ಖಾದ್ಯ ತೈಲ ಉತ್ಪಾದನೆಯಲ್ಲಿ ರೈತರಿಗೆ ಸ್ವಾವಲಂಬನೆ ಅಗತ್ಯ: ಹುಲ್ಲೇಹಳ್ಳಿ ಲಕ್ಷ್ಮಣ್

KannadaprabhaNewsNetwork |  
Published : Aug 02, 2024, 12:51 AM IST
30 ಬೀರೂರು 2ಬೀರೂರು ಹೋಬಳಿಯ ಹುಲ್ಲೇಹಳ್ಳಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಮಂಗಳವಾರ ರೈತರಿಗೆ ಆಯೋಜಿಸಿದ್ದ ರಾಷ್ಟಿçÃಯ ಖಾದ್ಯ ತೈಲ ಅಭಿಯಾನ ಮತ್ತು ಎಣ್ಣೆ ಕಾಳು ಯೋಜನೆ ಮತ್ತು ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಗ್ರಾ.ಪಂ.ಉಪಾಧ್ಯಕ್ಷ ಲಕ್ಷö್ಮಣ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಬೀರೂರು, ದೇಶದಲ್ಲಿ ತೈಲ ಉತ್ಪಾದನೆ ಕುಂಠಿತವಾಗಿರುವ ಪರಿಣಾಮ ಇಂದು ತೈಲ ಬೆಲೆ ಹೆಚ್ಚಾಗಿದೆ. ರೈತರೆ ಸ್ವಾವಲಂಬಿಗಳಾಗಿ ತೈಲ ಉತ್ಪಾದಿಸಿದರೆ ಬೆಲೆ ಕಡಿಮೆಯಾಗಲಿದೆ ಎಂಬ ನಿಟ್ಟಿನಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಗೊಳಿಸಿದೆ. ಇದಕ್ಕೆ ರೈತರು ಸಹಕರಿಸಿದರೆ ಗಗನಕ್ಕೇರುವ ಬೆಲೆಗಳು ಕಡಿಮೆಯಾಗುತ್ತವೆ ಎಂದು ಹುಲ್ಲೇಹಳ್ಳಿ ಗ್ರಾಪಂ ಉಪಾಧ್ಯಕ್ಷ ಲಕ್ಷ್ಮಣ್ ಹೇಳಿದರು.

ಕನ್ನಡಪ್ರಭ ವಾರ್ತೆ,ಬೀರೂರು.

ದೇಶದಲ್ಲಿ ತೈಲ ಉತ್ಪಾದನೆ ಕುಂಠಿತವಾಗಿರುವ ಪರಿಣಾಮ ಇಂದು ತೈಲ ಬೆಲೆ ಹೆಚ್ಚಾಗಿದೆ. ರೈತರೆ ಸ್ವಾವಲಂಬಿಗಳಾಗಿ ತೈಲ ಉತ್ಪಾದಿಸಿದರೆ ಬೆಲೆ ಕಡಿಮೆಯಾಗಲಿದೆ ಎಂಬ ನಿಟ್ಟಿನಲ್ಲಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿ ಗೊಳಿಸಿದೆ. ಇದಕ್ಕೆ ರೈತರು ಸಹಕರಿಸಿದರೆ ಗಗನಕ್ಕೇರುವ ಬೆಲೆಗಳು ಕಡಿಮೆಯಾಗುತ್ತವೆ ಎಂದು ಹುಲ್ಲೇಹಳ್ಳಿ ಗ್ರಾಪಂ ಉಪಾಧ್ಯಕ್ಷ ಲಕ್ಷ್ಮಣ್ ಹೇಳಿದರು.

ಜಿಲ್ಲಾ ಕೃಷಿ ಸಂಶೋಧನ ಕೇಂದ್ರ ಮತ್ತು ತಾಲೂಕು ಕೃಷಿ ಇಲಾಖೆಯಿಂದ ಹುಲ್ಲೇಹಳ್ಳಿ ಗ್ರಾಪಂ ಆವರಣದಲ್ಲಿ ರೈತರಿಗೆ ಆಯೋಜಿಸಿದ್ದ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ, ಎಣ್ಣೆ ಕಾಳು ಯೋಜನೆ ಮತ್ತು ರೈತರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಖಾದ್ಯ ತೈಲದ ನಿವ್ವಳ ಆಮದುದಾರರಾದ ಭಾರತ ತನ್ನ ಒಟ್ಟು ಖಾದ್ಯ ತೈಲದ ಶೇ. 57 ರಷ್ಟು ಆಮದು ಮಾಡಿಕೊಳ್ಳುವುದರೊಂದಿಗೆ ಗಮನಾರ್ಹ ಸವಾಲು ಎದುರಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಯವರು ತೈಲ ಆಮದುಕೊಳ್ಳದೆ ದೇಶದ ರೈತರೇ ಉತ್ಪಾದಿಸಿದರೆ ಇದರ ಬೆಲೆ ಏರಿಕೆ ಕಡಿಮೆ ಮಾಡುವ ಆಲೋಚನೆಯಿಂದ ಈ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.

ಜಿಲ್ಲಾ ಸಂಪನ್ಮೂಲ ವ್ಯಕ್ತಿ ರಾಮಚಂದ್ರಪ್ಪ ಮಾತನಾಡಿ, ಎಣ್ಣೆ ಕಾಳುಗಳಲ್ಲಿ ಪೋಷಕಾಂಶ ಹಾಗೂ ಸಮಗ್ರ ಕೀಟ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದ ಅವರು ಮಾಹಿತಿಗೆ ಕೃಷಿ ಇಲಾಖೆ ಸಂಪರ್ಕಿಸಿ ಎಂದರು.

ಸಂಪನ್ಮೂಲ ವ್ಯಕ್ತಿ ನಟರಾಜ್ ಮಾತನಾಡಿ, ಮಳೆಗಾಲದಲ್ಲಿ ಬದು ನಿರ್ಮಾಣ, ಮಳೆ ನೀರು ಕೊಯ್ಲು, ಅಡಕೆ ಬೆಳೆಯಲ್ಲಿ ಲಘು ಫೋಷಕಾಂಶ , ಮಿಶ್ರ ಅಳವಡಿಕೆ ಮತ್ತು ನೀರಿನ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷ ರುದ್ರಪ್ಪ ಮಾತನಾಡಿ, ಕೃಷಿ ಇಲಾಖೆಯಿಂದ ತರಬೇತಿ ಪಡೆದ ರೈತರು ತಮ್ಮ ವ್ಯವಸಾಯದಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು. ಕೃಷಿ ಇಲಾಖೆಯ ಸಲಹೆ ಸಹಕಾರ ಪಡೆದು ಉತ್ತಮ ಬೆಳೆ ಬೆಳೆಯಬೇಕೆಂದರು.

ಲಿಂಗದಹಳ್ಳಿ ಸಹಾಯಕ ಕೃಷಿ ನಿರ್ದೇಶಕಿ ಉಷಾ, ಕೃಷಿ ಅಧಿಕಾರಿಗಳಾದ ವಿನುತಾ, ಸೋಮಲಿಂಗಪ್ಪ, ಮಾಜಿ ಅಧ್ಯಕ್ಷ ಮೂರ್ತಿ, ಗ್ರಾಮಸ್ಥರಾದ ಮಹಾಲಿಂಗಪ್ಪ , ರಾಮಪ್ಪ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.

30 ಬೀರೂರು 2

ಬೀರೂರು ಹೋಬಳಿ ಹುಲ್ಲೇಹಳ್ಳಿ ಗ್ರಾಪಂ ಆವರಣದಲ್ಲಿ ರೈತರಿಗೆ ಆಯೋಜಿಸಿದ್ದ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ, ಎಣ್ಣೆ ಕಾಳು ಯೋಜನೆ ಮತ್ತು ರೈತರ ತರಬೇತಿ ಕಾರ್ಯಕ್ರಮವನ್ನು ಗ್ರಾಪಂ ಉಪಾಧ್ಯಕ್ಷ ಲಕ್ಷ್ಮಣ್ ಉದ್ಘಾಟಿಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?