ರೈತರನ್ನು ನಿತ್ಯ ನೆನೆಯಬೇಕು: ರಾಜೇಂದ್ರ ರಾಜಣ್ಣ

KannadaprabhaNewsNetwork |  
Published : Dec 25, 2024, 12:50 AM IST
ಮಧುಗಿರಿಯ ಕೃಷಿ ಇಲಾಖೆಯಲ್ಲಿ ಏರ್ಪಡಿಸಿದ್ದ ರೈತ ದಿನಾಚಱಣೆ ಕಾರ್ಯಕ್ರಮದಲ್ಲಿ  ಉತ್ತಮ ರೈತರನ್ನು ಎಂಎಲ್‌ಸಿ ಆರ್‌.ರಾಜೇಂದ್ರ ಸನ್ಮಾನಿಸಿದರು.ಅಧಿಕಾರಿ ಹನುಮಂತರಾಯಪ್ಪ ಸೇರಿದಂತೆ ರೈತರು ಇದ್ದಾರೆ.  | Kannada Prabha

ಸಾರಾಂಶ

ರೈತ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೇ ನಿತ್ಯ ಆಚರಿಸುವಂತಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಆರ್‌ .ರಾಜೇಂದ್ರ ರಾಜಣ್ಣ ತಿಳಿಸಿದರು.

ಕನ್ನಡಪ್ರಭವಾರ್ತೆ ಮಧುಗಿರಿ

ರೈತ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೇ ನಿತ್ಯ ಆಚರಿಸುವಂತಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಆರ್‌ .ರಾಜೇಂದ್ರ ರಾಜಣ್ಣ ತಿಳಿಸಿದರು.

ಇಲ್ಲಿನ ಕೃಷಿ ಇಲಾಖೆಯಲ್ಲಿ ಏರ್ಪಡಿಸಿದ್ದ ರೈತ ದಿನಾಚರಣೆ ಮತ್ತು ಮಾಜಿ ಪ್ರಧಾನಿ ಭಾರತ ರತ್ನ ಚೌಧರಿ ಚರಣ್‌ ಸಿಂಗ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತನ ಪರಿಶ್ರಮದಿಂದ ವಿಶ್ವದಾದ್ಯಂತ ಜನ ಆಹಾರ ಸೇವಿಸಿ ಜೀವಿಸುವರು .ರೈತ ಕಷ್ಟ ಪಟ್ಟು ಉತ್ತಿ ಬಿತ್ತಿ ಬೆಳೆದ ಬೆಳೆಗೆ ಸರಿಯಾದ ಧಾರಣೆ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಅದು ಆಗಬಾರದು. ರೈತರ ಬೇಡಿಕೆಗಳು ಈಡೇರಿದಾಗ ಮಾತ್ರ ನಾವುಗಳು ಹಸಿವು ಮುಕ್ತರಾಗಲು ಸಾಧ್ಯ. ಆದರೆ ಸರ್ಕಾರಗಳು ರೈತರಿಗೆ ಅಗತ್ಯವಾದ ಉತ್ತಮ ಗುಣ ಮಟ್ಟದ ಬೀಜ ,ಗೊಬ್ಬರ ದೊರಕುವಂತೆ ಎಚ್ಚರ ವಹಿಸಬೇಕು. ಆಗ ನಿರೀಕ್ಷಿತ ಪ್ರಮಾಣದಲ್ಲಿ ದವಸ ದಾನ್ಯಗಳನ್ನು ಬೆಳೆಯಲು ಸಾಧ್ಯ. ಹಲವು ವರ್ಷಗಳಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ದೆಹಲಿ, ಹರಿಯಾಣ ಗಡಿ ಭಾಗಗಳಲ್ಲಿ ರೈತರು ಹೋರಾಟ ಮಾಡುತ್ತಿದ್ದರೂ ಸಹ ಸರ್ಕಾರಗಳು ಕ್ಯಾರೆ ಏನ್ನುತ್ತಿಲ್ಲ. ಅವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸ್ಪಂದಿಸಬೇಕು .ರೈತರು ಕಣ್ಣೀರು ಸುರಿಸಿದರೆ ಅದು ನಮಗೆ ಸಮಸ್ಯೆಗಳು ಹೆಚ್ಚಾಗುತ್ತವೆ. ಆದ್ದರಿಂದ ರೈತರ ಸಮಸ್ಯೆಗಳನ್ನು ಆಳುವ ಸರ್ಕಾರಗಳು ಅರಿತು ಅವರ ನೆರವಿಗೆ ಧಾವಿಸಬೇಕು ಎಂದರು.

ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಜನರ ಹಸಿವು ನೀಗಿಸುವ ಶಕ್ತಿ ರೈತರಿಗೆ ಮಾತ್ರವಿದೆ. ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ .ರೈತರು ಸಹ ಕಾಲ ಕಾಲಕ್ಕೆ ಸರ್ಕಾರದಿಂದ ದೊರೆಯುವ ಎಲ್ಲ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದೆ ಬಂದು ತಮ್ಮ ಕುಟುಂಬದ ಸುಧಾರಣೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗುವಂತೆ ಸಲಹೆ ನೀಡಿದರು. ತಹಸೀಲ್ದಾರ್ ಶಿರಿನ್ ತಾಜ್‌, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್‌, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಕೆಎಂಎಫ್‌ ನಿರ್ದೇಶಕ ಮೈದನಹಳ್ಳಿ ಕಾಂತರಾಜು ಸೇರಿದಂತೆ ಇತರರು ಇದ್ದರು. ಇದೇ ಸಂದರ್ಭದಲ್ಲಿ ಉತ್ತಮ ರೈತರನ್ನು ಇಲಾಖೆಯಿಂದ ಸನ್ಮಾನಿಸಲಾಯಿತು.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ