಳಿಗೆ ಸಲಹೆ ನೀಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಬ್ಯಾಂಕಿನ ಅಧಿಕಾರಿಗಳು, ರೈತರಿಗೆ ಸಾಲ ವಿತರಣೆ ಮಾಡುವ ಜೊತೆಗೆ ಬ್ಯಾಂಕ್ ನಲ್ಲಿ ನಡೆದಿರುವ ಕೋಟಿ ಕೋಟಿ ಹಗರಣದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆಂದು ಮಾಹಿತಿ ನೀಡಿದರು. ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಪುತ್ತೇರಿ ರಾಜು, ಕಮ್ಮದಟ್ಟಿ ಚಲಪತಿ, ಮಂಗಸಂದ್ರ ತಿಮ್ಮಣ್ಣ, ಪಾರುಕ್ ಪಾಷ ಸುಪ್ರೀಂ ಚಲ, ಮಂಜುನಾಥ, ದೇವರಾಜ್, ಕಾಮನೂರು ಬಾಬು ಚಂದ್ರಪ್ಪ, ಯಲ್ಲಣ್ಣ, ವೆಂಕಟೇಶಪ್ಪ, ಕುವಣ್ಣ ಗೋವಿಂದಪ್ಪ, ಗಿರೀಶ್ ರಾಜು, ವೇಣು, ಧರ್ಮ ನಾಗೇಶ, ಶೈಲಜ, ರತ್ನಮ, ವೆಂಕಟಮ್ಮ, ಮುನಿಚೌಡಮ್ಮ ಗೌರಮ್ಮ ಇದ್ದರು.

----೧೨ಕೆಎಲ್‌ಆರ್-೩

ಬ್ಯಾಂಕ್‌ನಲ್ಲಿ ನಡೆದಿರುವ ನೂರಾರು ಕೋಟಿ ಸಾಲ ವಿತರಣಾ ಹಗರಣವನ್ನು ಸಿ.ಬಿ.ಐ ತನಿಖೆಗೆ ಒಪ್ಪಿಸಬೇಕೆಂದು ರೈತ ಸಂಘದ ನಾಯಕರು ಬ್ಯಾಂಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಧನೆಯಷ್ಟೇ ಅಲ್ಲ, ಸಾರ್ಥಕ ಸೇವೆಯ ಸಮರ್ಪಣೆ
ಸಾಂಸ್ಕೃತಿಕ ಮನಸ್ಸು ಇಲ್ಲದಿರುವುದೇ ಯುದ್ಧಕ್ಕೆ ಕಾರಣ