ಕನ್ನಡಪ್ರಭ ವಾರ್ತೆ ಇಂಡಿ
ಝಳಕಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸೇತುವೆ ಬಳಿ ನಡೆದ ಪ್ರತಿಭಟನೆಯಲ್ಲಿ ರೈತರು ಎತ್ತಿನ ಗಾಡಿಗಳೊಂದಿಗೆ ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಶಾಸಕ ರವಿಕಾಂತ ಪಾಟೀಲ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ರಾಘವೇಂದ್ರ ಕಾಪಸೆ, ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ ಮಾತನಾಡಿ, ಇಂಡಿ ತಾಲೂಕಿನಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ರೈತರಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಖಂಡಿಸಿದರು.ರೈತರು ಸಂಕಷ್ಟದಲ್ಲಿರುವ ಹಿನ್ನೆಲೆ ಸರ್ಕಾರ ಕೂಡಲೇ ಇಂಡಿ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ರೈತರ ಸಾಲಮನ್ನಾ ಘೋಷಿಸಬೇಕು, ಪ್ರತಿ ಎಕರೆಗೆ ₹25 ಸಾವಿಪರಿಹಾರ ನೀಡಬೇಕು, ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಗೋಶಾಲೆಗಳನ್ನು ಆರಂಭಿಸಬೇಕು ಹಾಗೂ ರೈತರಿಗೆ ಬರಬೇಕಾದ ಬೆಳೆ ವಿಮೆ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ನಂತರ ಉಪ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು. ಶೀಲವಂತ ಉಮರಾಣಿ, ಎಂ.ಎಂ.ಎಸ್. ಪಾಟೀಲ, ಮರೇಪ್ಪ ಗಿರಣಿವಡ್ಡರ, ರಾಘವೇಂದ್ರ ಕಾಪಸೆ, ರವಿ ವಗ್ಗೆ, ಅಯೂಬ್ ನಾಟೀಕರ, ಬಾಳು ಮುಳಜಿ, ಗುರುನಾಥ ಬಗಲಿ, ವಿಜಯಕುಮಾರ ಭೋಸಲೆ, ನಾಗನಾಥ ಬಿರಾದಾರ, ಸಿದ್ದು ಡಂಗಾ, ಶಿವಾನಂದ ಅಂಗಡಿ, ದುಂಡು ಬಿರಾದಾ,ರೇವಣಸಿದ್ದ ಗೋಡಕೆ, ಬಾಳು ರಾಠೋಡ, ಮಹೇಶ್ ಹೂಗಾರ, ಭೀಮನಗೌಡ ಪಾಟೀಲ, ಗೇನಬಾ ರಾಠೋಡ,ರವಿ ನಾವಿ,ಯಶವಂತ ಕಾಡೆಗೋಳ, ಪ್ರಕಾಶ ಬಿರಾದಾರ,ಅರವೀಂದ ಪೂಜಾರಿ, ಬಸಗೋಂಡ ಪಾಟೀಲ, ಸಂತೋಷ ಬಿರಾದಾರ, ಮಾಳಪ್ಪ ಉಮರಾಣಿ, ಶ್ರೀಮಂತ ಪೂಜಾರಿ, ಸಿದ್ದನಗೌಡ ಬಿರಾದಾರ ಅಶೋಕ ಕಾಪಸೆ, ವಿಕ್ಠಲ ಕಾಗರ, ವಿಠಲ ಮಾವಿನ ಹಳ್ಳಿ, ಬಾಬು ಮೇತ್ರಿ, ನಿಯಾಝ್ ಅಗರಖೇಡ ಫಜಲು ಮುಲ್ಲಾ, ಇರ್ಫಾನ್ ಅಗರಖೇಡ ಸುಭಾಷ . ಚಟರಕಿ,ಮುಂತಾದವರು ಉಪಸ್ಥಿತರಿದ್ದರು.