ಬಿಡದಿ ಟೌನ್‌ಶಿಪ್ ಪರ ರೈತರಿಂದ ಪ್ರತಿಭಟನೆ

KannadaprabhaNewsNetwork |  
Published : Aug 19, 2026, 01:15 AM IST
4.ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ರೈತರು ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಎರಡು ಗ್ರಾಮಗಳ ಭೂ ಸ್ವಾಧೀನ ಸಂಬಂಧ ಅಂತಿಮ ಅಧಿಸೂಚನೆಯನ್ನು ತಕ್ಷಣವೇ ಹೊರಡಿಸುವಂತೆ ಒತ್ತಾಯಿಸಿ ಬೈರಮಂಗಲ ಭಾಗದ ರೈತರು ಮತ್ತು ಸ್ಥಳೀಯ ಮುಖಂಡರು ರಾಜ್ಯಸರ್ಕಾರ ಹಾಗೂ ಜಿಬಿಡಿಎ ವಿರುದ್ಧ ಪ್ರತಿಭಟನೆ ನಡೆಸಿದರು

ರಾಮನಗರ: ಬಿಡದಿ ಟೌನ್‌ಶಿಪ್ ಯೋಜನೆ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಎರಡು ಗ್ರಾಮಗಳ ಭೂ ಸ್ವಾಧೀನ ಸಂಬಂಧ ಅಂತಿಮ ಅಧಿಸೂಚನೆಯನ್ನು ತಕ್ಷಣವೇ ಹೊರಡಿಸುವಂತೆ ಒತ್ತಾಯಿಸಿ ಬೈರಮಂಗಲ ಭಾಗದ ರೈತರು ಮತ್ತು ಸ್ಥಳೀಯ ಮುಖಂಡರು ರಾಜ್ಯಸರ್ಕಾರ ಹಾಗೂ ಜಿಬಿಡಿಎ ವಿರುದ್ಧ ಪ್ರತಿಭಟನೆ ನಡೆಸಿದರು.

ನಗರದ ಕಂದಾಯ ಭವನದ ಜಿಬಿಡಿಎ ಕಚೇರಿ ಮುಂದೆ ಮಂಗಳವಾರ ಧರಣಿ ನಡೆಸಿದ ರೈತರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮಗಳಲ್ಲಿ ಜಿಬಿಐಟಿ ಯೋಜನೆಗಾಗಿ ಕೈಗೊಳ್ಳುತ್ತಿರುವ ಭೂಸ್ವಾಧೀನ ಪ್ರಕ್ರಿಯೆಗೆ ರೈತರು ಮತ್ತು ಭೂಮಾಲೀಕರು ತಮ್ಮ ಬೆಂಬಲ ಸೂಚಿಸಿದ್ದು, ಇದೇ ವೇಳೆ ಭೂಸ್ವಾಧೀನ ಪ್ರಕ್ರಿಯೆಯನ್ನು ನ್ಯಾಯಯುತವಾಗಿ ಪೂರ್ಣಗೊಳಿಸಿ ವಿಳಂಬವಾಗಿರುವ ಪರಿಹಾರ ಧನವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಬಿಡದಿ‌ ಸಮಗ್ರ ಉಪನಗರ ಯೋಜನೆ ಸಂಬಂಧ ಒಟ್ಟು 9 ಕಂದಾಯ ಗ್ರಾಮಗಳ ಪೈಕಿ 7 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಉಳಿದಿರುವ 2 ಗ್ರಾಮಗಳ ಅಧಿಸೂಚನೆ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಇದರಿಂದಾಗಿ ಸ್ಥಳೀಯ ರೈತರು ಹಾಗೂ ಜಮೀನು ಮಾಲೀಕರು ಆತಂಕ ಮತ್ತು ಅನಿಶ್ಚಿತತೆ ಎದುರಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ತಾಪಂ ಮಾಜಿ ಸದಸ್ಯ ಹೊಸೂರು ರಾಜಣ್ಣ ಮಾತನಾಡಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಸರ್ಕಾರದ ವಿಳಂಬ ನೀತಿಯಿಂದಾಗಿ ಭೂಮಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ಮಧ್ಯಪ್ರವೇಶಿಸಿ, ಬಾಕಿ ಉಳಿದಿರುವ ಎರಡು ಗ್ರಾಮಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಬೇಕು. ಒಂದು ವೇಳೆ ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ರೈತ ಹೊಸೂರು ಸಿದ್ದರಾಜು ಮಾತನಾಡಿ, ಬೈರಮಂಗಲ-ಕಂಚುಗಾರನಹಳ್ಳಿ ಎರಡು ಗ್ರಾಮಗಳಿಗೂ ಅಂತಿಮ ಅಧಿಸೂಚನೆ ಹೊರಡಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವಿ ಮಾಡಿದ್ದೇವೆ. ಅಂತಿಮ ಅಧಿಸೂಚನೆ ವಿಳಂಬವಾದರೆ ಆ ಭಾಗದ ರೈತರಿಗೆ ನಷ್ಟ ಆಗಲಿದೆ. ಕೂಡಲೇ ಸರ್ಕಾರ ಯೋಜನೆ ಮುಗಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಅಧಿಸೂಚನೆ ವಿಳಂಬ ಮಾಡಿದರೆ ಪರಿಹಾರ ದರ ಹೆಚ್ಚಿಸಬೇಕೆಂದು ಒತ್ತಾಯಿಸಿದರು.

ಸರ್ಕಾರಿ ''''''''ಪಿ ನಂಬರ್'''''''' ಜಮೀನುಗಳಲ್ಲಿ 15ರಿಂದ 60 ವರ್ಷಗಳಿಂದ ಆರ್‌ಟಿಸಿ ಖಾತೆದಾರರಾಗಿ ವ್ಯವಸಾಯ ಮಾಡಿಕೊಂಡು ಬಂದಿರುವ ಭೂಮಾಲೀಕರಿಗೆ ಪರಿಹಾರ ಧನ ತಲುಪುವುದು ವಿಳಂಬ ಆಗುತ್ತಿರುವುದನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಈ ಸಂಬಂಧ ಅಗತ್ಯ ದಾಖಲೆ ಮತ್ತು ಅರ್ಜಿಗಳನ್ನು ಈಗಾಗಲೇ ಜಿಬಿಡಿಎಗೆ ಸಲ್ಲಿಸಲಾಗಿದ್ದು, ಅಧಿಕಾರಿಗಳು ಸ್ಥಳ ಪರಿಶೀಲಿಸಿ ಜಮೀನಿನ ಅನುಭವವನ್ನು ಖಾತರಿಪಡಿಸಿಕೊಂಡು, ಭೂಸ್ವಾಧೀನದ ಮೊದಲ ಮತ್ತು ಕೊನೆ ಹಂತದ ನೋಟಿಸ್‌ಗಳನ್ನು ಪರಿಗಣಿಸಿ ಬಾಕಿ ಪರಿಹಾರ ಧನವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭೂ ಮಾಲೀಕರಾದ ಕೃಷ್ಣಮೂರ್ತಿ, ಅಂಚಿಪುರ ಶೇಖರ್ , ಭರತ್ , ರಾಧಾಕೃಷ್ಣ, ಗೌತಮ್,

ತಾಯಪ್ಪನದೊಡ್ಡಿ ಸ್ವಾಮಿ, ಚೇತನ್ , ರಾಮಾಂಜನಿ, ಶಿವಕುಮಾರ್, ನಾಗೇಶ್ ಮತ್ತಿತರರು ಭಾಗವಹಿಸಿದ್ದರು.

(ಒಂದು ಫೋಟೋ ಸುದ್ದಿ ಜತೆಗೆ)

18ಕೆಆರ್ ಎಂಎನ್ 4,5.ಜೆಪಿಜಿ

4. ಕಂದಾಯ ಭವನದ ಜಿಬಿಡಿಎ ಕಚೇರಿ ಮುಂದೆ ಧರಣಿ ನಡೆಸಿದ ರೈತರು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರಿಗೆ ಮನವಿ ಸಲ್ಲಿಸಿದರು.

(ಈ ಫೋಟೋ ಪ್ಯಾನಲ್‌ನಲ್ಲಿ ಬಳಸಿ ಸರ್‌)

ರಾಮನಗರದ ಕಂದಾಯ ಭವನದಲ್ಲಿರುವ ಜಿಬಿಡಿಎ ಕಚೇರಿ ಎದುರು ಬಿಡದಿ ಟೌನ್‌ಶಿಪ್ ಯೋಜನೆಯ ಬಾಕಿ ಉಳಿದಿರುವ ಎರಡು ಗ್ರಾಮಗಳ ಭೂ ಸ್ವಾಧೀನ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಿ ಬೈರಮಂಗಲ ಭಾಗದ ರೈತರು ಜಿಬಿಡಿಎ ವಿರುದ್ಧ ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಕವೀರರಾಗದೆ ಕೌಶಲ್ಯವಂತರಾಗಿ ಬೆಳವಣಿಗೆ ಸಾಧಿಸಿ: ಪ್ರೊ.ಕೆ.ಶಿವಚಿತ್ತಪ್ಪ
ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹ