ಖಾತೆ ಮಾಡಿಕೊಡಲು ರೈತರ ಪಟ್ಟು

KannadaprabhaNewsNetwork |  
Published : Jul 11, 2025, 11:48 PM IST
೧೧ಶಿರಾ೩: ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಬಂದಕುಂಟೆ ಗ್ರಾಮದ ಗೌಡಗೆರೆ ಸರ್ವೇ ನಂ. ೧೧೫, ೧೧೬, ೧೧೭, ೧೧೮ ರಲ್ಲಿ ಒಟ್ಟು ೧೧೩ ಎಕರೆ ಜಮೀನು ಇದ್ದು, ಕಳೆದ ೫೦ ವರ್ಷಗಳ ಹಿಂದೆ ಶಿರಾ ತಹಶೀಲ್ದಾರ್ ಆಗಿದ್ದ ರಾಮದಾಸ್ ಹಾಗೂ ಚಿಕ್ಕಚನ್ನಯ್ಯ ಕಾಲದಲ್ಲಿ ಸಾಗುವಳಿ ಚೀಟಿ ವಿತರಿಸಲಾಗಿದೆ. ಆದರೆ ಇದುವರೆಗೂ ಪಹಣಿ  ಸರ್ಕಾರಿ ಸ್ವಾಮಿತ್ವದಲ್ಲಿ ಯಾವುದೇ ನಿಕರವಾದ ದಾಖಲಾತಿ ಇಲ್ಲದ ಕಾರಣ ಖಾತೆ ಬದಲಾವಣೆ ಹಾಗೂ ಮಾರಾಟಕ್ಕೆ ತಾಲ್ಲೂಕಿನ ರೈತರ ಪರದಾಡುವ ಸ್ಥಿತಿ ಬಂದೊದಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡು ಪ್ರತಿಭಟಿಸಿದರು. | Kannada Prabha

ಸಾರಾಂಶ

ಜಮೀನುಗಳಿಗೆ ದುರಸ್ತಿ ಮಾಡಿ ಖಾತೆ ಮಾಡಿಕೊಡದಿದ್ದರೆ ರೈತರು ವಿಷ ಕುಡಿಯುವುದಾಗಿ ತಿಳಿಸಿದರು

ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕಿನ ಬಂದಕುಂಟೆ ಗ್ರಾಮದ ಗೌಡಗೆರೆಯಲ್ಲಿ ಒಟ್ಟು ೧೧೩ ಎಕರೆ ಜಮೀನು ಇದ್ದು, ಕಳೆದ ೫೦ ವರ್ಷಗಳ ಹಿಂದೆ ಶಿರಾ ತಹಸೀಲ್ದಾರ್ ಆಗಿದ್ದ ರಾಮದಾಸ್ ಹಾಗೂ ಚಿಕ್ಕಚನ್ನಯ್ಯ ಕಾಲದಲ್ಲಿ ಸಾಗುವಳಿ ಚೀಟಿ ವಿತರಿಸಲಾಗಿದೆ. ಆದರೆ ಇದುವರೆಗೂ ಪಹಣಿ ಸರ್ಕಾರಿ ಸ್ವಾಮಿತ್ವದಲ್ಲಿ ಯಾವುದೇ ನಿಖರವಾದ ದಾಖಲಾತಿ ಇಲ್ಲದ ಕಾರಣ ಖಾತೆ ಬದಲಾವಣೆ ಹಾಗೂ ಮಾರಾಟಕ್ಕೆ ತಾಲೂಕಿನ ರೈತರ ಪರದಾಡುವ ಸ್ಥಿತಿ ಬಂದೋದಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು. ಅವರು ಬಂದಕುಂಟೆ ಗ್ರಾಮದ ರೈತರ ಜಮೀಣಿನಲ್ಲಿ ಪ್ರತಿಭಟನೆ ಮಾಡಿ ಐವತ್ತು ವರ್ಷಗಳಿಂದ ಸಾಗುವಳಿ ಜಮೀನುಗಳಿಗೆ ದುರಸ್ತಿ ಕಾರ್ಯ ನಡೆದಿಲ್ಲ. ಇದೇ ಬಂದಕುಂಟೆ ಗ್ರಾಮದ ರೈತ ಹನುಮಂತಪ್ಪ ಮಗ ಓಂಕಾರಪ್ಪ ೪೨ ವರ್ಷದ ಇವರಿಗೆ ಒಬ್ಬ ಮಗ, ಹೆಂಡತಿ ಇದ್ದು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಜಮೀನು ಮಾರಾಟ ಮಾಡಿ ಹೆತ್ತ ತಂದೆ ತಾಯಿ ಮಗನ ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರು ಸಾಗುವಳಿ ಜಮೀನಿಗೆ ಸರಿಯಾದ ದಾಖಲೆ ಇಲ್ಲದ ಕಾರಣ ಮಾರಾಟವಾಗದೆ ಹಣವಿಲ್ಲದೆ ಇದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ನೈಜ ಉದಾಹರಣೆ ಇವೆ. ಈ ಭಾಗದ ರೈತರು ಎಷ್ಟೇ ಭಾರಿ ಮಧುಗಿರಿ ಎ. ಸಿ. ಕಚೇರಿಗೆ ಹಾಗೂ ಶಿರಾ ತಹಸೀಲ್ದಾರ್ ಕಚೇರಿಗೆ ಅಲೆದು ಅಲೆದು ಹೈರಾಣಾಗಿ ಹೋಗಿದ್ದಾರೆ, ಇಷ್ಟು ವರ್ಷಗಳ ಕಾಲ ತಮ್ಮ ಸಾಗುವಳಿ ಜಮೀನುಗಳಿಗೆ ನಿಖರ ದಾಖಲೆ ಇಲ್ಲದೇ ಪರದಾಡಿದ್ದು, ಇನ್ನೂ ಕಾಯುವ ತಾಳ್ಮೆ ನಮ್ಮಲ್ಲಿ ಇಲ್ಲಾ ಹಾಗಾಗಿ ನಮಗೆ ಉಳಿದಿರುವುದು ಒಂದೇ ದಾರಿ ನಮ್ಮ ಪ್ರಾಣ ಬಿಡುವುದು ನಮಗೆ ಸರಿಯಾದ ರೀತಿಯಲ್ಲಿ ಜಮೀನುಗಳಿಗೆ ದುರಸ್ತಿ ಮಾಡಿ ಖಾತೆ ಮಾಡಿಕೊಡದಿದ್ದರೆ ರೈತರು ವಿಷ ಕುಡಿಯುವುದಾಗಿ ತಿಳಿಸಿದರು. ಈ ಭಾಗದ ರೈತರ ಪ್ರಾಣಕ್ಕೆ ಏನೇ ತೊಂದರೆ ಆದರೂ ಇದಕೆಲ್ಲಾ ಕಾರಣ ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.ಈ ಸಂದರ್ಭದಲ್ಲಿ ಬಂದ ಕುಂಟೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಕಾಶ್, ಸದಸ್ಯ ಚಂದ್ರಶೇಖರ್, ರಾಮಕೃಷ್ಣಪ್ಪ, ಬಿ. ಎನ್. ಜುಂಜರಾಮಣ್ಣ, ಮಹಾಲಿಂಗಪ್ಪ ,ಸಣ್ಣ ಹನುಮಂತಪ್ಪ ಬಿ.ಎಚ್. ಗೋಪಾಲಪ್ಪ ,ದೊಡ್ಡ ಲಿಂಗಪ್ಪ, ವೀರಭದ್ರಪ್ಪ, ಬಿ.ಜಿ. ಹನುಮಂತಪ್ಪ, ಹಾಲಮ್ಮ ,ಫಕ್ರುಬಿ, ಹನುಮಂತಪ್ಪ ,ವಾಸುದೇವ ಮಾಜಾಂಬಿ, ರಂಗನಾಥಪ್ಪ, ರಂಗನಾಥ ನಾಯಕ, ಬಿ. ಹೆಚ್ .ಲೋಕೇಶ್, ರಾಮಚಂದ್ರಪ್ಪ, ಶ್ರೀನಿವಾಸ್ ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರೋಗ್ಯ ಸುಧಾರಣೆಗೆ ಆಯುರ್ವೇದ ಅಗತ್ಯ: ಶಾಸಕ ಗವಿಯಪ್ಪ
ಮರಳು ಮಾಫಿಯಾ ವಿರುದ್ಧ ಕ್ರಮಕ್ಕೆ ಆಗ್ರಹ