ಕನ್ನಡಪ್ರಭ ವಾರ್ತೆ ಇಂಡಿ
ಬೇಸಿಗೆಯಲ್ಲಿ ಕೆರೆ ತುಂಬಿಸಿದ್ದು ರೈತರಿಗೆ, ಜನ, ಜಾನುವಾರುಗಳಿಗೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಾಗಲು ಅನುಕೂಲವಾಗಿದೆ. ರೈತರ ಸಂತೃಪ್ತ ಬದುಕಿಗೆ ಕೆರೆ ತುಂಬಿಸುವ ನೀರಾವರಿ ಯೋಜನೆಗಳು ಜಾರಿಗೊಳಿಸಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಬಬಲಾದ, ಹಣಗುಣಕಿ, ಹಡಲಸಂಗ 01-02, ಕಪನಿಂಬರಗಿ, ಸೋನಕನಹಳ್ಳಿ ಕೆರೆಗಳಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಕೆರೆಗಳು ತುಂಬಿದ್ದರಿಂದ ರೈತರು ನಗುಮುಖದಲ್ಲಿದ್ದಾರೆ. ಇದಕ್ಕಿಂತ ತೃಪ್ತಿ ಮತ್ತೊಂದಿಲ್ಲ. ನೀರು ಅತ್ಯಂತ ಅಮೂಲ್ಯ. ತಾಲೂಕಿನ ಸುಮಾರು 19 ಕೆರೆಗಳು ತುಂಬಿರುವುದರಿಂದ ರೈತರಲ್ಲಿ ಮಂದಹಾಸ ಮೂಡಿದೆ. ನಿಸರ್ಗದ ಏರುಪೇರುಗಳ ಮಧ್ಯ ಅತ್ಯಂತ ಕಷ್ಟದ ಜೀವನ ಸಾಗಿಸುತ್ತಿರುವ ರೈತಾಪಿ ವರ್ಗದ ಅಭಿವೃದ್ಧಿಗೆ ನೀರಾವರಿಯೇ ಮಾರ್ಗ. ನೀರಾವರಿಯಿಂದ ವಂಚಿತವಾದ ಈ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಗಡಿಭಾಗದಲ್ಲಿರುವ ಇಂಡಿ ಮತಕ್ಷೇತ್ರವನ್ನು ಸರ್ವವಿಧದಲ್ಲಿ ಅಭಿವೃದ್ದಿಪಡಿಸಬೇಕು ಎಂಬ ಚಿಂತನೆ ಇಟ್ಟುಕೊಂಡು 40 ವರ್ಷದ ರಾಜಕೀಯ ಅನುಭವ ಧಾರೆ ಎರೆಯುವುದರ ಮೂಲಕ ಕ್ಷೇತ್ರವನ್ನು ಎಲ್ಲ ರಂಗದಲ್ಲಿಯೂ ಅಭಿವೃದ್ಧಿಪಡಿಸಿದ ಸಮಾಧಾನ ನನಗಿದೆ ಎಂದು ಹೇಳಿದರು.
ಕ್ಷೇತ್ರದ ಜನರು ಮತಹಾಕಿ ನನಗೆ ಆಶೀರ್ವಾದ ಮಾಡಿದ್ದರಿಂದ ಕರೆ ತುಂಬುವ ಯೋಜನೆ, ಕಾಲುವೆಗಳಿಗೆ ನೀರು ಹರಿಸಿ ಬೇಸಿಗೆ ಇದ್ದರೂ ಸಹಿತ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿದ್ದೇನೆ. 19 ಕೆರೆಗಳು ತುಂಬಿದ್ದರಿಂದ ಕೆರೆಯಾಶ್ರೀತ ಪ್ರದೇಶಗಳು,ಬೋರ್‌ವೆಲ್, ಬಾವಿಗಳ್ಲಿ ಅಂರ್ತಜಲಮಟ್ಟ ಹೆಚ್ಚಾಗಿದೆ ಎಂದು ರೈತರು, ಜನರು ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.ಮಹೇಶಿ ಬದ್ರೀನಾಥ, ಸಿದ್ದರಾಯಗೌಡ ಹಳಗುಣಕಿ, ಮಲ್ಲಣ್ಣಗೌಡ ಬಿರಾದಾರ, ಸಿದ್ದಣ್ಣಗೌಡ ಬಿರಾದಾರ, ಬಾಪುರಾಯಗೌಡ ಬಿರಾದಾರ, ಪ್ರೀತು ದಶವಂತ, ಗುರಣ್ಣಗೌಡ ಪಾಟೀಲ, ರಾಂಪೂರ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ, ಕೆಬಿಜೆಎನ್ ಹಿರಿಯ ಎಂಜಿನಿಯರ್ ಗೋವಿಂದ ರಾಠೋಡ, ಚವಡಿಹಾಳ ಗ್ರಾಪಂ ಅಧ್ಯಕ್ಷ ರಮೇಶಗೌಡ ಬಿರಾದಾರ, ಅಶೋಕಗೌಡ ಬಿರಾದಾರ, ಎ.ಎಸ್.ಪಾಟೀಲ, ಅಶೋಕ ಪ್ಯಾಟಿ ಸೇರಿದಂತೆ ಹಳಗುಣಕಿ, ಬಬಲಾದ, ಕಪನಿಂಬರಗಿ, ಹಡಲಸಂಗ ಗ್ರಾಮದ ಮುಖಂಡರಿದ್ದರು.ಕೋಟ್37 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯನ್ನು ₹ 3100 ಕೋಟಿ ಅನುದಾನದಲ್ಲಿ ಕೈಗೊಳ್ಳಲಾಗುತ್ತಿದೆ. ವಿಧಾನಸಭಾ ಕ್ಷೇತ್ರಕ್ಕೆ 5 ನೀರಾವರಿ ಯೋಜನೆಗಳು ಎಲ್ಲಿಯಾದರೂ ಬಂದಿದೆ ಎಂದರೆ ಅದು ಇಂಡಿ ಕ್ಷೇತ್ರಕ್ಕೆ ಮಾತ್ರ. ದೊಡ್ಡಮಟ್ಟದ ಸಹಾಯ ಮಾಡಿದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕಾಗುತ್ತದೆ. ಜಿಲ್ಲೆಯಲ್ಲಿ ಇರಬೇಕಾದ ಜಿಟಿಟಿಸಿ ಕಾಲೇಜು ಜಿಲ್ಲೆಗೆ ಕೊಡಬೇಕು, ಆದರೆ ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಜಿಟಿಟಿಸಿ ಕಾಲೇಜು ಗಡಿಭಾಗದ ತಾಲೂಕು ಮಟ್ಟಕ್ಕೆ ತಂದಿರುವೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಣ ಕಲಿತು ದೇಶ, ವಿದೇಶದಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ.ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕರು