ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಪ್ರಗತಿಪರ ರೈತ ಡಾ. ವೆಂಕಟರಾಮಾಂಜನೇಯ ಮಾತನಾಡಿ, ಭಾರತದಲ್ಲಿ ರೈತರೇ ಅತಿ ದೊಡ್ಡ ದಾನಿಯಾಗಿದ್ದು, ಸಕಲ ಜೀವರಾಶಿಗಳಿಗೆ ಅನ್ನ ನೀಡುವವರಾಗಿದ್ದಾರೆ. ಆಹಾರ ಬೆಳೆಯುವ ರೈತರ ಬೆಲೆ ಬರೀ ಐದು ವರ್ಷದಲ್ಲಿ ಇಡೀ ವಿಶ್ವಕ್ಕೆ ತಿಳಿಯುತ್ತೆ ಎಂದು ಅಭಿಪ್ರಾಯಪಟ್ಟರು. ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ರೈತರನ್ನು, ನೋಡಿದ ಕ್ಷೇತ್ರಗಳನ್ನು ಬಿಟ್ಟು ಈಶಾನ್ಯ ರಾಜ್ಯಗಳಿಗೆ ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯ ಬೇಕು ಎಂದು ಅಧಿಕಾರಿಗಳಿಗೆ ವೆಂಕಟರಾಮಾಂಜನೇಯ ಸಲಹೆ ನೀಡಿದರು.
ನಿವೃತ್ತ ಕೃಷಿ ಸಹಾಯಕ ನಿರ್ದೇಶಕ ರಾಜಶೇಖರ್ ಮಾತನಾಡಿ, ರೈತರು ಹೆಚ್ಚಾಗಿ ಹಲಸಂಧಿ, ಹೆಸರು, ಕುರುಷಣಿ, ಸಾಸುವೆ ಕಾಳುಗಳನ್ನು ಬೆಳೆದು ಆರೋಗ್ಯವನ್ನು ಗಟ್ಟಿ ಮಾಡಿಕೊಳ್ಳಿ ಎಂದರು.ಗ್ರಾ.ಪಂ ಅಧ್ಯಕ್ಷೆ ರೇಖಾ, ಪಶು ವೈದ್ಯಾಧಿಕಾರಿ ಡಾ. ಸಿದ್ದೇಶ್, ರೈತ ಉತ್ಪಾದಕ ಕಂಪನಿಯ ಅಧ್ಯಕ್ಷೆ ಪುಷ್ಪಾವತಿ ಅಂಗಡಿ, ಕಂಪನಿಯ ಉಪಾಧ್ಯಕ್ಷ ಕೆ.ಎಸ್ ಪಾಟೀಲ್, ನಿರ್ದೇಶಕ ಕೆ.ಜಿ ರಾಜು, ಪ್ರಕಾಶ್, ಉಮೇಶ್, ಎಸ್. ಮಂಜುನಾಥ್, ನಾಗನಗೌಡ, ಗಣೇಶ್, ಗಂಗಾಧರ್, ಶಿವನಗೌಡ, ವಿವೇಕ್ ಗ್ರಾಮಸ್ಥರಾದ ಮಲ್ಲಿಕಾರ್ಜುನಪ್ಪ ಹಾಗೂ ತಾಲೂಕಿನ ನೂರಾರು ರೈತರು ಇದ್ದರು. ಸಭೆಯಲ್ಲಿ ವಾರ್ಷಿಕ ವರದಿ, ಜಮಾ ಖರ್ಚು ಮಂಡಿಸಲಾಯಿತು. ರೈತ ಸದಾನಂದ ಮಣ್ಣು ಕುರಿತ ಗೀತೆ ಹಾಡಿದರು.