ಕನ್ನಡಪ್ರಭ ವಾರ್ತೆ ಗುಬ್ಬಿ
ಜಿಲ್ಲೆಯ ಜನಪ್ರತಿನಿಧಿಗಳು ಇದರ ಬಗ್ಗೆ ಎಚ್ಚೆತ್ತುಕೊಳ್ಳದೆ ಹೋದರೆ ಮುಂದಿನ ದಿನದಲ್ಲಿ ದೊಡ್ಡ ಪಾಠವನ್ನು ನಾವು ಕಲಿಸಬೇಕಾಗುತ್ತದೆ ಕೇವಲ ಡಿ.ಕೆ .ಶಿವಕುಮಾರ್ ಅವರಿಗೋಸ್ಕರ ಜಿಲ್ಲೆಯ ಸಚಿವರುಗಳು ಶಾಸಕರುಗಳು ಸುಮ್ಮನಾದರೆ ಇಡೀ ಜಿಲ್ಲೆಯೇ ಮುಂದಿನ ದಿನದಲ್ಲಿ ನೀರಾವರಿ ಇಲ್ಲದೆ ಮರುಭೂಮಿಯಾಗಿ ನಿರ್ಮಾಣವಾಗುತ್ತದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೋವಿಂದರಾಜು ತಿಳಿಸಿದರು. ಸೋಮವಾರ ಕರೆದಿರುವಂತಹ ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಮುಖಂಡರುಗಳು ರಾಜಕೀಯ ಜನಪ್ರತಿನಿಧಿಗಳು ಆಗಮಿಸಿ ಬೃಹತ್ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಮನವಿಯನ್ನ ಮಾಡಿದ್ದಾರೆ.
ತಾಲೂಕು ಅಧ್ಯಕ್ಷ ವೆಂಕಟೇಗೌಡ ಮಾತನಾಡಿ ಡಿ.ಕೆ.ಶಿವಕುಮಾರ್ ಅವರ ಅಧಿಕಾರ ಶಾಶ್ವತವಲ್ಲ ಎಂದು ಅವರು ತಿಳಿದುಕೊಳ್ಳುವುದು ಉತ್ತಮ ಜಿಲ್ಲೆಗೆ ಮರಣ ಶಾಸನ ಮಾಡಲು ಹೊರಟಿರುವಂತಹ ಯೋಜನೆಯನ್ನು ಕೈ ಬಿಡದೆ ಹೋದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವುದಂತೂ ಸತ್ಯ ಎಂದು ತಿಳಿಸಿದರು.