ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಚಿನ ಕೆಲ ತಿಂಗಳಿಂದ ಜಿಲ್ಲೆಯಲ್ಲಿ ಮೈಕ್ರೋಪೈನಾನ್ಸ್ ಕಂಪನಿಗಳ ಕಾಟ ಮಿತಿಮೀರಿದ್ದು, ಇವರಿಂದ ಸಾಲತೆಗೆದುಕೊಂಡ ಫಲಾನುಭವಿಗಳು ತೀವ್ರಸಂಕಷ್ಟಕ್ಕೆ ಸಿಲುಕಿದ್ದಾರೆ. ಇಎಂಐ ಕಟ್ಟುವುದು ತಡವಾದರೆ ಮನೆಯಲ್ಲಿದ್ದ ವಸ್ತುಗಳನ್ನು ಹೊರಹಾಕಿ, ಮನೆಗೆ ಬೀಗ ಜಡಿಯುವ ಬೆದರಿಕೆವೊಡ್ಡುತ್ತಾರೆ ಎಂದು ಆರೋಪಿಸಿದರು.
ಇದಕ್ಕೆ ಪೂರಕವೆಂಬಂತೆ ಚಾಮರಾಜನಗರ ತಾಲ್ಲೂಕಿನ ಕಲ್ಪುರ ಗ್ರಾಮದ ಮಂಗಳಮ್ಮ ಎಂಬವರು ೨೦೧೮ ರಲ್ಲಿ ಬಸವ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣ ಮಾಡುವ ಸಂಬಂಧ ತುರ್ತು ಹಣಕಾಸಿನ ಅವಶ್ಯಕತೆಯಿಂದ ೨೦೧೯ ಏ.೩೦ರಂದು ಈಕ್ವಿಟಾಸ್ ಫೈನಾನ್ಸ್ ಕಂಪನಿಯಿಂದ ಗೃಹ ಸಾಲವಾಗಿ ೨.೨೯ ಲಕ್ಷ ರು.ಸಾಲಪಡೆದಿದ್ದು,ಅವರು ೬೦ ಕಂತುಗಳಲ್ಲಿ ಪ್ರತಿ ತಿಂಗಳು ೬೪೬೦ ರು. ಸಾಲದ ಖಾತೆಗೆ ಕಟ್ಟುತ್ತಾ ಬಂದಿದ್ದು, ಅದರಂತೆ ಅವರು ಸಾಲದ ಕಂತು ೪೭ ಕಂತು ಕಟ್ಟಿದ್ದು, ಉಳಿಕೆ ೧೩ ಕಂತು ಬಾಕಿ ಉಳಿದಿತ್ತು. ಕೊರೋನಾ ಸಂದರ್ಭದಲ್ಲಿ ಸರ್ಕಾರವು ಕೆಲವು ಕಂತುಗಳನ್ನು ಮುಂದೂಡಿ ರಿಯಾಯಿತಿ ನೀಡಿದೆ. ೨೦೨೧ರಲ್ಲಿ ಬಾಕಿ ಉಳಿಸಿಕೊಂಡಿದ್ದ ಕಂತುಗಳನ್ನು ಕಟ್ಟಿದ್ದಾರೆ. ಹಣ ಸಿಗದ ಕಾರಣ ೮ ಕಂತುಗಳನ್ನು ಕಟ್ಟಿರುವುದಿಲ್ಲ. ಕಂಪನಿ ಸಿಬ್ಬಂದಿ ಸಾಲತೆಗೆದುಕೊಂಡವರ ಅನುಮತಿಯಿಲ್ಲದೆ ಹೆಚ್ಚುವರಿ ೩೨ ಕಂತುಗಳನ್ನು ತುಂಬುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದರು.
ಈಕ್ವಿಟಾಸ್ ಫೈನಾನ್ಸ್ ಕಂಪನಿಯ ವ್ಯವಸ್ಥಾಪಕರಾದ ಮೋಹನ್ ಗೌಡ, ವೇಣುಗೋಪಾಲ್ ಅವರನ್ನು ಸ್ಥಳಕ್ಕೆ ಕರೆಸಿ, ಸಮಸ್ಯೆಗೆ ಪರಿಹಾರ ಒದಗಿಸಬೇಕು. ಅ.೧೪ರಂದು ನಗರದಲ್ಲಿ ನಡೆಯಲಿರುವ ಅನಿರ್ಧೀಷ್ಠಾವಧಿ ಧರಣಿಯಲ್ಲಿ ಮೈಕ್ರೋ ಖಾಸಗಿ ಹಣಕಾಸು ಕಂಪನಿಗಳಿಂದ ಸಾಲತೆಗೆದುಕೊಂಡು, ತೊಂದರೆ ಎದುರಿಸುತ್ತಿರುವ ಫಲಾನುಭವಿಗಳು, ರೈತರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.