ಚುನಾವಣೆಯಲ್ಲಿ ರೈತರೇ ಅಧಿಕಾರಕ್ಕೆ ಬರಲಿ

KannadaprabhaNewsNetwork |  
Published : Dec 24, 2025, 02:45 AM IST
23ಎಚ್‌ಪಿಟಿ5- ಹೊಸಪೇಟೆಯ ಗಾಂಧಿ ವೃತ್ತದಲ್ಲಿ ರೈತರೊಂದಿಗೆ ಮಂಗಳವಾರ ರೈತ ದಿನಾಚರಣೆ ಆಚರಿಸಲಾಯಿತು. | Kannada Prabha

ಸಾರಾಂಶ

ಯಾವುದೇ ಸರ್ಕಾರ ಬಂದಲ್ಲಿ ರೈತರಿಗೆ ಅನಾನುಕೂಲಗಳೇ ಹೆಚ್ಚು.

ಹೊಸಪೇಟೆ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ್ಣ) ವತಿಯಿಂದ ರೈತ ದಿನಾಚರಣೆಯನ್ನು ನಗರದ ಗಾಂಧಿ ವೃತ್ತದಲ್ಲಿ ರೈತರೊಂದಿಗೆ ಮಂಗಳವಾರ ಆಚರಿಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ನಾಗರಾಜ್ ಅವರು ಮಾತನಾಡಿ, ಚೌಧರಿ ಚರಣ್ ಸಿಂಗ್ ಅವರು ಹುಟ್ಟಿದ ದಿನದಂದು ರೈತರ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಯಾವುದೇ ಸರ್ಕಾರ ಬಂದಲ್ಲಿ ರೈತರಿಗೆ ಅನಾನುಕೂಲಗಳೇ ಹೆಚ್ಚು. ರೈತರ ಪರವಾಗಿ ನಿಷ್ಠೆಯಿಂದ ಕೆಲಸ ಮಾಡುವುದು ಬಹಳಷ್ಟು ಕಡಿಮೆ. ಮುಂದಿನ 2028ರ ಚುನಾವಣೆಯಲ್ಲಿ ರೈತರೇ ಅಧಿಕಾರಕ್ಕೆ ಬಂದಲ್ಲಿ ರೈತರಿಗೆ ಆಗುವ ತೊಂದರೆಗಳನ್ನು ತಪ್ಪಿಸಬಹುದು ಮತ್ತು ಸ್ಥಳೀಯ ಸಕ್ಕರೆ ಕಾರ್ಖಾನೆಯು 9 ವರ್ಷಗಳಿಂದ ಮುಚ್ಚಿದ್ದು, ಶಾಸಕರು, ಸಚಿವರು ಮತ್ತು ಮುಖ್ಯಮಂತ್ರಿಯವರಿಗೂ ಬಹಳಷ್ಟು ಬಾರಿ ಮನವಿ ಪತ್ರ ಸಲ್ಲಿಸಿದರೂ ಇಲ್ಲಿಯವರೆಗೂ ಯಾವುದೇ ಪ್ರಯೋಜನೆ ಆಗಿರುವುದಿಲ್ಲ. ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎಂದು ಒತ್ತಾಯಿಸಿದರು.ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ ಮಾತನಾಡಿ ಚೌಧರಿ ಚರಣ್ ಸಿಂಗ್ ಐದನೇ ಪ್ರಧಾನ ಮಂತ್ರಿಯಾಗಿ ರೈತರ ಪರವಾಗಿ ಅನೇಕ ರೀತಿಯ ಸೌಕರ್ಯಗಳನ್ನು ಕಲ್ಪಿಸಿದ್ದರು. ಕೃಷಿಯಲ್ಲಿ ತುಂಬಾ ಬದಲಾವಣೆ ತರುವಲ್ಲಿ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಕೃಷಿಜಮೀನ್‌ದಾರ್ ಪದ್ದತಿ ಮತ್ತು ಜೀತದಾಳು ಪದ್ದತಿಯನ್ನು ಹೋಗಲಾಡಿಸುವುದರಲ್ಲಿ ಯಶಸ್ಸನ್ನು ಕಂಡವರು. ಇವರು ಮೂಲತಃ ರೈತ ಕುಟುಂಬದಿಂದ ಬಂದವರಾಗಿದ್ದರು ಎಂದರು.ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಜಡಿಯಪ್ಪ ಮಾತನಾಡಿ, ತಾಲೂಕು ಪಂಚಾಯಿತಿಯಲ್ಲಿ ಬರುವಂತಹ ರೈತರಿಗೆ ಸರ್ಕಾರಿ ಸೌಲಭ್ಯಗಳ ಯಾವುದೇ ಮಾಹಿತಿ ಇಲ್ಲದೇ ಕೊರಗುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಪಿ.ಡಿ.ಓ. ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಬೇಕು. ತೋಟಗಾರಿಕೆ ಇಲಾಖೆಯಲ್ಲಿ ಬರುವಂತಹ ಸರ್ಕಾರದ ಸವಲತ್ತುಗಳನ್ನು ರೈತರಿಗೆ ಸಮಪರ್ಕಕವಾಗಿ ನೀಡಬೇಕು ಎಂದರು.ಸಂಘದ ರಾಜ್ಯ ಉಪಾಧ್ಯಕ್ಷರಾದ ಖಾಜಾ ನಿಯಾಜ್, ಜಹಿರುದ್ದೀನ್, ಪದಾಧಿಕಾರಿಗಳಾದ ಟಿ.ನಾಗರಾಜ, ಸಣ್ಣಕ್ಕಿ ರುದ್ರಪ್ಪ, ಎಂ.ಜಡಿಯಪ್ಪ, ಆರ್.ಆರ್.ತಾಯಪ್ಪ, ವಿ.ಗಾಳೆಪ್ಪ, ಅಂಕ್ಲೇಶ್, ಬಸವರಾಜ, ಸುರೇಶ, ವೀರೇಶ್, ರಾಮಾಂಜಿನಿ, ಪಿ.ಕೆ.ಹಳ್ಳಿ ರಾಜಶೇಖರ, ಭುವನಹಳ್ಳಿ ಗೋವಿಂದಪ್ಪ ಮತ್ತು ಅಧಿಕಾರಿಗಳಾದ ದಯಾನಂದ ಎ.ಇ.ಇ, ಕೃಷಿ ಸಹಾಯಕ ನಿರ್ದೇಶಕರು ಮನೋಹರ್ ಗೌಡ, ತೋಟಗಾರಿಕೆ ಸಹಾಯಕ ನಿರ್ದೇಶಕ ರಮೇಶ್, ತಾಪಂ ಇಒ ಅಲಂ ಬಾಷಾ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ