ಕಳಪೆ ಮೆಣಸಿನಕಾಯಿ ಬೀಜ ಮಾರಾಟ: ಮೂರನೇ ದಿನಕ್ಕೆ ರೈತರ ಪ್ರತಿಭಟನೆ

KannadaprabhaNewsNetwork |  
Published : Apr 30, 2025, 12:32 AM IST
ಮ | Kannada Prabha

ಸಾರಾಂಶ

ಗಿಡಗಳು ಬೆಳೆದರೂ ಅದರಲ್ಲಿ ಮೆಣಸಿನಕಾಯಿ ಬಿಡದಿರುವ ಕುರಿತು ನಿಖರವಾದ ಕಾರಣಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಹೀಗಾಗಿ ಹನುಮನಮಟ್ಟಿ ಕಾಲೇಜು ಹಾಗೂ ಧಾರವಾಡದಿಂದ ಕೃಷಿ ವಿವಿಗಳಿಂದ ವಿಜ್ಞಾನಿಗಳ ತಂಡವನ್ನು ಕರೆಸಲು ಕ್ರಮ ಕೈಗೊಳ್ಳಲಾಗುವುದು.

ಬ್ಯಾಡಗಿ: ಹೈದ್ರಾಬಾದ್ ಮೂಲದ ಡಿಸಿಎಸ್(ಧಾನ್ಯಕ್ರಾಪ್ ಮತ್ತು ಸನ್ಸ್ ಪ್ರೈ. ಲಿ.) ಕಳಪೆ ಮೆಣಸಿನಕಾಯಿ ಬೀಜ ಮಾರಾಟದ ವಿರುದ್ಧ ಪಟ್ಟಣದ ವಿನಾಯಕ ಆಗ್ರೋ ಸೆಂಟರ್‌ಗೆ ಬೀಗ ಜಡಿದು ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ನಡೆ ಸುತ್ತಿರುವ ಹೋರಾಟ ಎರಡನೇ ದಿವಸ ಯಾವುದೇ ಫಲಪ್ರದ ಕಾಣದೇ ಮೂರನೇ ದಿನಕ್ಕೆ ಕಾಲಿಟ್ಟಿದೆ.ಬಿತ್ತನೆ ಮಾಡಿ 4 ತಿಂಗಳು ಗತಿಸಿದರೂ ಗಿಡಗಳಲ್ಲಿ ಮೆಣಸಿನಕಾಯಿ ಬಿಡದ ಹಿನ್ನೆಲೆ ಆಕ್ರೋಶಗೊಂಡ ತಾಲೂಕಿನ ಬಡಮಲ್ಲಿ, ಹಿರೇಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೈತರು ರಾಜ್ಯ ರೈತ ಸಂಘದ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಪಟ್ಟಣದ ವಿನಾಯಕ ಆಗ್ರೋ ಸೆಂಟರಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.ಸ್ಥಳಕ್ಕೆ ಕೃಷಿ ಅಧಿಕಾರಿಗಳ ತಂಡ: ಪ್ರತಿಭಟನಾ ಸ್ಥಳಕ್ಕೆ ದೌಡಾಯಿಸಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಿರ್ದೇಶಕ(ವಿಚಕ್ಷಣಾ ದಳ) ಶಿವಲಿಂಗಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗಣೇಶ ಕಮ್ಮಾರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಕುರುಬರ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಶಿವರಾಜ ಮುದಿಗೌಡ್ರ, ಕಾರ್ತಿಕ ಪಾಟೀಲ ಸೇರಿದಂತೆ ಇತರರು ಭೇಟಿ ನೀಡಿದರು.ಕೃಷಿ ಇಲಾಖೆಯ ವಿಚಕ್ಷಣಾ ದಳದ ಶಿವಲಿಂಗಪ್ಪ ಮಾತನಾಡಿ, ಗಿಡಗಳು ಬೆಳೆದರೂ ಅದರಲ್ಲಿ ಮೆಣಸಿನಕಾಯಿ ಬಿಡದಿರುವ ಕುರಿತು ನಿಖರವಾದ ಕಾರಣಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಹೀಗಾಗಿ ಹನುಮನಮಟ್ಟಿ ಕಾಲೇಜು ಹಾಗೂ ಧಾರವಾಡದಿಂದ ಕೃಷಿ ವಿವಿಗಳಿಂದ ವಿಜ್ಞಾನಿಗಳ ತಂಡವನ್ನು ಕರೆಸಲು ಕ್ರಮ ಕೈಗೊಳ್ಳಲಾಗುವುದು. ಶುಕ್ರವಾರ ತಂಡವು ರೈತರ ಹೊಲಗಳಿಗೆ ಭೇಟಿ ನೀಡಲಿದೆ ಎಂದರು.ರೈತರು ಆಕ್ರೋಶಕ್ಕೆ ಬೆದರಿದ ಆಗ್ರೋ ಸೆಂಟರ್ ಮಾಲೀಕ ಮಂಜುನಾಥ ಬಿದರಿ ನಾಪತ್ತೆಯಾಗಿದ್ದಾರೆ.ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡ ಗಂಗಣ್ಣ ಎಲಿ, ನಾಗರಾಜ ಬನ್ನಿಹಳ್ಳಿ, ಮಾರುತಿ ಅಗಸಿಬಾಗಿಲ, ಅಶೋಕಗೌಡ ಹೊಂಡದಗೌಡ್ರ, ಮಲ್ಲೆಶಪ್ಪ ಗೌರಾಪುರ, ಪರಶಪ್ಪ ಪರವತ್ತೇರ, ಯಲ್ಲಪ್ಪ ಓಲೇಕಾರ, ಶಂಕ್ರಣ್ಣ ದೇಸಾಯಿ, ಚಂದ್ರಶೇಖರ ತೋಟದ, ಮಂಜು ಗೌರಾಪುರ, ಶಂಭಣ್ಣ ತಿಳವಳ್ಳಿ, ಪರಮೇಶಪ್ಪ ಮೂಡೇರ, ಮಂಜಪ್ಪ ದಿಡ್ಗೂರು, ಜಯಪ್ಪ ದಿಡ್ಗೂರು, ಚಂದ್ರಪ್ಪ ಶೇಳೂರು, ಕಾಂತೇಶ ಅಗಸಿಬಾಗಿಲ, ಮಾಲತೇಶ ಲಕ್ಕಮ್ಮನರ, ಪಕ್ಕೀರಪ್ಪ ದಿಡ್ಗೂರು, ಶಿವರುದ್ರಪ್ಪ ಮೂಡೇರ ಇತರರು ಪಾಲ್ಗೊಂಡಿದ್ದರು.ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಗಳು ಸಹಕಾರಿ

ಹಿರೇಕೆರೂರು: ಕ್ರೀಡೆಯಿಂದ ಸದೃಢ ದೇಹ, ಮನಸ್ಸು ನಿರ್ಮಲವಾಗುವುದಲ್ಲದೇ ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಗಳು ಸಹಕಾರಿಯಾಗಿವೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆರ್.ಎನ್. ಗಂಗೋಳ ತಿಳಿಸಿದರು.

ತಾಲೂಕಿನ ಆಲದಗೇರಿ ಗ್ರಾಮದಲ್ಲಿ ಆದಿಶಕ್ತಿ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.ಯುವ ಜನತೆ ಕ್ರೀಡೆಗಳ ಮಹತ್ವ ಅರಿತು ಕ್ರೀಡಾಕೂಟಗಳನ್ನು ಆಯೋಜಿಸಿವ ಮೂಲಕ ಕ್ರೀಡೆಗಳನ್ನು ಅಭಿವೃದ್ಧಿಪಡಿಸುವ ಮನೋಭಾವ ಬೆಳಸಿಕೊಳ್ಳಬೇಕು. ಕ್ರೀಡೆಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಮಂಜುನಾಥ ಚಲವಾದಿ, ದೇಶದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಕೊರತೆ ಇಲ್ಲ. ಅವರಿಗೆ ಅವಕಾಶಗಳನ್ನು ಕಲ್ಪಿಸಿ ಕೊಡುವುದು ಅವಶ್ಯಕವಾಗಿದೆ ಎಂದರು.ಬಿಜೆಪಿ ಮಂಡಲ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಗ್ರಾಪಂ ಸದಸ್ಯ ಕುಬೇರಪ್ಪ ಗೌಡರ, ಮಂಜುನಾಥ ಯಡಚಿ, ರವಿ ಬಂಗೇರ, ರಮೇಶ್ ಬೆನಕನಕೊಂಡ, ಪ್ರವೀಣ್ ಬಂಗೇರ, ಭಾಷಾ ಬಡಿಗೇರ್, ಹುಚ್ಚಪ್ಪ ಗೋಣೇರ, ಸುರೇಶ್ ಭೂತನವರ, ಭರಮಪ್ಪ ಮಾಳಗೇರ, ಬಸವರಾಜ ಹೆಡೆಯಾಲ, ಧರ್ಮಪ್ಪ ಬಾರ್ಕಿ, ರಮೇಶ್ ಮೋದೂರ, ಸಂಜೀವ್ ಹೆಡಿಯಾಲ, ಮೊದಿನ್ಸ್ ಕಡೂರ, ಕುಮಾರ ಮಾಸಣಗಿ, ಮಂಜುನಾಥ್ ಬಳ್ಳಾರಿ, ಅನಿಲ ಮಡಿವಾಳರ, ಗಣೇಶ ದ್ಯಾಮಕ್ಕನವರ, ವಿಜಯ ಬಂಗೇರ, ಸುರೇಶ ದ್ಯಾಮಕ್ಕನವರ, ಚಂದ್ರು ಕಜ್ಜರಿ, ನಾಗರಾಜ ದ್ಯಾಮಕ್ಕನವರ ಆದಿಶಕ್ತಿ ಗೆಳೆಯರ ಬಳಗದ ಸದಸ್ಯರು ಇದ್ದರು.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್