ರಾಜ್ಯ ಸರ್ಕಾರದ ಲಂಚಗುಳಿತನದಿಂದ ರೈತರ ಬದುಕು ಶೋಷಣೆ: ಗುರುಪ್ರಸಾದ್‌

KannadaprabhaNewsNetwork |  
Published : Feb 16, 2026, 01:45 AM IST
ಗುಂಡ್ಲುಪೇಟೆ ತಾಲೂಕಿನ ಬಸವಾಪುರದಲ್ಲಿ ರೈತಸಂಘದ ಗ್ರಾಮ ಘಟಕವನ್ನು ವಾಸುದೇವ ಮೇಟಿ ಬಣದ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

‘ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆಯನ್ನು ಖಂಡಿಸಲು ರೈತರು ಹೋರಾಡುವ ಅವಶ್ಯಕತೆ ಇದೆ. ಗ್ರಾಮೀಣ ಭಾಗದ ಯುವಕರನ್ನು ಚಳವಳಿಗೆ ಕರೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ’ ಎಂದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕೇಂದ್ರ ಸರ್ಕಾರ ರಾಜ್ಯವನ್ನು ಬಜೆಟ್‌ನಲ್ಲಿ ಹೆಚ್ಚು ಅನುದಾನ ನೀಡಿದೆ ಸಂಪೂರ್ಣ ನಿರ್ಲಕ್ಷ ಮಾಡಿದೆ. ರಾಜ್ಯ ಸರ್ಕಾರ ಕೂಡ ಅತಿಯಾದ ಲಂಚಗೂಳಿತನದಿಂದ ರೈತರ ಬದುಕನ್ನು ಶೋಷಿಸುತ್ತಿದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಡಾ. ಗುರುಪ್ರಸಾದ್‌ ಆರೋಪಿಸಿದರು.

ತಾಲೂಕಿನ ಬಸವಾಪುರ ಗ್ರಾಮದಲ್ಲಿ ವಾಸದೇವ ಮೇಟಿ ಬಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟಿಸಿದ ಬಳಿಕ ಗ್ರಾಮದ 35 ಮಂದಿ ರೈತರು ಸಂಘಕ್ಕೆ ಸೇರ್ಪಡೆಯಾದ ಬಳಿಕ ಮಾತನಾಡಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆಯನ್ನು ಖಂಡಿಸಲು ರೈತರು ಹೋರಾಡುವ ಅವಶ್ಯಕತೆ ಇದೆ. ಗ್ರಾಮೀಣ ಭಾಗದ ಯುವಕರನ್ನು ಚಳವಳಿಗೆ ಕರೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ’ ಎಂದರು.

ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಮಾತನಾಡಿ,‘ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಶಾಸಕರು ಕೂಡಲೇ ಕ್ರಮ ವಹಿಸಬೇಕು ಇಲ್ಲದಿದ್ದರೆ ತಾಲೂಕು ಕೇಂದ್ರದಲ್ಲಿ ರೈತರು ಉಗ್ರ ಚಳವಳಿಯನ್ನು ರೂಪಿಸಬೇಕಾಗುತ್ತದೆ’ ಎಂದಚ್ಚರಿಸಿದರು.

ಸಮಾರಂಭದಲ್ಲಿ ತಾಲೂಕು ಅಧ್ಯಕ್ಷ ಮಹೇಶ್, ಹಸಿರು ಸೇನೆ ಅಧ್ಯಕ್ಷ ಚಿಕ್ಕಣ್ಣ, ಜಿಲ್ಲಾ ಸಂಚಾಲಕರಾದ ಮೂರ್ತಿ, ಬುದ್ಧಿ, ತಾಲೂಕು ಕಾರ್ಯದರ್ಶಿ ಬೆಟ್ಟಹಳ್ಳಿ ಗುರು, ಮುಖಂಡರಾದ ಶಂಭುಲಿಂಗಪ್ಪ, ಸತೀಶ, ಸುರೇಶ, ಸ್ವಾಮಿ, ಮಣಿಕಂಠ, ಪ್ರಸಾದ, ಹಕ್ಕಲಪುರ ಮಹೇಶ, ನಂದೀಶ, ಯೋಗಿ, ಹುಲಗ ನಾಯಕ, ರವಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಡಸಿಯಲ್ಲಿ ಶಾಸಕ ಶಿವಲಿಂಗೇಗೌಡರ ಹುಟ್ಟುಹಬ್ಬ ಆಚರಣೆ
ನಾಗಮಂಗಲ: ಶ್ರೀಸೌಮ್ಯಕೇಶವ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ